Neer Dose Karnataka
Take a fresh look at your lifestyle.

ಹೊಸ ಸೀಸನ್ ಗೆ ಸಂಭಾವನೆ ಹೆಚ್ಚಿಸಿಕೊಂಡ ಅನುಶ್ರೀ, ಒಂದು ಎಪಿಸೋಡಿಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಶನಿವಾರದಿಂದ ಬಹಳ ನಿರೀಕ್ಷೆ ಮೂಡಿಸಿರುವ 36 ಸ್ಪರ್ಧೆಗಳನ್ನು ಒಳಗೊಂಡ ಸರಿಗಮಪ ಚಾಂಪಿಯನ್ ಶಿಪ್ ಕಾರ್ಯಕ್ರಮ ನಡೆಯಲಿದೆ, ಈ ಬಾರಿ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿ ಇರಲಿದೆ. ಯಾಕೆಂದರೆ ಬಂದಿರುವ ಎಲ್ಲರೂ ಕೂಡ ಸಾಮಾನ್ಯ ಸ್ಪರ್ಧಿಗಳಲ್ಲ ಬದಲಾಗಿ ಪ್ರತಿಯೊಬ್ಬರು ಕೂಡ ಚಾಂಪಿಯನ್ ಗಳು. ಹೌದು ಸ್ನೇಹಿತರೇ ಇದೀಗ ಸರಿಗಮಪ ತಂಡದಿಂದ ಹೊಸ ಯೋಜನೆಯ ರೂಪದಲ್ಲಿ ಕಾರ್ಯಕ್ರಮವನ್ನು ಆರಂಭವಾಗುತ್ತಿದೆ.

ಸಾಮಾನ್ಯವಾಗಿ ಪ್ರತಿ ಸರಿಗಮಪ ಸೀಸನ್ ನಲ್ಲಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಅವಿತು ಕುಳಿತಿರುವ ನಿಜವಾದ ಕಲೆಯನ್ನು ಹೊಂದಿರುವಂತಹ ಅದೆಷ್ಟೋ ಹಾಡುಗಾರರಿಗೆ ಅವಕಾಶ ನೀಡಿ ಜೀವನವನ್ನು ವಾಹಿನಿ ಬದಲಾಯಿಸಿದೆ ಅಂದರೆ ತಪ್ಪಾಗಲಾರದು. ಹಲವಾರು ಹಳ್ಳಿ ಪ್ರತಿಭೆಗಳು ವೇದಿಕೆ ಮೆಟ್ಟಿಲು ಹತ್ತಿದ ನಂತರ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಜನಪ್ರಿಯತೆ ಗಂತೂ ಕಡಿಮೆ ಇಲ್ಲವೇ ಇಲ್ಲ. ಕೆಲವರು ಎಷ್ಟೇ ಟಿಆರ್ಪಿ ಲೆಕ್ಕಾಚಾರದ ಕುರಿತು ಮಾತನಾಡಿದರೂ ಹಲವಾರು ಸ್ಪರ್ಧಿಗಳಿಗೆ ಸರಿಗಮಪ ವೇದಿಕೆ ಅವಕಾಶ ಕಲ್ಪಿಸಿಕೊಟ್ಟು ಅವರ ಜೀವನವನ್ನು ಬದಲಾಯಿಸುವುದನ್ನು ಯಾರು ಸುಳ್ಳು ಎನ್ನಲು ಸಾಧ್ಯವೇ ಇಲ್ಲ.

ಈ ಕಾರಣಕ್ಕಾಗಿ ಸರಿಗಮಪ ಕಾರ್ಯಕ್ರಮ ಬಹಳ ಜನಪ್ರಿಯತೆಯನ್ನು ಪಡೆದು ಕೊಂಡಿದೆ, ಇನ್ನು ಈ ಬಾರಿ ಒಟ್ಟಾರೆಯಾಗಿ 36 ಚಾಂಪಿಯನ್ ಗಳು ಒಟ್ಟಾರೆಯಾಗಿ ಪೈಪೋಟಿ ಮೇಲೆ ಹಾಡುಗಳನ್ನು ಹಾಡಲಿದ್ದಾರೆ, ಇದೇ ಸಮಯದಲ್ಲಿ ಇಷ್ಟು ದಿವಸ ಕಾರ್ಯಕ್ರಮದ ಯಶಸ್ಸಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿರುವಂಹ ಅನುಶ್ರೀ ಅವರು ಈ ಬಾರಿಯೂ ಕೂಡ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇಷ್ಟು ದಿವಸ ಪಡೆದುಕೊಳ್ಳುತ್ತಿದ್ದ ಸಂಭಾವನೆಗಿಂತ ಹೆಚ್ಚನ್ನು ಅನುಶ್ರೀ ರವರು ಈ ಕಾರ್ಯಕ್ರಮಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಕಿರುತೆರೆಯ ಮೂಲಗಳಿಂದ ತಿಳಿದುಬಂದಿದೆ, ಮೂಲಗಳ ಪ್ರಕಾರ ಇಷ್ಟು ದಿವಸ ಒಂದು ಎಪಿಸೋಡಿಗೆ 80000 ಪಡೆದುಕೊಳ್ಳುತ್ತಿದ್ದ ಅನುಶ್ರೀ ರವರು ಈ ಬಾರಿಯ ಹೊಸ ಸೀಸನ್ ಗೆ ಎಪಿಸೋಡಿಗೆ 1.2 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಖಚಿತವಾಗಿದೆ.

Comments are closed.