ಮಂಜ ನನ್ನ ಬುಡಕ್ಕೆ ಇದಕ್ಕೆ ಬರ್ತಾ ಇದಾನೆ, ಕೆಲಸ ಕಿತ್ಕೋತಾನೆ ಎಂದ ಸುದೀಪ್, ಶಾಕಿಂಗ್ ಹೇಳಿದೆ ನೀಡಿದ ಕಿಚ್ಚ ಯಾಕೆ ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಸೀನಸ್ 8 ಮುಗಿತಲ್ಲಪ್ಪ ಎಂದು ಬೇಸರಿಸಿಕೊಂಡಿದ್ದವರಿಗೆ ಬಿಗ್ ಬಾಸ್ ಮಿನಿ ಸೀಸನ್ ಮಾಡಿದ್ದು ಖುಷಿ ಕೊಟ್ಟಿತ್ತು. ಅದರಲ್ಲೂ ತಮ್ಮ ಮೆಚ್ಚಿನ ಧಾರಾವಾಹಿಯ ನಟ ನಟಿಯರು ಬಿಗ್ ಬಾಸ್ ಮನೆಯಲ್ಲಿ ಆಟವಾಡಿದ್ದು ತುಂಬಾನೇ ಮನೋರಂಜನೆ ನೀಡಿತ್ತು. ಇನ್ನು ಇದೀಗ ಬಿಗ್ ಬಾಸ್ ಮಿನಿ ಸೀಸನ್ ಮುಗಿದಿದ್ದು ಕಿಚ್ಚ ಸುದೀಪ್ ಹೋಸ್ಟ್ ಮಾಡಿತ್ತು ಇನ್ನಷ್ಟು ವಿಶೇಷವಾಗಿತ್ತು.

ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರಿಗೂ ಒಂದಲ್ಲಾ ಒಂದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಜೊತೆಗೆ ವೇದಿಕೆಯ ಮೇಲೆ ತಾರೆಯರ ಹಾಗೂ ಬಿಗ್ ಬಾಸ್ ಸ್ಪರ್ಧಿಗಳ ನೃತ್ಯ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು. ಇನ್ನು ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಮಂಜು ಪಾವಗಡ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಜು ಪಾವಗಡ ತೊಟ್ತಿದ್ದ ಕೆಂಪು ಬಣ್ಣದ ಉದ್ದನೆಯ ಕೋಟ್ ಆಕರ್ಷಕವಾಗಿದ್ದು, ಸುದೀಪ್ ಕೂಡ ಇದನ್ನು ಮೆಚ್ಚಿಕೊಂಡರು.

ಇನ್ನು ವೇದಿಕೆಯ ಮೇಲೆ ಮಂಜು ಪಾವಗಡಅವರನ್ನು ಕರೆಸಿ ಮಾತನಾಡಿದ ಸುದೀಪ್ ಮಂಜು ಹೇಗಿದ್ದೀರಿ? ಬಿಗ್ ಬಾಸ್ ಮುಗಿಸಿದ ಒಂದು ವಾರ ಹೇಗಿತ್ತು?’ ಎಂದು ಪ್ರಶ್ನೆ ಮಾಡಿದರು. ‘ಹೊಸ ಜಗತ್ತನ್ನೇ ನೋಡಿದಂತಾಗಿದೆ. ಸಂದರ್ಶನ ಸನ್ಮಾನಗಳು ಖುಷಿ ಕೊಡುತ್ತಿದೆ ಎಂದು ಮಂಜು ಉತ್ತರಿಸಿದ್ದಾರೆ. ಇನ್ನು ತಾವು ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತನಾಡಿದ ಮಂಜು ನಿಮ್ಮಂಥ ಸ್ತಾರ್ ನಟರ ಜೊತೆ ಪರದೆ ಹಂಚಿಕೊಳ್ಳಬೇಕು ಎನ್ನುವ ಆಸೆ ಇದೆ ಎಂದಿದ್ದಾರೆ. ಈ ಮಾತಿಗೆ ಹಾಸ್ಯ ಚಟಾಕಿಯನ್ನು ಹಾರಿಸಿದ ಸುದೀಪ್ ’ನನ್ನ ಬುಡಕ್ಕೆ ಯಾಕೆ ಕೈ ಹಾಕ್ತೀರಾ? ನೀವು ಅಲ್ಲಿ ಬರೋದು, ನನ್ನ ಕೆಲಸ ಹೋಗೋದು ಯಾಕೆ ಬೇಕು? ಎಂದು ಹೇಳಿ ಮಜು ಪಾವಗಡ ಅವರ ಉಡುಪು ನೋಡಿ ನಿಮ್ಮ ಡ್ರೆಸ್ ನೋಡಿದ್ರೆ ಹಾಗೆ ಅನಿಸುತ್ತದೆ’ ಎಂದು ತಮಾಷೆಯ ಮಾತುಗಳನ್ನಾಡಿದರು.

Leave a Reply

Your email address will not be published. Required fields are marked *