ಸೈಮಾ ಅವಾರ್ಡ್ಸ್ ನಲ್ಲಿ ಅವಾರ್ಡ್ ಬಂದಿದ್ದರೂ ದರ್ಶನ್ ಹೋಗಿರಲಿಲ್ಲ ಯಾಕೆ ಗೊತ್ತೇ?? ಹಾಗೂ ಇವರ ಬದಲಿಗೆ ಪ್ರಶಸ್ತಿ ತೆಗೆದುಕೊಂಡವರೂ ಯಾರು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಈಗಿನ ನಟರಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರು. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಇತ್ತೀಚಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕ್ರೇಜ್ ಎನ್ನುವುದು ನೆಕ್ಸ್ಟ್ ಲೆವೆಲ್ ನಲ್ಲಿ ಕಾಣಿಸುತ್ತಿದೆ. ದರ್ಶನ್ ಅಭಿಮಾನಿಗಳ ಅಬ್ಬರ ಯಾವ ಸ್ಟಾರ್ ಸೆಲೆಬ್ರಿಟಿ ಕೂಡ ಕಡಿಮೆ ಇಲ್ಲದಂತಿವೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ದರ್ಶನ್ ರವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಯಶಸ್ಸನ್ನು ಪಡೆದಿವೆ. ಅದರಲ್ಲಿ ಒಂದು ಮುಖ್ಯವಾದ ಚಿತ್ರವೆಂದರೆ ಯಜಮಾನ. ಹೌದು ಸ್ನೇಹಿತರೆ ಹಳ್ಳಿ ಸೊಗಡಿ ನಲ್ಲಿ ಮೂಡಿಬಂದಿರುವ ಯಜಮಾನ ಚಿತ್ರ ಹಲವಾರು ಪ್ರಶಸ್ತಿಗಳಿಗೆ ಕೂಡ ಭಾಜನವಾಗಿದೆ. ಈ ಚಿತ್ರ ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಾಣದಲ್ಲಿ ಮೂಡಿ ಬಂದಿದ್ದು ವಿ ಹರಿಕೃಷ್ಣ ನಿರ್ದೇಶನವನ್ನು ಮಾಡಿದ್ದಾರೆ. ಇನ್ನು ಮೊನ್ನೆಯಷ್ಟೇ ನಡೆದಂತಹ ಸೈಮಾ ಅವಾರ್ಡ್ಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಅತ್ಯುತ್ತಮ ನಾಯಕನಟನಾಗಿ ಯಜಮಾನ ಚಿತ್ರಕ್ಕೆ ಪ್ರತಿಷ್ಠಿತ ಸೈಮಾ ಅವಾರ್ಡ್ ಸಿಕ್ಕಿದೆ.

ಇನ್ನು ಈ ಅವಾರ್ಡ್ ಅನ್ನು ದರ್ಶನ್ ರವರು ತೆಗೆದುಕೊಂಡಿಲ್ಲ ಬದಲಾಗಿ ಯಾರು ತೆಗೆದುಕೊಂಡಿದ್ದಾರೆ ಹಾಗೂ ದರ್ಶನ್ ರವರು ಯಾಕೆ ತೆಗೆದುಕೊಂಡಿಲ್ಲ ಎಂಬುದರ ಕುರಿತಂತೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಹಿಂದೆ ನಾನು ಯಾವುದೇ ಅವಾರ್ಡ್ ಫಂಕ್ಷನ್ ಗೆ ಹೋಗಿ ಕಾರ್ಡನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಯಾಕೆಂದರೆ ಯಾವಾಗ ಕನ್ನಡದ ನಟರನ್ನು ಅವಾರ್ಡ್ ಫಂಕ್ಷನ್ ನಲ್ಲಿ ಮುಂದಿನ ಸಾಲಿನಲ್ಲಿ ಕೂರಿಸುತ್ತಾರೆ ಅಂದು ನಾನು ಅವಾರ್ಡ್ ತೆಗೆದುಕೊಳ್ಳಲು ಹೋಗುತ್ತೇನೆ ಎಂಬುದಾಗಿ ಹೇಳಿದ್ದಾರೆ. ಇನ್ನು ಯಜಮಾನ ಚಿತ್ರದ ಅವಾರ್ಡ್ ಅನ್ನು ಚಿತ್ರದ ನಿರ್ಮಾಪಕಿ ಯಾಗಿರುವ ಶೈಲಜಾ ನಾಗ್ ರವರು ದರ್ಶನ್ ರವರ ಪರವಾಗಿ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *