Neer Dose Karnataka
Take a fresh look at your lifestyle.

ನಟಿಯ ಜೊತೆ ದೇವರಾಜ್ ವಿವಾಹ ಮಾಡಿಸಿ ಕಂಬಿ ಎನಿಸಿದ್ದ ಖ್ಯಾತ ನಟ ಯಾರು ಗೊತ್ತೇ?? ಇದಪ್ಪ ಸ್ನೇಹ ಅಂದ್ರೆ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರಲ್ಲಿ ಅಗ್ರಗಣ್ಯ ರಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಕೂಡ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗಕ್ಕೆ ವಿಲನ್ ಆಗಿ ಕಾಲಿಟ್ಟರು ಕೂಡ ಮುಂದಿನ ದಿನಗಳಲ್ಲಿ ಕನ್ನಡಿಗರು ಮೆಚ್ಚಿ ದಂತಹ ನೆಚ್ಚಿನ ನಾಯಕ ನಟ ಆಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಇನ್ನು ದೇವರಾಜ ರವರು ಇಲ್ಲಿಯವರೆಗೆ ಬರೋಬ್ಬರಿ ಇನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟರ ಆದಂತಹ ಶಂಕರ್ ನಾಗ್ ವಿಷ್ಣುವರ್ಧನ್ ಅಂಬರೀಶ್ ಹೀಗೆ ಹಲವಾರು ನಟರೊಂದಿಗೆ ನಟಿಸಿದ ಅನುಭವ ಹಾಗೂ ಚಾತುರ್ಯತೆ ಇವರಲ್ಲಿದೆ.

ಕನ್ನಡ ಚಿತ್ರರಂಗದ ಡೈನಮಿಕ್ ಹೀರೋ ಆಗಿ ಅಂದಿನ ಕಾಲದಲ್ಲಿ ಮಿಂಚಿದ ಪ್ರತಿಭಾವಂತ ನಟ. ದೇವ್ರಾಜ್ ರವರ ಖದರ್ ಹಾಗೂ ಸ್ಟೈಲ್ ಅಂದಿನ ಕಾಲದಲ್ಲಿ ಎಲ್ಲ ಯುವಕರು ಕೂಡ ಹಿಂಬಾಲಿಸುತ್ತಿದ್ದರು. ಇನ್ನು ದೇವರಾಜ ರವರು ಚಿತ್ರನಟಿಯಾಗಿ ಇದ್ದಂತಹ ಚಂದ್ರಲೇಖ ರವರನ್ನು ಮದುವೆಯಾಗುತ್ತಾರೆ. ಇನ್ನು ಇವರಿಬ್ಬರಿಗೆ ಪ್ರಜ್ವಲ್ ದೇವರಾಜ್ ಹಾಗೂ ಪ್ರಣವ್ ದೇವರಾಜ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಇಂದಿಗೂ ಕೂಡ ಪ್ರಜ್ವಲ್ ದೇವರಾಜ್ ರವರು ಪೋಷಕ ನಟನ ಪಾತ್ರದಲ್ಲಿ ಬಹುಬೇಡಿಕೆ ಯಲ್ಲಿದ್ದಾರೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದ ಹಲವಾರು ಭಾಷೆಗಳಲ್ಲಿ ಕೂಡ ನಟಿಸುತ್ತಿದ್ದಾರೆ.

ಇನ್ನು ದೇವರಾಜ್ ಹಾಗೂ ಚಂದ್ರಲೇಖ ರವರು ಮದುವೆಯಾಗಬೇಕಾದರೆ ಮನೆಯವರ ಒಪ್ಪಿಗೆ ಇಲ್ಲದೆ ಪ್ರೀತಿಸಿ ಮದುವೆಯಾಗಿದ್ದರು. ಇನ್ನು ಇವರಿಬ್ಬರನ್ನು ಮದುವೆ ಮಾಡಿಸಿದ ಖ್ಯಾತ ಕನ್ನಡ ನಟ ಜೈಲಿಗೆ ಹೋಗುವ ಪರಿಸ್ಥಿತಿ ಕೂಡ ಬಂದಿತ್ತು. ಹೌದು ಸ್ನೇಹಿತರೆ ಅವರು ಇನ್ಯಾರು ಅಲ್ಲ ಕನ್ನಡದ ಹಾಗೂ ದಕ್ಷಿಣ ಭಾರತದ ಖ್ಯಾತ ಪೋಷಕ ನಟ ಅವಿನಾಶ್ ರವರು. ಹೌದು ಸ್ನೇಹಿತರೆ ದೇವರಾಜ್ ಹಾಗೂ ಚಂದ್ರಲೇಖಾ ರವರ ಮದುವೆಗೆ ಅವಿನಾಶ್ ರವರು ಸಹಾಯ ಮಾಡಿದ್ದಕ್ಕಾಗಿ ಚಂದ್ರಲೇಖಾ ರವರ ಮನೆಯವರು ಅವಿನಾಶ್ ರವರ ವಿರುದ್ಧ ದೂರನ್ನು ನೀಡಿದ್ದರು. ಈ ಘಟನೆಯನ್ನು ಇಂದಿಗೂ ಕೂಡ ನೆನೆಸಿಕೊಂಡು ಅವಿನಾಶ್ ರವರು ಮುಗುಳು ನಗುತ್ತಾರೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಸ್ನೇಹಿತರೆ.

Comments are closed.