ಎರಡನೇ ವಿಚ್ಚೇದನದ ಬಳಿಕ ಮತ್ತೊಬ್ಬರು ಚಿಕ್ಕ ಹುಡುಗಿಯನ್ನು ಮದುವೆಯಾಗಲು ಮುಂದಾದ ಅಮಿರ್ ಖಾನ್, ಯಾರು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂದು ಕರೆಯುವ ಏಕೈಕ ನಟ ಖಂಡಿತವಾಗಿಯೂ ಅಮೀರ್ ಖಾನ್ ಒಬ್ಬರೇ. ಹೌದು ಸ್ನೇಹಿತರೆ ಅವರ ನಟನೆ ಆಗಲಿ ಹಾಗೂ ಅವರು ಒಂದು ಚಿತ್ರಕ್ಕಾಗಿ ಪಡುವ ಶ್ರಮ ವಾಗಲಿ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದು ಕರೆಯುವಂತೆ ಮಾಡಿದೆ. ಇನ್ನು ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ರವರು ಇತ್ತೀಚೆಗೆ ತಮ್ಮ ಧರ್ಮಪತ್ನಿ ಆಗಿರುವ ಕಿರಣ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡುವ ಮೂಲಕ ವೈವಾಹಿಕ ಜೀವನವನ್ನು ಮುರಿದುಕೊಂಡಿದ್ದಾರೆ.

ಹೌದು ಸ್ನೇಹಿತರೆ ಇದು ಇವರಿಬ್ಬರು ಸೇರಿ ತೆಗೆದುಕೊಂಡಿರುವ ನಿರ್ಧಾರ ಎಂದು ಹೇಳಲಾಗುತ್ತಿದೆ. ಇನ್ನು ಅಮೀರ್ ಖಾನ್ ರವರು ಕಿರಣ್ ರವರೊಂದಿಗೆ 15ವರ್ಷಗಳ ತುಂಬ ಸಂಸಾರವನ್ನು ನಡೆಸಿದ್ದರು. ಇದರ ಹಿಂದೆ ರೀನಾ ದತ್ ರವರೊಂದಿಗೆ 15ವರ್ಷಗಳ ಸಂಸಾರವನ್ನು ಕೂಡ ಅಮೀರ್ ಖಾನ್ ರವರು ಮಾಡಿ ಕಿರಣ ರವರೊಂದಿಗೆ ಎರಡನೇ ಮದುವೆಯಾಗಿದ್ದರು. ಇನ್ನು ಅಮೀರ್ ಖಾನ್ ಹಾಗೂ ಕಿರಣ್ ರವರಿಗೆ ಒಬ್ಬ ಮಗನಿದ್ದು ಇಬ್ಬರೂ ಕೂಡ ಆತನ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಮಾತನಾಡಿಕೊಂಡಿದ್ದಾರೆ. ಇನ್ನು ಅಮೀರ್ ಖಾನ್ ರವರು ಇತ್ತೀಚಿನ ದಿನಗಳಲ್ಲಿ ಲಾಲ್ ಸಿಂಗ್ ಛಡ್ಡಾ ಚಿತ್ರದ ಚಿತ್ರೀಕರಣದಲ್ಲಿ ಸಾಕಷ್ಟು ಬಿಜಿಯಾಗಿದ್ದು ಚಿತ್ರ ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಎಲ್ಲಾ ಸೂಚನೆಗಳು. ಇನ್ನು ಅಮೀರ್ ಖಾನ್ ಹಾಗೂ ಕಿರಣ್ ಅವರಿಬ್ಬರೂ ಕೂಡ ಸಿನಿಮಾ ನಿರ್ಮಾಣದ ಕುರಿತಂತೆ ಬ್ಯುಸಿನೆಸ್ ಪಾರ್ಟ್ನರ್ ಗಳಾಗಿ ಇರುವುದನ್ನು ದೃಢಪಡಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಅಮೀರ್ ಖಾನ್ ರವರು ಮೂರನೇ ಮದುವೆಯಾಗುವಂತ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಹೌದು ಸ್ನೇಹಿತರ ತಮ್ಮ ವಯಸ್ಸಿಗಿಂತ ಚಿಕ್ಕವಯಸ್ಸಿನ ನಟಿಯೊಬ್ಬರನ್ನು ಅಮೀರ್ ಖಾನ್ ರವರು ಡೇಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಟಿಯ ಕಾರಣದಿಂದಾಗಿ ಅಮೀರ್ ಖಾನ್ ಹಾಗೂ ಕಿರಣ್ ಅವರು ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಹೌದು ಸ್ನೇಹಿತರ ಅಮೀರ್ ಖಾನ್ ರವರೊಂದಿಗೆ ತಗ್ಸ್ ಆಫ್ ಹಿಂದುಸ್ತಾನ್ ಹಾಗೂ ದಂಗಲ್ ಚಿತ್ರದಲ್ಲಿ ನಟಿಸಿರುವ ಸನಾ ಫಾತಿಮಾ ಶೇಖರ್ ಅವರು ಅಮೀರ್ ಖಾನ್ ರವರ ಹೊಸ ಗರ್ಲ್ ಫ್ರೆಂಡ್ ಎನ್ನುವುದಾಗಿ ಬಾಲಿವುಡ್ ಹೇಳುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜ ಹಾಗೂ ಸುಳ್ಳು ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *