Neer Dose Karnataka
Take a fresh look at your lifestyle.

ಯಶ್ ಬರೋ ವರೆಗೂ ಮಾತ್ರ ಬೇರೆ ಅವರ ಹವಾ, ಎಂಬುದನ್ನು ಪ್ರಭಾಸ್ ಮುಂದೆಯೂ ನಿರೂಪಿಸಿದ ಯಶ್, ಪ್ರಭಾಸ್ ಹಿಂದಕ್ಕೆ ಸರಿದಿದ್ದು ಯಾಕೆ ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಡೀ ವಿಶ್ವವೇ ಇದೆ ಜುಲೈ 16ರಂದು ಕನ್ನಡದ ಹೆಮ್ಮೆ ಚಿತ್ರವಾಗಿದ್ದಂತಹ ಕೆಜಿಎಫ್ ಚಾಪ್ಟರ್ 2 ವೀಕ್ಷಿಸ ಬೇಕಿತ್ತು. ಆದರೆ ಈ ಲಾಕ್ ಡೌನ್ ಕಾರಣದಿಂದಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿದೆ. ಹೌದು ಸ್ನೇಹಿತರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಎಲ್ಲ ಸರಿಯಾಗಿದ್ದರೆ ಇದೇ ಜುಲೈ ಹದಿನಾರಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಚಿತ್ರದ ದಿನಾಂಕವನ್ನು 2022 ಏಪ್ರಿಲ್ 14ಕ್ಕೆ ಮುಂದೂಡಲಾಗಿದೆ.

ಇನ್ನು ಇದೇ ದಿನಾಂಕಕ್ಕೆ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಸಲಾಂ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿತ್ತು. ಈಗ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಇದಕ್ಕೆ ಬಂದು ಸೇರಿದ್ದರಿಂದ ಚಿತ್ರದ ಬಿಡುಗಡೆ ದಿನಾಂಕ ಕೂಡ ಮುಂದೂಡುವುದು ಗ್ಯಾರಂಟಿ. ಇನ್ನು ಸಲಾರ್ ಹಾಗೂ ಕೆಜಿಎಫ್ ಚಿತ್ರಗಳ ಬಿಡುಗಡೆ ದಿನದ ಮುಂದೂಡಿಕೆಗೆ ಸಂಬಂಧವೇನು ಗೊತ್ತ ಸ್ನೇಹಿತರೆ ನಿಮಗೆ ಸವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಸಲಾರ್ ಹಾಗೂ ಕೆಜಿಎಫ್ ಚಾಪ್ಟರ್ 2 ಇವೆರಡು ಚಿತ್ರಗಳನ್ನು ಕೂಡ ನಿರ್ದೇಶಿಸುತ್ತಿರುವವರು ಪ್ರಶಾಂತ್ ನೀಲ್. ಇನ್ನು ಇವೆರಡು ಚಿತ್ರಗಳನ್ನು ನಿರ್ಮಿಸುತ್ತಿರುವವರು ಹೊಂಬಾಳೆ ಫಿಲಂ ಸಂಸ್ಥೆಯ ವಿಜಯ್ ಕಿರಗಂದೂರು. ಹಾಗಾಗಿ ಕೇವಲ ಬಿಡುಗಡೆ ದಿನಾಂಕ ಗಿಂತ ಹೆಚ್ಚಾಗಿ ವ್ಯಾಪಾರ ದೃಷ್ಟಿಯಿಂದಲೂ ಕೂಡ ಇವುಗಳನ್ನು ಹೊಂದಾಣಿಕೆ ಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಮಾತ್ರವಲ್ಲದೆ 2022 ರ ಆರಂಭದ ತಿಂಗಳಿನಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ರವರ ರಾಧೇಶ್ಯಾಮ್ ಚಿತ್ರ ಕೂಡ ಬಿಡುಗಡೆಯಾಗಲಿದೆ. ಹೀಗಾಗಿ ಒಂದೇ ಹೀರೋನಾ ಎರಡು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗುವುದು ಕೂಡ ತಪ್ಪಿಸಲು ಹೀಗೆ ಮಾಡಲಾಗಿದೆ.

Leave A Reply

Your email address will not be published.