Neer Dose Karnataka
Take a fresh look at your lifestyle.

ಮದುವೆ ಚೌಟ್ರಿ ಅಲ್ಲಿ ಊಟ ಬಡಿಸುತ್ತಿದ್ದ ಯುವಕ ಇಂದು ಕನ್ನಡ ಟಾಪ್ ಸ್ಟಾರ್ ನಟ, ಯಾರು ಗೊತ್ತೇ??

4

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಜನರು ಯಾವುದೇ ಶಿಫಾರಸು ಇಲ್ಲದೆ ಯಾರ ಆಶೀರ್ವಾದವು ಇಲ್ಲದೆ ತಮ್ಮ ಸ್ವಂತ ಪರಿಶ್ರಮದಿಂದ ಇಲ್ಲಿಯವರೆಗೆ ಬಂದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಅದರಲ್ಲಿ ಒಬ್ಬರು ನಮ್ಮ ಕ್ವಾಟ್ಲೆ ಸತೀಶ ಅಲಿಯಾಸ್ ನಿನಾಸಂ ಸತೀಶ್. ಹೌದು ಸ್ನೇಹಿತರೆ ನೀನಾಸಂ ಸತೀಶ್ ರವರು ಮಂಡ್ಯದ ಮೂಲದವರು. ಮಾತ್ರವಲ್ಲದೆ ರಂಗಭೂಮಿ ಹಿನ್ನೆಲೆಯ ಕಲಾವಿದರು.

ಯಾವುದೇ ಪಾತ್ರಕ್ಕೂ ಕೂಡ ಜೀವ ತುಂಬಬಲ್ಲಂತಹ ಅಮೋಘ ಕಲಾವಿದ. 2008 ರಲ್ಲಿ ಬಿಡುಗಡೆಯಾದಂತಹ ಮಾದೇಶ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರ ನೀನಾಸಂ ಸತೀಶ್ ರವರು ನಂತರದ ದಿನಗಳಲ್ಲಿ ಜನಪ್ರಿಯರಾಗಿದ್ದು ಮನಸಾರೆ ಲೈಫು ಇಷ್ಟೇನೆ ಡ್ರಾಮಾ ಹಾಗೂ ಪಂಚರಂಗಿ ಚಿತ್ರಗಳ ಮೂಲಕ. ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರ ನೀನಾಸಂ ಸತೀಶ್ ರವರ ಹಣೆಬರಹನೇ ಬದಲಾಯಿಸಿಬಿಟ್ಟಿತು. ಲೂಸಿಯಾ ಚಿತ್ರ ಸತೀಶ್ ರವರ ಅತ್ಯಂತ ಯಶಸ್ವಿ ಚಿತ್ರವಾಗಿ ಕಾಣಿಸಿಕೊಂಡಿತು.

ಇನ್ನು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಸತೀಶ್ ನೀನಾಸಂ ರವರು ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಇನ್ನು ಇವರು ಒಮ್ಮೆ ಯಾವ ಕೆಲಸವನ್ನು ಮಾಡುತ್ತಿದ್ದರು ಗೊತ್ತ ಸ್ನೇಹಿತರೆ. ಹೌದು ಸ್ನೇಹಿತರೆ ಬಡ ಕುಟುಂಬದಿಂದ ಬಂದಂತಹ ಸತೀಶ್ ನೀನಾಸಂ ರವರು ತಮ್ಮ ಮೊದಲಿನ ದಿನಗಳಲ್ಲಿ ಚೌಲ್ಟ್ರಿ ಯಲ್ಲಿ ಊಟ ಬಡಿಸುವ ಕೆಲಸವನ್ನು ಮಾಡುತ್ತಿದ್ದಾರಂತೆ. ಆದರೆ ಈಗ ಕರ್ನಾಟಕ ನಾಡೇ ಮೆಚ್ಚುವಂತ ನಟನಾಗಿ ಮಿಂಚುತ್ತಿದ್ದಾರೆ. ಸತೀಶ್ ನೀನಾಸಂ ರವರಿಗೆ ದೇವರು ಇನ್ನಷ್ಟು ಯಶಸ್ಸನ್ನು ನೀಡಲಿ ಎಂದು ಹಾರೈಸೋಣ ಸ್ನೇಹಿತರೆ.

Leave A Reply

Your email address will not be published.