Neer Dose Karnataka
Take a fresh look at your lifestyle.

ಫೇಸ್ಬುಕ್ ಅಲ್ಲಿ ನೋಡಿ ಪ್ರೀತಿ ಮಾಡಿ ಮದುವೆಯಾದಳು, ಮನೆಯವರನ್ನು ಒಪ್ಪಿಸಿ ಮದುವೆಯಾದ ನಂತರ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ನಾವು ಮಾತನಾಡಲು ಹೊರಟಿರುವುದು ಕೇರಳ ರಾಜ್ಯದಲ್ಲಿ ನಡೆದಿರುವಂತಹ ನೈಜ ಘಟನೆ ಕುರಿತಂತೆ. ಈ ನೈಜ ಘಟನೆ ನಡೆದಿರುವುದು ಕೃತಿ ಎಂಬ ಸುಸಂಸ್ಕೃತ ಹೆಣ್ಣುಮಗಳ ಬಾಳಿನಲ್ಲಿ. ಹೌದು ಸ್ನೇಹಿತರೇ ಕೃತಿ ಒಳ್ಳೆಯ ಮನೆತನದಿಂದ ಬಂದವಳು. ಅವರ ತಂದೆ ನಿವೃತ್ತ ಪಂಚಾಯತ್ ಆಫೀಸರ್ ಹಾಗೂ ಆಕೆಯ ತಾಯಿ ಬ್ಯೂಟಿಷಿಯನ್. ತಮ್ಮ ಮಗಳನ್ನು ಈಗಾಗಲೇ ಮದುವೆ ಮಾಡಿಕೊಟ್ಟಿರುತ್ತಾರೆ ಮಾತ್ರವಲ್ಲದೆ ಲಕ್ಷಾಂತರ ರೂಪಾಯಿ ವರದಕ್ಷಿಣೆ ಹಾಗೂ ಚಿನ್ನಾಭರಣವನ್ನು ಕೂಡ ಕೊಡುತ್ತಾರೆ. ಆದರೆ ಮಗಳಿಗೆ ಮೊದಲ ಮದುವೆ ಸರಿ ಬರದೆ ವಿವಾಹ ವಿಚ್ಛೇದನವನ್ನು ಕೂಡ ನೀಡುತ್ತಾರೆ.

ವಿವಾಹ ವಿಚ್ಛೇದನ ನೀಡಬೇಕಾದರೆ ಕೃತಿಗೆ ನಾಲ್ಕು ತಿಂಗಳಾಗಿತ್ತು. ಇನ್ನು ತವರುಮನೆಯಲ್ಲಿ ಆಕೆಯ ಹೆರಿಗೆ ಕೂಡ ನಡೆಯುತ್ತದೆ. ಯಾರೊಂದಿಗೂ ಕೂಡ ಮಾತನಾಡದೆ ತಾನಾಯಿತು ತನ್ನ ಮಗುವಾಯಿತು ತನ್ನ ಹೆತ್ತವರ ಆಯ್ತು ಎಂಬುದಾಗಿ ಕೃತಿ ಇರುತ್ತಾಳೆ. ಆದರೆ ಒಮ್ಮೆ ಪ್ರೀತಿಗೆ ಫೇಸ್ಬುಕ್ನಲ್ಲಿ ವೈಶಾಕ್ ಎನ್ನುವ ಪರಿಚಯ ಆಗುತ್ತಾನೆ. ಕೃತಿಯ ಎಲ್ಲಾ ಕಷ್ಟ-ಸುಖಗಳಿಗೆ ಅವನು ಕಿವಿಯಾಗುತ್ತಾನೆ ಹಾಗೂ ಕಾಳಜಿ ಕೂಡ ತೋರುತ್ತಾನೆ. ಇದು ಕೃತಿಗೆ ಸಾಕಷ್ಟು ಇಷ್ಟವಾಗುತ್ತದೆ. ಇನ್ನು ವೈಶಾಕ್ ಗಲ್ಪ್ ದೇಶದಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಇನ್ನೊಮ್ಮೆ ಕೃತಿಯ ಮಗಳ ಜನ್ಮದಿನಾಚರಣೆಗೆ ಅವಳ ಮನೆಗೆ ಬಂದಿರುತ್ತಾನೆ. ಆದರೆ ಇದು ಅವಳ ಮನೆಯವರಿಗೆ ಇಷ್ಟವಾಗಿರಲಿಲ್ಲ.

ಆದರೆ ಕೃತಿಗೆ ವೈಶಾಖ ಮೇಲೆ ಸಂಪೂರ್ಣ ನಂಬಿಕೆ ಇತ್ತು ಇದಕ್ಕಾಗಿ ಯಾತನೆಗಳು ರಿಜಿಸ್ಟರ್ ಮ್ಯಾರೇಜ್ ಕೂಡ ಆಗುತ್ತಾಳೆ. ನಂತರ ಇದು ಕೃತಿಯ ಮನೆಯವರಿಗೆ ಗೊತ್ತಾಗಿ ಆಕೆಯನ್ನು ಶಾಸ್ತ್ರಬದ್ಧವಾಗಿ ಅದ್ದೂರಿಯಾಗಿ ಮದುವೆ ಮಾಡಿಕೊಡುತ್ತಾರೆ. ನಂತರ ಮದುವೆಯಾದ ಮೇಲೆ ವೈಶಾಖ್ ದುಬೈಗೆ ಹೋಗುತ್ತಾನೆ. ಆದರೆ ಒಂದೇ ತಿಂಗಳಿಗೆ ಕೆಲಸದಿಂದ ತೆಗೆದಿದ್ದಾರೆ ಎಂಬ ಕಾರಣಕ್ಕೆ ವಾಪಸ್ ಕೇರಳಕ್ಕೆ ಬರುತ್ತಾನೆ. ಶೈಕ್ಷಣಿಕ ಸಂಸ್ಥೆಯನ್ನು ತೆರೆಯಬೇಕೆಂಬ ಕಾರಣಕ್ಕಾಗಿ ಕೃತಿಯ ಬಳಿ 4 ಲಕ್ಷ ಹಾಗೂ ಆಕೆಯ ತಾಯಿಯ ಬಳಿ 6ಲಕ್ಷ ಒಟ್ಟು 10 ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಾನೆ. ಇದಾದ ನಂತರ ಪದೇಪದೇ ಆಕೆಯ ಬಳಿ ಹಣಕ್ಕಾಗಿ ಹಾಗೂ ಅವಳ ಪಿತ್ರಜಿತ ಆಸ್ತಿಗಾಗಿ ಪೀಡಿಸುತ್ತಾನೆ.

ಇದಾದ ಸ್ವಲ್ಪ ದಿನಗಳಲ್ಲಿಯೇ ವೈಶಾಖ ನಿಜ ವ್ಯಕ್ತಿತ್ವ ಏನು ಎಂಬುದು ಕೃತಿಗೆ ಅರ್ಥವಾಗುತ್ತದೆ. ಇದಾದ ನಂತರ ಕೆಲವೇ ದಿನಗಳಲ್ಲಿ ಕೃತಿ ತನ್ನ ಪೋಷಕರ ಮನೆಗೆ ಹೋಗುತ್ತಾಳೆ. ಇದಾದ ನಂತರ ಕೆಲವೇ ದಿನಗಳಲ್ಲಿ ಕೃತಿಯ ತಾಯಿಯ ಬಳಿ ನಾನು ಮೊದಲಿನಂತಿಲ್ಲ ಅವಳ ಜೊತೆ ಮಾತನಾಡಲು ಒಂದು ಅವಕಾಶ ಕೊಡಿ ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಕೃತಿಯ ತಾಯಿ ಕೂಡ ಒಪ್ಪುತ್ತಾರೆ. ಒಂದು ಸಂಜೆ ಕೃತಿಯ ರೂಮಿಗೆ ಸೇರಿಕೊಂಡ ವೈಶಾಖ್ ಅವಳೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾನೆ.

ಈ ಮಾತು ಎನ್ನುವುದು ರಾತ್ರಿ ಹತ್ತರವರೆಗೆ ನಿರಂತರವಾಗಿ ಮುಂದುವರೆಯುತ್ತದೆ. ಆಗ ರೂಮಿನ ಒಳಗೆ ಬಂದು ನೋಡಿದ ಕೃತಿಯ ತಾಯಿಗೆ ಮಗಳು ಮಲಗಿರುವ ಸ್ಥಿತಿಯಲ್ಲಿ ಕಾಣಿಸುತ್ತಾಳೆ. ಆಗ ಏನಾಯ್ತು ಎಂದು ಕೇಳಿದಾಗ ಅವಶ್ಯಕ ಅವಳಿಗೆ ತಲೆನೋವು ಬಂದಿದೆ ಅದಕ್ಕಾಗಿ ಊಟ ಮಾಡದೆ ಮಲಗಿದ್ದಾಳೆ ಎಂಬುದಾಗಿ ಹೇಳುತ್ತಾರೆ. ಇದರಿಂದ ಅನುಮಾನಗೊಂಡ ತಾಯಿ ಹತ್ತಿರ ಬಂದು ನೋಡಿದಾಗ ವೈಶಾಖ ನಾನು ಡಾಕ್ಟರನ್ನು ಕರೆಯುತ್ತೇನೆ ಎಂಬುದಾಗಿ ಕಾರಿನ ಕೀಯನ್ನು ಹಿಡಿದು ಓಡುತ್ತಾನೆ.

ಅನುಮಾನ ಬಂದು ಕೃತಿಯ ತಂದೆ ಕೂಡ ಅವನನ್ನು ಅಡ್ಡಗಟ್ಟಿ ಪ್ರಶ್ನೆ ಮಾಡುತ್ತಾರೆ ಆದರೆ ತಪ್ಪಿಸಿಕೊಂಡು ಓಡಿಹೋಗಿರುತ್ತಾನೆ. ಇದಾದನಂತರ ಪೊಲೀಸ್ ಕಂಪ್ಲೇಂಟ್ ನೀಡುತ್ತಾರೆ ಪೊಲೀಸರು ಅವನನ್ನು ಕೆಲವೇ ದಿನಗಳಲ್ಲಿ ಹಿಡಿಯುತ್ತಾರೆ. ಆಗ ವೈಶಾಖ್ ಹೇಳುತ್ತಾನೆ ಮಾತಿನ ನಡುವೆ ವಾಗ್ವಾದ ಮೂಡಿಬಂದು ಉದ್ವೇಗದಿಂದ ಆಕೆಯನ್ನು ನಾನು ತಲೆದಿಂಬಿನಿಂದ ಮುಗಿಸಿದ್ದೇನೆ ಎಂಬುದ್ದಾಗಿ ಹೇಳುತ್ತಾನೆ. ಫೇಸ್ಬುಕ್ ಪ್ರೇಮ ಕೃತಿಗೆ ಎಷ್ಟರಮಟ್ಟಿಗೆ ಮುಳುವಾಗಿದೆ ಎಂಬುದು ನೀವೇ ನೋಡಿ ಸ್ನೇಹಿತರೆ.

Comments are closed.