Neer Dose Karnataka
Take a fresh look at your lifestyle.

ಕಿಚ್ಚ ಸುದೀಪ್ ರವರು ತಮ್ಮ ಅಭಿಮಾನಿಗಳ ಜೊತೆ ಕ್ಯಾಮೆರಾ ಹಿಂದೆ ಹೇಗಿರುತ್ತಾರೆ ಗೊತ್ತಾ?? ಫುಲ್ ವೈರಲ್ ಆದ ವಿಡಿಯೋ ದಲ್ಲಿ ಏನಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿಚ್ಚ ಸುದೀಪ್ ರವರು ಅಭಿಮಾನಿಗಳ ಜೊತೆ ಎಷ್ಟು ಫ್ರೆಂಡ್ಲಿಯಾಗಿ ಇರುತ್ತಾರೆ ಎಂಬುದು ಈಗಾಗಲೇ ಹಲವಾರು ಬಾರಿ ನೋಡಿದ್ದಿರ. ಅದಕ್ಕಾಗಿ ಅವರನ್ನು ಅಭಿಮಾನಿಗಳ ಅಭಿಮಾನಿ ಎಂಬುದಾಗಿ ಕರೆಯುತ್ತಾರೆ. ತಮ್ಮ ಅಭಿಮಾನಿಗಳನ್ನು ಸ್ನೇಹಿತರು ಎನ್ನುವುದರ ಮೂಲಕ ಕಿಚ್ಚ ಸುದೀಪ್ ರವರು ತಮ್ಮ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಜಗತ್ತಿಗೆ ಸಾರಿದ್ದಾರೆ. ಹೌದು ಸ್ನೇಹಿತರೆ ಕಿಚ್ಚ ಸುದೀಪ್ ರವರು ತಮ್ಮ ಅಭಿಮಾನಿಗಳಿಗೆ ಏನೇ ಕಷ್ಟ ಇರಲಿ ತಮ್ಮ ಬಳಿಗೆ ಬಂದವರನ್ನು ಬರಿಗೈಯಲ್ಲಿ ಕಳಿಸಿದ ಉದಾಹರಣೆ ಇಲ್ಲ.

ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ ಏಕೈಕ ನಟ ತಮ್ಮ ಆದಾಯದ 50% ಕ್ಕೂ ಅಧಿಕ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸುತ್ತಾರೆ. ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಸಾಮಾಜಿಕ ಕಾರ್ಯಗಳಿಗಾಗಿ ತಮ್ಮ ಆದಾಯವನ್ನು ಬಳಸಿಕೊಳ್ಳುತ್ತಾರೆ ಹೀಗಾಗಿ ಅವರು ಎಲ್ಲರಿಗೂ ಪ್ರಿಯವಾದವರು. ಇನ್ನು ತಮ್ಮ ಚಿತ್ರಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ಕೂಡ ಹಲವಾರು ಸಕಾರಾತ್ಮಕ ಬದಲಾವಣೆಯನ್ನು ತಂದವರು ಕಿಚ್ಚ ಸುದೀಪ್.

ಇನ್ನು ತಮ್ಮ ಮಾತುಗಳಿಂದ ಎಂತಹುದೇ ಕಠಿಣ ಮನಸ್ಸಿನಲ್ಲಿಯೂ ಕೂಡ ಸ್ಫೂರ್ತಿಯನ್ನು ಮೂಡಿಸಬಲ್ಲ ಅಂತಹ ವ್ಯಕ್ತಿತ್ವ ಕಿಚ್ಚ ಸುದೀಪ್ ರವರು. ಇನ್ನು ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗಳೊಂದಿಗೆ ಎಷ್ಟು ಸಲಿಗೆಯಿಂದ ಇರುತ್ತಾರೆ ಎಂಬುದಕ್ಕೆ ಒಮ್ಮೆ ಅವರು ಕೆಂಪೇಗೌಡ ಬಿಡುಗಡೆಯಾದ ಸಂದರ್ಭದಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಅಭಿಮಾನಿಗಳು ಅವರ ಹಿಂದೆ ಬೈಕಿನಲ್ಲಿ ಬಂದು ಸಿಗರೇಟ್ ಕೇಳಿದಾಗ ಹಿಂದೆ ಮುಂದೆ ನೋಡದೆ ಕಿಚ್ಚ ಸುದೀಪ್ ಕೊಟ್ಟುಬಿಡುತ್ತಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. ನೀವು ಕೂಡ ಆ ವೈರಲ್ ವಿಡಿಯೋವನ್ನು ಈ ಕೆಳಗಡೆ ನೋಡಬಹುದಾಗಿದೆ.

Comments are closed.