Neer Dose Karnataka
Take a fresh look at your lifestyle.

ಹಿರಿಯ ನಟಿ ಲಕ್ಷ್ಮೀದೇವಿಯವರನ್ನು ಭೇಟಿಯಾಗಿ ಸ್ಟಾರ್ ನಟಿಯರು ಯಾರಿಗೂ ತಿಳಿಯದ ಹಾಗೆ ಮಾಡಿದ್ದೇನು ಗೊತ್ತೇ?? ಭೇಷ್ ಎಂದ ಜನರು.

6

ನಮಸ್ಕಾರ ಸ್ನೇಹಿತರೇ ಅಂದಿನ ಕಾಲದಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯರು ಮಾತ್ರವಲ್ಲದೆ ಪೋಷಕ ನಟಿಯರು ಕೂಡ ಸಾಕಷ್ಟು ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡು ಕನ್ನಡ ಪ್ರೇಕ್ಷಕರ ದೃಷ್ಟಿಯಲ್ಲಿ ಸಾಕಷ್ಟು ಗೌರವ ಹಾಗೂ ಪ್ರೀತಿಯನ್ನು ಕೂಡ ಸಂಪಾದಿಸಿದ್ದರು. ಆದರೆ ಕನ್ನಡ ಚಿತ್ರರಂಗ ಇಂದು ಅವರನ್ನು ಮರೆತಂತಿದೆ ಆದರೆ ಇನ್ನು ಕೂಡ ಕೆಲವರು ಅಂತಹ ಹಳೆಯ ನಟ-ನಟಿಯರನ್ನು ಭೇಟಿಯಾಗಿ ಗೌರವ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

ಅದರಲ್ಲಿ ಸುಧಾರಾಣಿ ಶ್ರುತಿ ಹಾಗೂ ಮಾಳವಿಕಾ ಕೂಡ ಹೌದು. ಹೌದು ಸ್ನೇಹಿತರೆ ಈ ಹಿಂದೆ ಎಷ್ಟೇ ಈ ಮೂರು ಜನ ನಟಿಯರು ಕೂಡ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಆಗಿದ್ದ ಅಂತಹ ಲೀಲಾವತಿ ಅಮ್ಮನವರ ಮನೆಗೆ ಹೋಗಿ ಅವರ ಆರೋಗ್ಯ ಕ್ಷೇಮ ವಿಚಾರಿಸಿಕೊಂಡು ಅವರ ಮನೆಯಲ್ಲಿ ಅಡುಗೆ ಮಾಡಿ ಅವರಿಗೆ ಬಳಸಿ ತಾವು ಕೂಡ ಊಟ ಮಾಡಿ ಕುಶಲೋಪರಿ ವಿಚಾರಿಸಿಕೊಂಡು ಬಂದಿದ್ದರು. ಆ ಸಮಯದಲ್ಲಿ ವಿಡಿಯೋ ಸಾಕಷ್ಟು ಸುದ್ದಿ ಕೂಡ ಮಾಡಿತ್ತು. ಇನ್ನು ಈಗ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಆಗಿರುವ ಲಕ್ಷ್ಮೀದೇವಿ ಯವರನ್ನು ಕೂಡ ಈ ಮೂವರು ಭೇಟಿಯಾಗಿ ಬಂದಿದ್ದಾರೆ. ಹೌದು ಸ್ನೇಹಿತರೆ ಲಕ್ಷ್ಮಿದೇವಿಯವರು ಅಂದಿನ ರಾಜಕುಮಾರ್ ಹಾಗೂ ಕಲ್ಯಾಣಕುಮಾರ್ ಉದಯಕುಮಾರ್ ಕಾಲದಿಂದಲೂ ಕೂಡ ಇಂದಿನ ಧಾರವಾಹಿಗಳಲ್ಲಿ ಕೂಡ ನಡೆಸಿಕೊಂಡು ಬಂದವರು.

ಹಲವಾರು ದಶಕಗಳಿಂದ ಛಲಬಿಡದೆ ನಟಿಸಿಕೊಂಡು ಬರುತ್ತಿರುವ ಅಮೋಘ ನಟಿ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಶೃತಿ ಸುಧಾರಾಣಿ ಹಾಗೂ ಮಾಳವಿಕಾ ರವರು ಲಕ್ಷ್ಮೀದೇವಿಯವರ ಆರೋಗ್ಯವನ್ನು ವಿಚಾರಿಸಿಕೊಂಡು ಅವರಿಗೆ ಆರ್ಥಿಕವಾಗಿ ಕೂಡ ಹಣವನ್ನು ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕನ್ನಡ ಚಿತ್ರರಂಗ ಇಂತಹ ಹಿರಿಯ ನಟಿಯರಿಗೆ ಗೌರವ ಕೊಡುವುದನ್ನು ಮರೆತಿದೆ ನಾವಾದರೂ ನೆನಪಿಸಿಕೊಳ್ಳಬೇಕು ಎಂಬ ಅರ್ಥ ಬರುವಂತೆ ಬರೆದುಕೊಂಡು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಹಲವಾರು ಕನ್ನಡ ಪ್ರೇಮಿಗಳು ಹಾಗೂ ಕನ್ನಡ ಸಿನಿರಸಿಕರು ಮೆಚ್ಚುಗೆಯನ್ನು ಕೂಡ ಸೂಚಿಸಿದ್ದಾರೆ. ಶೃತಿ ಸುಧಾರಾಣಿ ಮಾಳವಿಕಾ ರವರ ದೊಡ್ಡ ಗುಣಕ್ಕೆ ನಾವು ತಲೆಬಾಗಲೇಬೇಕು.

Leave A Reply

Your email address will not be published.