Neer Dose Karnataka
Take a fresh look at your lifestyle.

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸಿಂಧು ಲೋಕನಾಥ್ ಮದುವೆಯಾಗಿದ್ದು ಯಾರನ್ನು ಗೊತ್ತಾ??

5

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಮೊದಲು ನಟಿಸಿ ಈಗ ಕೊಂಚ ವಿರಾಮ ತೆಗೆದುಕೊಂಡರೂ ಕೂಡ ಕನ್ನಡ ಪ್ರೇಕ್ಷಕರ ಮನದಲ್ಲಿ ಉಳಿದುಕೊಂಡಿರುವ ನಟಿಯೆಂದರ ಸಿಂಧು ಲೋಕನಾಥ್. 2009 ರಲ್ಲಿ ಬಿಡುಗಡೆಯಾದಂತಹ ಪರಿಚಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ ನಟಿ ಸಿಂಧು ಲೋಕನಾಥ್. ಇನ್ನು ನಟಿ ಸಿಂಧು ಲೋಕನಾಥ್ ನಟನೆಯ ಪ್ರಮುಖ ಚಿತ್ರಗಳೆಂದರೆ ಡ್ರಾಮಾ ಲೈಫು ಇಷ್ಟೇನೆ ಲವ್ ಇನ್ ಮಂಡ್ಯ. ಈ ಚಿತ್ರಗಳು ಸಿಂಧು ಲೋಕನಾಥ್ ರವರ ಸಿನಿ ಜೀವನದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳೆಂದು ಹೆಸರುಗಳಿಸಿದೆ.

ಇನ್ನು ಸಿಂಧು ಲೋಕನಾಥ್ ರವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯಾರೇ ಕೂಗಾಡಲಿ ಚಿತ್ರದಲ್ಲಿ ಕೂಡ ಸಪೋರ್ಟಿಂಗ್ ಆಕ್ಟರ್ ಆಗಿ ನಟಿಸಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ನಟನೆಯ ಕುರಿತಂತೆ ಸಿಂಧು ಲೋಕನಾಥ್ ರವರು ಕೊಂಚ ವಿರಾಮ ತೆಗೆದುಕೊಂಡರೂ ಸಹ ಹಾಗೆಯೇ ಕೆಲವು ಚಿತ್ರಗಳಲ್ಲಿ ನಟಿಸುತ್ತಿರುತ್ತಾರೆ. ಇನ್ನು ಸಿಂಧು ಲೋಕನಾಥ್ ಅವರು ಇತ್ತೀಚಿನ ವರ್ಷಗಳಲ್ಲಿ ಮದುವೆಯಾಗಿದ್ದಾರೆ ಹುಡುಗ ಯಾರು ಗೊತ್ತಾ ಸ್ನೇಹಿತರೆ.

ಬನ್ನಿ ಸ್ನೇಹಿತರೆ ನಟಿ ಸಿಂಧು ಲೋಕನಾಥ್ ರವರು ಮದುವೆಯಾಗಿರುವ ಹುಡುಗ ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ. ಹೌದು ಸ್ನೇಹಿತರೆ ನಟಿ ಸಿಂಧು ಲೋಕನಾಥ್ ರವರು 2017 ರಲ್ಲಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಶ್ರೇಯಸ್ ಕೊಡಿಯಾಲ್ ರವರನ್ನು ಮದುವೆಯಾಗುತ್ತಾರೆ. ಇನ್ನು ಶ್ರೇಯಸ್ ಕೊಡಿಯಾಲ್ ರವರು ಮಂಗಳೂರಿನ ಮೂಲದವರಾಗಿದ್ದು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಸಿಂಧು ಲೋಕನಾಥ್ ರವರು ಕೊಡವ ಸಂಪ್ರದಾಯದ ಹುಡುಗಿ ಯಾಗಿರುವುದರಿಂದ ಇವರಿಬ್ಬರ ಮದುವೆ ಮಡಿಕೇರಿಯಲ್ಲಿ ಕಾವೇರಿ ಹಾಲ್ನಲ್ಲಿ ಕೊಡವ ಸಂಪ್ರದಾಯದ ಪ್ರಕಾರವೇ ನಡೆದಿದೆ.

Leave A Reply

Your email address will not be published.