Neer Dose Karnataka
Take a fresh look at your lifestyle.

ವಿಡಿಯೋ: ಸರ್ಕಾರೀ ನಿವಾಸ ಅಲ್ಲ, ರೋಹಿಣಿ ರವರ ವೈಯಕ್ತಿಕ ನಿವಾಸವನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಇಷ್ಟೊಂದು ದಿನ ನೀವೆಲ್ಲಾ ಪರದೆ ಮೇಲೆ ಕಾಣಿಸುವ ಹೀರೋ ಹಾಗೂ ಹೀರೋಯಿನ್ ಗಳ ಬಗ್ಗೆ ನಮ್ಮಲ್ಲಿ ತಿಳಿದುಕೊಂಡಿರುತ್ತೀರಿ ಆದರೆ ನಾವು ಇಂದು ಹೇಳಲು ಹೊರಟಿರೋದು ನಿಜಜೀವನದ ನಾಯಕಿಯ ಕುರಿತಂತೆ. ಹೌದು ಸ್ನೇಹಿತರೆ ನಾವು ಇಂದು ಹೇಳಲು ಹೊರಟಿರುವುದು ಇತ್ತೀಚಿನ ದಿನಗಳಲ್ಲಿ ಸುದ್ದಿಮಾಧ್ಯಮಗಳಲ್ಲಿ ನೀವು ಇವರ ಹೆಸರನ್ನು ಖಂಡಿತವಾಗಿ ಕೇಳಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದ್ದ ಅಧಿಕಾರಿಯೊಬ್ಬರ ಕುರಿತಂತೆ ನಾವು ಇವತ್ತು ಹೇಳಲು ಹೊರಟಿರುವುದು.

ಹೌದು ಸ್ನೇಹಿತರೆ ನಾವು ಹೇಳಲು ಹೊರಟಿರುವುದು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಕಂಡ ಅತ್ಯಂತ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತಂತೆ. ಮೇ31 1984 ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದಂತಹ ರೋಹಿಣಿ ಸಿಂಧೂರಿ ಅವರು ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪೂರೈಸಿದ್ದಾರೆ. ನಂತರ ಜನಸೇವೆ ಮಾಡುವ ನಿಟ್ಟಿನಲ್ಲಿ ಸಿವಿಲ್ ಎಕ್ಸಾಮ್ ನಲ್ಲಿ ಐಎಎಸ್ ಪರೀಕ್ಷೆಯನ್ನು ಬರೆದು 43 ನೇ ರಾಂಕ್ ನ್ನು ಪಡೆದಿದ್ದಾರೆ. ಇನ್ನೂ ರೋಹಿಣಿ ಸಿಂಧೂರಿ ಅವರು 2009 ರ ಬ್ಯಾಚಿನಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಇನ್ನು ಇವರು ಕನ್ನಡ ತಮಿಳು ತೆಲುಗು ಹಿಂದಿ ಇಂಗ್ಲಿಷ್ ಭಾಷೆಗಳನ್ನು ಸ್ಪಷ್ಟವಾಗಿ ಮಾತನಾಡಬಲ್ಲರು.

ಇನ್ನು ಇವರ ಮೊದಲ ಪೋಸ್ಟಿಂಗ್ ಆಗಸ್ಟ್ 2011ರಲ್ಲಿ ತುಮಕೂರಿನಲ್ಲಿ ನಡೆಯಿತು. ನಂತರ ಹಾಸನ ಹಾಗೂ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ನಂತರ ಇತ್ತೀಚಿನ ವರ್ಷಗಳಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕೂಡ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಇದುವರೆಗೂ ಕೂಡ ರೋಹಿಣಿ ಸಿಂಧೂರಿ ಅವರು ಯಾವುದೇ ತಪ್ಪು ಕಾರ್ಯದಲ್ಲಿ ಸೇರಿಕೊಂಡಿಲ್ಲ. ಆದರೆ ಇವರನ್ನು ಕಂಡರೆ ಆಗದಂತ ರಾಜಕಾರಣಿಗಳು ಇವರ ಕುರಿತಂತೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ಸರ್ಕಾರ ನೀಡಿರುವಂತಹ ಮೈಸೂರಿನ ಬಂಗಲೆಯಲ್ಲಿ ವಾಸಿಸುತ್ತಿದ್ದು ಅವರ ಮನೆಯನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ. ನಿಮಗೆ ಕೂಡ ರೋಹಿಣಿ ಸಿಂಧೂರಿ ಅವರು ಎಂದರೆ ಇಷ್ಟ ಹಾಗೂ ಗೌರವ ಎಂದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.