ಯಶ್ ರವರ ಮನೆಗೆ ಮೊದಲನೇ ಬಾರಿ ಬಂದ ಡಿ ಬಾಸ್ ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತೇ?? ಇದಪ್ಪ ಸ್ನೇಹ, ಕಾಳಜಿ ಅಂದ್ರೆ.

Entertainment

ನಮಸ್ಕಾರ ಸ್ನೇಹಿತರೇ ರಾಕಿಂಗ್ ಸ್ಟಾರ್ ಯಶ್ ಅವರು ಎಷ್ಟು ಪರಿಶ್ರಮಪಟ್ಟು ಬಂದಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲಿ ಅವರು ಇಂದಿಗೆ ಸ್ಟಾರ್ ಆಗಿ ನಿಂತು ಕೊಂಡಿದ್ದಾರೆ ಎಂದರೆ ಅದು ಕೇವಲ ಅವರ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕವೇ ಮಾತ್ರ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ ಎಂಬುದನ್ನು ಈಗಾಗಲೇ ನೀವು ಹಲವಾರು ಸುದ್ದಿ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೀರಿ.

ಹೌದು ಸ್ನೇಹಿತರೆ ಎರಡನೆಯ ಅಲೆಯ ಕಾರಣದಿಂದಾಗಿ ಈ ಮನೆಯ ಗೃಹಪ್ರವೇಶ ವನ್ನು ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಮಾತ್ರ ಮಾಡಲಾಗಿತ್ತು. ಈ ಮನೆಯ ಇಂಟೀರಿಯರ್ ಡಿಸೈನ್ ಅನ್ನು ಖುದ್ದಾಗಿ ರಾಧಿಕಾ ಪಂಡಿತ್ ಅವರೇ ಮಾಡಿದ್ದರು. ಇನ್ನು ಈ ಮನೆ ಇದ್ದ ಜಾಗದಲ್ಲೇ ಮೊದಲು ಅಂಬರೀಶ್ ಅವರು ಕೂಡ ವಾಸವಾಗಿದ್ದರು ಎಂಬುದು ನಿಮಗೆಲ್ಲಾ ಗೊತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕಷ್ಟ ಪಟ್ಟು ದುಡಿದು ತಮ್ಮ ಕನಸಿನ ಮನೆಯನ್ನು ರಾಕಿಂಗ್ ಸ್ಟಾರ್ ಯಶ್ ದಂಪತಿಗಳು ತೆಗೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಈ ಮನೆಗೆ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡಾ ಭೇಟಿ ನೀಡಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳ ಮಾಹಿತಿಯ ಪ್ರಕಾರ ಲಭ್ಯವಾಗಿದೆ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಸಾಕಷ್ಟು ಉತ್ತಮ ಬಾಂಧವ್ಯ ಹೊಂದಿದ್ದು ಅವರನ್ನು ಕನ್ನಡ ಚಿತ್ರರಂಗದ ಜೋಡೆತ್ತು ಎಂದು ಕರೆಯಲಾಗುತ್ತದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸುಮಲತಾ ಅಂಬರೀಶ್ ಅಭಿಷೇಕ್ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ರವರೊಂದಿಗೆ ಯಶ್ ರವರ ಮನೆಗೆ ಆಗಮಿಸಿದ್ದು ಹೂವಿನ ಬೊಕ್ಕೆಯನ್ನು ಉಡುಗೊರೆಯಾಗಿ ನೀಡಿದ್ದು, ಗೃಹಪ್ರವೇಶದ ದಿನಕ್ಕಾಗಿ ಹಸು ಹಾಗೂ ಕರುವನ್ನು ಕೂಡ ನೀಡಿದ್ದರು. ಇದರ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಎಷ್ಟರ ಮಟ್ಟಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎಂಬುದು ತಿಳಿದುಬರುತ್ತದೆ.

Leave a Reply

Your email address will not be published. Required fields are marked *