Neer Dose Karnataka
Take a fresh look at your lifestyle.

ಮೊದಲ ಬಾರಿಗೆ ತೋರಿಸ್ತೇವೆ ನೋಡಿ, ಸಿನೆಮಾಗೆ ಮುನ್ನ ನಡೆದ ಅದಿತಿ ರಾವ್ರ ಜೀವನದ ಕಥೆ-ವ್ಯಥೆ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದ ಸಿಂಗ ಚಿತ್ರದ ’ಶ್ಯಾನೆ ಟಾಪ್ ಆಗವ್ಳೆ ನಮ್ಮ್ ಹುಡುಗಿ’ ಹಾಡನ್ನ ನೀವು ಹೇಳಿಯೇ ಇರ್ತಿರಾ ಕೇಳಿದ್ದೀರಾ ಏನು ದಿನವೂ ಗುನುಗುನಿಸುತ್ತಲೇ ಇರ್ತೀರಾ.. ಆ ಹಾಡಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳೊದು ಅದಿತಿ ಪ್ರಭುದೇವ್. ಇವರು ನಿಜವಾಗಿಯೂ ಹಳ್ಳಿ ಬೆಡಗಿಯೆ! ಪಕ್ಕಾ ಕನ್ನಡ, ಹರಳು ಹುರಿದ ಹಾಗೆ ಮಾತಾಡೋ ಈ ಪಟಾಕಿಯ ಬಗ್ಗೆ ನಿಮಗೆ ತಿಳಿಯದ ಒಂದಿಷ್ಟು ಮಾಹಿತಿ ಇಲ್ಲಿದೆ ಮುದೆ ಓದಿ.

ಕನ್ನಡ ಚಿತ್ರರಂಗದಲ್ಲಿ ಪರ ಭಾಷಾ ಹಿರೋಯಿನ್ ಗಳ ಎಂಟ್ರಿ ಕಾಮನ್. ಆದರೆ ಅಪ್ಪಟ ಕನ್ನಡತಿಯರು ಹಿರೋಯಿನ್ ಆಗಿ ಇಲ್ಲೇ ಉಳಿಯುವುದು ಕಷ್ಟ. ಆದರೆ ಅದಿತಿ ಪ್ರಭುದೇವ್ ವಿಷಯದಲ್ಲಿ ಇದು ಸುಳ್ಳು. ಕಿರುತೆರೆಯಿಂದ ಬೆಳ್ಳಿತೆರೆಗೆ ಧುಮುಕಿ ಈಗ ಜನ ಮೆಚ್ಚಿದ ನಟಿ ಎನಿಸಿಕೊಂಡಿದ್ದಾರೆ. ಮೂಲತಃ ದಾವಣಗೆರೆಯವರಾದ ಅದಿತಿ ಬಾಪೂಜಿ ಇನ್ಸ್ಟಿಟ್ಯೂಟ್ ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ. ಪದವಿ ಮುಗಿಸಿ ಬೆಂಗಳೂರಿಗೆ ಕಾಲಿಟ್ಟ ಹಳ್ಳಿ ಬೆಡಗಿ ಅದಿತಿ ಗಣೇಶ ಚತುರ್ಥಿಯಂಥ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಇವರ ಶುದ್ಧವಾದ ಭಾಷೆ ಹಾಗೂ ಬೆಡಗನ್ನು ನೋಡಿದ ಜನ ನಟನೆಗೆ ಹೋಗುವಂತೆ ಪ್ರೇರೇಪಿಸಿದರು,

ನಟ ನಿರ್ದೇಶಕ ನವೀನ್ ಕೃಷ್ಣ ಅವರ ಸಲಹೆ ಮೇರೆಗೆ ಸುವರ್ಣಾ ಚಾನೆಲ್ ಗೆ ಆಡಿಶನ್ ಕೊಟ್ಟು ’ಗುಂಡ್ಯಾನ ಹೆಂಡ್ತಿ’ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು. ನಂತರ ನೇರವಾಗಿ ಬೆಳ್ಳಿತೆರೆಯಲ್ಲಿ ಬಣ್ಣ ಹಚ್ಚಿದ ಅದಿತಿ ನಟ ಅಜಯ್ ರಾವ್ ಅವರ ’ಧೈರ್ಯಂ’ ಚಿತ್ರದಲ್ಲಿ ನಟಿಸಿದರು. ಸಿನಿಮಾದಲ್ಲಿ ನಟಿಸಿದರೂ ನಂತರ ಅಷ್ಟು ಉತ್ತಮ ಅವಕಾಶಗಳು ಬರದ ಕಾರಣ ನಾಗಕನ್ನಿಕೆ ಧಾರಾವಾಹಿಯಲ್ಲಿ ಅಭಿನಯಿಸಿದರು ಅದಿತಿ. ಇಲ್ಲಿ ಅವರ ನಟನೆಯನ್ನು ಮೆಚ್ಚಿದ ಜನ ಮತ್ತೆ ಅವರನ್ನು ಸಿನಿಮಾಗಳಲ್ಲಿ ನೋಡಲು ಬಯಸಿದರು.

ಇದಾದ ಬಳಿಕ ಅದಿತಿ ಪ್ರಭುದೇವ್ ಒಂದಾದ ಮೇಲೆ ಒಂದರಂತೆ ಹಲವು ಸಿಮಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಜಾರ್, ಸಿಂಗ, ತೋತಾಪುರಿ, ಕುಸ್ತಿ ರಂಗನಾಯಕಿ, ಬ್ರಹ್ಮಚಾರಿ ಈ ಮೊದಲಾದವು ಅದಿತಿ ನಟಿಸಿರುವ ಚಿತ್ರಗಳು. ಇನ್ನು ಸೋಶಿಯಲ್ ಮೀಡಿಯಾಗಳಲಿಯೂ ಆಕ್ಟಿವ್ ಆಗಿರುವ ಅದಿತಿ ಆಗಾಗ ಲೈವ್ ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾರೆ. ತಮ್ಮ ಮದುವೆ ಮನೆಯಲ್ಲಿ ನೋಡಿದ ಸಂಪ್ರದಾಯಸ್ಥ ಹುಡುಗನೊಂದಿಗೆ ಎಂದಿದ್ದಾರೆ. ಅದಿತಿ ಪ್ರಭುದೇವ ಅವರು ಇನ್ನಷ್ಟು ಚಿತ್ರಗಳಲ್ಲಿ ಹಿಟ್ ಆಗಲಿ ಎಂದು ಹಾರೈಸೋಣ.

Comments are closed.