Neer Dose Karnataka
Take a fresh look at your lifestyle.

ವಿಚ್ಚೇದನದ ಬೆನ್ನಲ್ಲೇ ಹೊಸ ನಟಿಯ ಜೊತೆ ನಾಗ ಚೈತನ್ಯ ಹೆಸರು, ಇವರನ್ನೇ ಮದುವೆಯಾಗಿ ಎಂದ ಅಭಿಮಾನಿಗಳು. ಆ ಟಾಪ್ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇಧನದ ಸುದ್ದಿ ಮುಗಿಲು ಮುಟ್ಟಿದೆ. ತಾವು ಮದುವೆಯಾದ ದಿನವೇ ಅಮ್ದರೆ ಅಕ್ಟೋಬರ್ ತಿಂಗಳಿನಲ್ಲಿಯೇ ದಂಪತಿಗಳು ಬೇರೆಯಾಗಬಹುದು ಎಂದು ಊಹಿಸುತ್ತಿದೆ ಟಾಲಿವುಡ್. ಇನ್ನು ಪ್ರೀತಿಸಿ ಮದುವೆಯಾದ ಇವರಿಬ್ಬರೂ ದೂರ ದೂರ ಆಗುತ್ತಿರುವುದು ಸಾಕಷ್ಟು ಮಜಲುಗಳನ್ನು ಕಂಡಿದೆ. ಅದಕ್ಕೆ ಪುಷ್ಠಿಕರಿಸುವ ರೀತಿಯಲ್ಲಿ ಹಲವು ಘಟನೆಗಳೂ ಕೂಡ ನಡೆದಿವೆ.

ನಟ ನಾಗ ಚೈತನ್ಯ ಅವರ ’ಲವ್ ಸ್ಟೋರಿ’ ಚಿತ್ರದ ಪ್ರಚಾರಕ್ಕೆ ದಕ್ಷಿಣ ಭಾರತಕ್ಕೆ ಆಗಮಿಸಿದ್ದರು ನಟ ಅಮಿರ್ ಖಾನ್, ಅಕ್ಕಿನೇನಿ ಕುಟುಂಬದ ಪ್ರೀತಿಯೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ ಮಾತ್ರ ಗೈರಾಗಿದ್ದು ಅಭಿಮಾನಿಗಳಿಗೂ ನೋವುಂಟು ಮಾಡಿತ್ತು. ಆದರೆ ಅಕ್ಕಿನೇನಿ ಕುಟುಂಬದ ಸದಸ್ಯರಾಗಲಿ, ಸಮಂತಾ ನಾಗ ಚೈತನ್ಯ ಯಾರೊಬ್ಬರೂ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನದೇ ಇರುವುದು ಇನ್ನಷ್ಟು ಸಮಸ್ಯೆ ಹುಟ್ಟುಹಾಕಿದೆ.

ನಾಗ ಚೈತನ್ಯ ಸದ್ಯ, ಸಾಯಿ ಪಲ್ಲವಿಯವರೊಂದಿಗೆ ನಟಿಸಿರುವ ’ಲವ್ ಸ್ಟೋರಿ’ ಚಿತ್ರದ ಸಕ್ಸೆಸ್ ನಲ್ಲಿ ಖುಷಿಯಾಗಿದ್ದಾರೆ. ಆದರೆ ತಮ್ಮ ವಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ಹಾಗೆ ಯಾವುದೆ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. ಇನ್ನು ಲವ್ ಸ್ಟೋರಿ ಚಿತ್ರದಲ್ಲಿ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಜೋಡಿ ಅತ್ಯದ್ಭುತ ಕಾಂಬಿನೇಶನ್ ಎನಿಸಿಕೊಂಡಿದ್ದು, ನಾಗ ಚೈತನ್ಯ ಅವರು ಸಾಯಿ ಪಲ್ಲವಿಯನ್ನೇ ವಿವಾಹವಾದರೆ ಚೆನ್ನಾಗಿರುತ್ತೆ ಅತ ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ. ಅದೇನೇ ಇರಲಿ ಸಮಂತಾ ಹಾಗೂ ನಾಗ ಚೈತನ್ಯ ಸಂಬಂಧಕ್ಕೆ ತೆರೆ ಬೀಳುವುದೋ ಎಲ್ಲವೋ ಎನ್ನುವುದೇ ಸದ್ಯದ ಟಾಲಿವುಡ್ ಸಿಕ್ರೆಟ್ ನ್ಯೂಸ್!

Comments are closed.