Neer Dose Karnataka
Take a fresh look at your lifestyle.

ನಟಿ ವಿಜಯಲಕ್ಷ್ಮಿ ತಾಯಿಯ ಅಂತಿಮ ಸಂಸ್ಕಾರದ ಕೊನೆ ಕ್ಷಣದಲ್ಲಿ ಏನಾಗಿ ಹೋಯ್ತು ಗೊತ್ತಾ?? ಇಷ್ಟೇ ಜೀವನ ಸ್ವಾಮಿ.

ನಮಸ್ಕಾರ ಸ್ನೇಹಿತರೇ ಈಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿ ವಿಜಯಲಕ್ಷ್ಮಿಯವರ ಕುರಿತಾದಂತಹ ವಿಚಾರಗಳು ಸಾಕಷ್ಟು ತಿರುವುಗಳನ್ನು ಪಡೆದುಕೊಂಡು ಅವರನ್ನು ದುಃಖದ ಮಡುವಿಗೆ ತಳ್ಳಿದೆ. ಹೌದು ಸ್ನೇಹಿತರೆ ಒಂದು ಕಾಲದಲ್ಲಿ ದಕ್ಷಿಣ ಭಾರತದ ಬಹುಭಾಷಾ ಹಾಗೂ ಬಹುಬೇಡಿಕೆ ನಟಿಯಾಗಿದ್ದ ವಿಜಯಲಕ್ಷ್ಮಿಯವರು ಈಗ ಬದುಕಲು ಕೂಡ ಅವಕಾಶ ಬೇಡುವಂತಾಗಿದೆ.

ಹೌದು ಸ್ನೇಹಿತರೆ ಮೊತ್ತಮೊದಲಬಾರಿಗೆ ವಿಜಯಲಕ್ಷ್ಮಿಯವರು ಸದ್ದು ಮಾಡಿದ್ದು ಸೃಜನ್ ಲೋಕೇಶ್ ರವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡು ನಂತರ ಮದುವೆಯಾಗದೆ ಇದ್ದಿದ್ದು. ಇದಾದನಂತರ ಕನ್ನಡ ಚಿತ್ರರಂಗದಿಂದ ಬಹಳಷ್ಟು ಕಾಲ ದೂರವಾಗಿದ್ದ ವಿಜಯಲಕ್ಷ್ಮಿ ಅವರು ನಂತರ ಮತ್ತೆ ಪ್ರತ್ಯಕ್ಷವಾಗಿದ್ದು ಆಸ್ಪತ್ರೆಯಲ್ಲಿ ಎಂಬುದು ನಮಗೆಲ್ಲ ಗೊತ್ತಿದೆ. ಹೌದು ಸ್ನೇಹಿತರೆ ಆಸ್ಪತ್ರೆಯಲ್ಲಿ ತಮ್ಮ ಅಕ್ಕ ಹಾಗೂ ತಾಯಿಗೆ ಚಿಕಿತ್ಸೆ ಮಾಡುತ್ತಿದ್ದೇವೆ ನಮಗೆ ಇಲ್ಲಿ ಶುಲ್ಕ ಕಟ್ಟಲು ಕೂಡ ಹಣವಿಲ್ಲ ಎಂಬುದಾಗಿ ಬೇಡಿಕೊಂಡಿದ್ದರು.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರು ಆಸ್ಪತ್ರೆಯ 2ಲಕ್ಷ ಶುಲ್ಕವನ್ನು ತಾವೇ ತಮ್ಮ ಕೈಯ್ಯಾರೆ ಪಾವತಿಸಿದ್ದರು. ಇದಾದ ನಂತರ ಕೆಲವು ಸಮಯಗಳ ಕಾಲ ವಿಜಯಲಕ್ಷ್ಮಿ ಅವರು ಸುಮ್ಮನೆ ಇದ್ದರು. ಇದಾದ ನಂತರ ಸ್ವಲ್ಪ ಸಮಯಕ್ಕೆ ನಮಗೆ ಇರಲು ಮನೆ ಬೇಕು ಯಾರಾದರೂ ಮನೆ ಮಾಡಿಕೊಡಿ ಎನ್ನುವುದಾಗಿ ಅಭಿಮಾನಿಗಳಲ್ಲಿ ಅಂಗಲಾಚಿದರು. ನಂತರ ಅಭಿಮಾನಿಯೊಬ್ಬರು ಅವರ ಆಸ್ಪತ್ರೆಯ ಬಿಲ್ಲನ್ನು ಪಾವತಿಸಿ ಅವರನ್ನು ಕಾರವಾರದ ಬಳಿಯ ರೂಮಿನಲ್ಲಿ ಇರಿಸುತ್ತಾರೆ. ಅಲ್ಲಿಯೂ ಕೂಡ ಅವರಿಗೆ ಸರಿ ಬರೆದಿದ್ದ ಕಾರಣದಿಂದಾಗಿ ಮತ್ತೆ ಬೆಂಗಳೂರಿಗೆ ವಾಪಸಾಗುತ್ತಾರೆ. ಬೆಂಗಳೂರಿನ ರೂಮಿನಲ್ಲಿ ಎರಡು ದಿನಗಳ ನಂತರ ತಾಯಿಗೆ ಟಿಫನ್ ಕೊಡಬೇಕೆಂಬ ತಯಾರಿಯಲ್ಲಿದ್ದಾಗ ಅದಾಗಲೇ ಅವರ ತಾಯಿ ಅವರನ್ನು ಬಿಟ್ಟು ಹೋಗಿದ್ದರು.

ಹೌದು ಸ್ನೇಹಿತರೆ ವರ್ಷಗಟ್ಟಲೆ ಗಳ ಕಾಲ ಆತನ ಅಕ್ಕ ಹಾಗೂ ತಾಯಿಗಾಗಿ ಪಟ್ಟಂತಹ ಕಷ್ಟವನ್ನು ನೋಡಿ ಆ ಮಹಾತಾಯಿ ಇಹಲೋಕವನ್ನು ತ್ಯಜಿಸಿದರು. ಈ ಸಂದರ್ಭದಲ್ಲಿ ವಿಜಯಲಕ್ಷ್ಮಿಯವರಿಗೆ ಸಹಾಯ ಮಾಡಿದ್ದು ಹೋಟೆಲ್ನಲ್ಲಿ ಭಾಮಾ ಹರೀಶ್ ರವರು. ನಂತರ ನಟಿ ವಿಜಯಲಕ್ಷ್ಮಿ ಅವರ ತಾಯಿಯ ಕೊನೆಯ ಸಂಸ್ಕಾರಗಳನ್ನು ಮಾಡಲು ಸಹಾಯ ಮಾಡಿದ್ದು ಯಾರು ಗೊತ್ತಾ ಸ್ನೇಹಿತರು ಅವರ ಹೆಸರು ಯೋಗೇಶ್. ತಮ್ಮ ಆಶ್ರಮಕ್ಕೆ ಅವರ ತಾಯಿಯ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಕ್ಕ-ತಂಗಿ ಇಬ್ಬರನ್ನು ಕೂಡ ಕರೆದುಕೊಂಡು ಹೋಗಿ ಸಕಲಶಾಸ್ತ್ರ ಗಳಂತೆ ಎಲ್ಲ ವ್ಯವಸ್ಥೆಗಳನ್ನು ಮಾಡುತ್ತಾರೆ.

ವಿಜಯಲಕ್ಷ್ಮಿ ಅವರದ್ದು ಲಿಂಗಾಯತ ಸಮುದಾಯ ವಾಗಿದ್ದರಿಂದ ಅದೇ ಸಂಪ್ರದಾಯದ ಪ್ರಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಚಿತ್ರರಂಗದವರು ಬರುವುದಾದರೆ ಬರಬಹುದು ಎಂಬುದಾಗಿ ಸೂಚನೆಯನ್ನೂ ನೀಡಲಾಗಿತ್ತು. ಆದರೆ ಮಧ್ಯಾಹ್ನ 12 ಗಂಟೆ ಕಳೆದರೂ ಕೂಡ ಯಾವೊಬ್ಬ ಚಿತ್ರರಂಗದವರು ಕೂಡ ಬಂದಿರಲಿಲ್ಲ. ಚಿತ್ರರಂಗದಲ್ಲಿ ಅಷ್ಟರ ಮಟ್ಟಿಗೆ ಯಶಸ್ಸನ್ನು ಸಾಧಿಸಿದ್ದ ಅಂತಹ ವಿಜಯಲಕ್ಷ್ಮಿಯವರ ತಾಯಿಯ ಕೊನೆಯ ಸಂಸ್ಕಾರಕ್ಕೆ ಕೂಡ ಯಾರು ಬರದಿದ್ದು ಎಲ್ಲರಿಗೂ ದುಃಖವನ್ನು ಮೂಡಿಸಿತ್ತು. ಅದಕ್ಕೆ ಹೇಳೋದಲ್ವಾ ಸ್ನೇಹಿತರೆ ಕೈಯಲ್ಲಿ ಇದ್ದಾಗ ಮಾತ್ರ ಜಗತ್ತು ನಮ್ಮ ಬಳಿಗೆ ಬರುತ್ತದೆ ನಾವು ಕೈಸೋತು ನಿಂತಾಗ ಎಲ್ಲರೂ ನಮ್ಮಿಂದ ದೂರ ಓಡುತ್ತಾರೆ ಎಂಬುದು.

ವಿಜಯಲಕ್ಷ್ಮಿಯವರ ಮಾತು ಕಠಿಣವಾಗಿರಬಹುದು ಆದರೆ ತನ್ನ ತಾಯಿ ಹಾಗೂ ಅಕ್ಕನನ್ನು ಉಳಿಸಿಕೊಳ್ಳಲು ಆಕೆ ಗಂಡು ಮಗುವಿನಂತೆ ಹೋ’ರಾಟ ಮಾಡಿದ್ದು ಖಂಡಿತವಾಗಿಯೂ ಶ್ಲಾಘನೀಯ ಹಾಗೂ ನ್ಯಾಯಪರ ವಾದದ್ದು. ನಂತರ ಯೋಗೇಶ್ ರವರೇ ತನ್ನ ತಾಯಿ ಎಂದು ಭಾವಿಸಿ ಕೊನೆ ಸಂಸ್ಕಾರವನ್ನು ಮಾಡಿ ಮುಗಿಸಿದ್ದಾರೆ. ವಿಜಯಲಕ್ಷ್ಮಿ ಅವರು ಹಿಂದಿನ ಸಮಯದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿರಬಹುದು ಆದರೆ ಈಗ ಅವರು ತಮ್ಮ ತಪ್ಪುಗಳನ್ನು ಕೊಂಡಿದ್ದಾರೆ ಮತ್ತು ಹೊಸ ಜೀವನದ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮುಂದಿನ ದಿನಗಳಲ್ಲಿ ಚಿತ್ರಗಳಲ್ಲಿ ಅವಕಾಶ ದೊರಕಲಿ ಎಂಬುದಾಗಿ ಹಾರೈಸೋಣ. ವಿಜಯಲಕ್ಷ್ಮಿ ಅವರಿಗೆ ವಯಸ್ಸು ಕೇವಲ 40 ಅಷ್ಟೇ. ಖಂಡಿತವಾಗಿ ಅವರ ಬಾಳಲ್ಲಿ ಮತ್ತೆ ಸುಖ ಶಾಂತಿ ನೆಲಸಲಿ ಎಂದು ಆಶಿಸೋಣ.

Comments are closed.