Neer Dose Karnataka
Take a fresh look at your lifestyle.

ನಟ ವಿಜಯ್ ರಾಘವೇಂದ್ರ ರವರ ಮುದ್ದಾದ ಕುಟುಂಬದ ಕ್ಷಣಗಳ ವಿಡಿಯೋ ನೋಡಿದ್ದೀರಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

4

ನಮಸ್ಕಾರ ಸ್ನೇಹಿತರೇ ಅಣ್ಣಾವ್ರು ನಟಿಸಿದ ಚಲಿಸುವ ಮೋಡಗಳು ಚಿತ್ರದಿಂದ ಬಾಲನಟನಾಗಿ ಪಾದಾರ್ಪಣೆ ಮಾಡಿ ನಂತರ ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿಮುತ್ತಾ ಎಂಬ ಖ್ಯಾತಿಯನ್ನು ಪಡೆದವರು ನಮ್ಮ ವಿಜಯ್ ರಾಘವೇಂದ್ರ. 2002 ರಲ್ಲಿ ಬಿಡುಗಡೆಯಾದಂತಹ ನಿನಗಾಗಿ ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ಪಾದರ್ಪಣೆ ಮಾಡಿದ ವಿಜಯರಾಘವೇಂದ್ರ ರವರು ಈ ಚಿತ್ರದಿಂದ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡರು. ಮಾತ್ರವಲ್ಲದೆ ಈ ಚಿತ್ರ 2002 ರ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದಂತಹ ಚಿತ್ರವಾಗಿ ಹೊರಹೊಮ್ಮಿತ್ತು.

ಇದಾದ ನಂತರ ಅವರಿಗೆ ಅತ್ಯಂತ ಹೆಚ್ಚು ಯಶಸ್ಸನ್ನು ತಂದುಕೊಟ್ಟ ಚಿತ್ರವೆಂದರೆ ಅದು ಕಲ್ಲರಳಿ ಹೂವಾಗಿ ಚಿತ್ರ. ಹಲವಾರು ಪ್ರಮುಖ ಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡುವ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದ ಅಂತಹ ಅಪರೂಪದ ನಟ ವಿಜಯರಾಘವೇಂದ್ರ. ಇನ್ನು ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ವಿಜೇತರಾಗಿ ಹೊರಹೊಮ್ಮಿದಂತಹ ವಿಜಯ ರಾಘವೇಂದ್ರ ಅವರು ನಂತರದ ದಿನಗಳಲ್ಲಿ ಚೌಕ ಚಿತ್ರದ ಪಾತ್ರದ ಮೂಲಕ ಕೂಡ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಹಿರಿಯ ಆಫೀಸರ್ ಬಿಕೆ ಶಿವರಾಮ್ ರವರ ಪುತ್ರ ಆದಂತಹ ಸ್ಪಂದನ ರವರನ್ನು ವಿಜಯರಾಘವೇಂದ್ರ ರವರು 26 ಆಗಸ್ಟ್ 2007 ರಲ್ಲಿ ವಿವಾಹವಾದರು. ಹೌದು ಸ್ನೇಹಿತರೆ ವಿಜಯರಾಘವೇಂದ್ರ ಹಾಗೂ ಸ್ಪಂದನಾ ರವರ ಜೋಡಿ ಯಾವ ಸಿನಿಮಾ ಜೋಡಿಗೆ ಕಮ್ಮಿಯಿಲ್ಲದಂತೆ ಇತ್ತು. ಇನ್ನು ಇವರಿಗೆ ಶೌರ್ಯ ಎಂಬ ಪುಟ್ಟ ಗಂಡು ಮಗು ಇದ್ದಾನೆ. ವಿಜಯ ರಾಘವೇಂದ್ರ ರವರ ಕುಟುಂಬ ತುಂಬಾ ಸೊಗಸಾಗಿದೆ ನೀವು ಕೂಡ ಈ ಕೆಳಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಮುದ್ದಾದ ಕುಟುಂಬದ ವಿಡಿಯೋ ನೋಡಿದ ನಂತರ ಈ ಕುಟುಂಬದ ಕುರಿತಂತೆ ನಿಮಗೇನನ್ನಿಸಿತು ಎಂದು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

Leave A Reply

Your email address will not be published.