Neer Dose Karnataka
Take a fresh look at your lifestyle.

ಕೊನೆಗೂ ಸಿಕ್ತು ಅಧಿಕೃತ ಕಾರಣ, ಮುದ್ದಾದ ಜೋಡಿ ಬೇರೆಯಾಗಲು ಕಾರಣವಾದರೂ ಏನು ಗೊತ್ತೇ?? ನಾಗಚೈತನ್ಯ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೊನೆಗೂ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನಕ್ಕೆ ಕೊನೆಗೂ ತೆರೆ ಬಿದ್ದಿದೆ. ಅಧಿಕೃತವಾಗಿಯೇ ದೂರವಾಗಿದ್ದಾರೆ ಸ್ಟಾರ್ ನಟರ ಜೋಡಿ. ಇದು ಟಾಲಿವುಡ್ ಸಿನಿ ಜಗತ್ತಿನಲ್ಲಿ ಬೇಸರದ ಸಂಗತಿಯೇ ಸರಿ. ಯಾಕೆಂದರೆ ಅಕ್ಕಿನೇನಿ ಕುಟುಂಬ ಎಂದರೆ ಟಾಲಿವುಡ್ ನಲ್ಲಿ ವಿಶೇಷವಾದ ಹೆಸರು ಇದೆ. ಹಾಗಾಗಿ ಈ ಕುಟುಂಬದಲ್ಲಿ ನಡೆಯುವ ಎಲ್ಲಾ ವಿಷಯಗಳು ತುಂಬಾನೇ ಸುದ್ದಿ ಮಾಡುತ್ತೆ.

ಹೌದು ಸ್ಯಾಮ್ ಚಾಯ್ ಜೋಡಿ ಬೇರೆಯಾಗಿದ್ದು ದುರದೃಷ್ಟಕರ! ಯಾಕೆಂದರೆ, ಕಳೆದ ನಾಲ್ಕು ವರ್ಷಗಳಿಂದ ದಂಪತಿಯಾಗಿಯೇ ಹಲವಾರು ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಸಿನಿ ಪ್ರಿಯರ ಪ್ರೀತಿಯ ಜೋಡಿ ಎನಿಸಿಕೊಂಡಿದ್ದು. ಇನ್ನು ಸಮಂತಾ ಅಕ್ಕಿನೇನಿ ಕುಟುಂಬದಿಂದ ಯಾಕೆ ಹೊರಬರುವ ನಿರ್ಧಾರ ಮಾಡಿದರು ಎಂದು ಸರಿಯಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಇನ್ನು ಸಮಂತಾ ಅವರ ಬೋಲ್ಡ್ ಆಕ್ಟಿಗ್ ಕಾರಣ ಇರಬಹುದಾ ಎನ್ನುವುದು ಕೆಲವರ ಅಂಬೋಣ.

ಹೌದು ನಟಿ ಸಮಂತಾ ಹಿಂದಿ ವೆಬ್ ಸೀರಿಸ್ ಆದ ’ಫ್ಯಾಮಿಲಿ ಮ್ಯಾನ್ ೨’ ನಲ್ಲಿ ನಟಿ ಸಮಂತಾ ಅವರ ಆಕ್ಟಿಂಗ್ ಗೆ ಫಿದಾ ಆಗದವರೇ ಇಲ್ಲ. ಅಂಥ ಬೋಲ್ಡ್ ಆಂಡ್ ಬ್ರೇವ್ ಆಕ್ಟಿಂಗ್ ಅವರದ್ದು. ಇನ್ನು ಶ್ರಿಲಂಕನ್ ತಮಿಳು ಭಾಷೆಯಲ್ಲಿ ಮಾತನಾಡುವ ಸಮಂತಾ ಅವರ ಇಂಟಿಮೇಟ್ ದೃಶ್ಯಗಳು ಜನರ ಮನಸೆಳೆಯುವಲ್ಲಿ ಸಕ್ಸೆಸ್ ಆಗಿದೆ ಎನ್ನಬಹುದು. ಆದರೆ ಮದುವೆಯಾದ ನಂತರ ಬೋಲ್ಡ್ ಆಕ್ಟಿಂಗ್ ಗೆ ಕೆಲವು ಫ್ಯಾಮಿಲಿಗಳು ಒಪ್ಪುವುದಿಲ್ಲ, ಇನ್ನು ನಾಗ ಚೈತನ್ಯ ಕೂಡ ಇಂಥ ದೃಶ್ಯಗಳಲ್ಲಿ ನಟಿಸುವುದಕ್ಕೆ ಹೆಚ್ಚು ಬೆಂಬಲ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಇದೇ ಅವರ ವಿಚ್ಛೇಧನ ಗಟ್ಟಿಯಾಗುವುದಕ್ಕೆ ಕಾರಣವೋ ಗೊತ್ತಿಲ್ಲ, ಆದರೆ ಈ ವೆಬ್ ಸೀರಿಸ್ ನಿಂದ ಸಮಂತಾ ಕೆರಿಯರ್ ಗೆ ಮಾತ್ರ ಒಂದೊಳ್ಳೆ ಬ್ರೇಕ್ ನೀಡಿದಂತಾಗಿದೆ.

Comments are closed.