Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಟಿ, ಮಿಡಿದ ಹೃದಯಗಳು ಖ್ಯಾತಿಯ ನಟಿ ನಿರೋಷ ರವರು ಈಗ ಹೇಗಿದ್ದಾರೆ ಹಾಗೂ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ನಮ್ಮ ಭಾಷೆಯ ನಟಿಯರಿಗಿಂತ ಹೆಚ್ಚಾಗಿ ಅಂದಿನ ಕಾಲದಲ್ಲಿ ಪರಭಾಷೆಯಿಂದ ಬಂದ ನಟಿಯರೇ ನಟಿಸಿದ್ದು ಹೆಚ್ಚಾಗಿತ್ತು. ಇಂದು ಅದೇ ರೀತಿ ಪರಭಾಷೆಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನಟಿಸಿದಂತಹ ಬಹುಭಾಷಾ ನಟಿಯ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾವು ನಟಿ ನಿರೋಷ ರವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ನಿರೋಷ ರವರು ಶ್ರೀಲಂಕಾದ ಕೊಲಂಬೊದಲ್ಲಿ ಜನಿಸುತ್ತಾರೆ. ಇನ್ನು ಇವರು ತಮಿಳು ಚಿತ್ರರಂಗದ ಖ್ಯಾತ ಹಾಸಿ ನಟಿಯಾಗಿರುವ ಎಮ್ ಆರ್ ರಾಧಾರವರ ಕಿರಿಯ ಮಗಳು ಆಗಿರುತ್ತಾರೆ.

ಇನ್ನು ನಿರೋಷ ರವರು ಚಿತ್ರರಂಗಕ್ಕೆ ಪ್ರವೇಶಿಸಿದ್ದು 1988 ರಲ್ಲಿ ಬಿಡುಗಡೆಯಾದ ತಮಿಳು ಚಿತ್ರದ ಮೂಲಕ. ಇನ್ನು ಇದಾದನಂತರ ತೆಲುಗು ಕನ್ನಡ ಮಲಯಾಳಂ ಹೀಗೆ ಎಲ್ಲಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೂಡ ನಟಿಸುತ್ತಾರೆ ನಟಿ ನಿರೋಷ ರವರು. ಇನ್ನು ಕನ್ನಡದಲ್ಲಿ ನಿರೋಷ ರವರು ನಟಿಸಿದ ಚಿತ್ರಗಳ ಕುರಿತಂತೆ ಹೇಳುವುದಾದರೆ, ಇಬ್ಬರು ಹೆಂಡಿರ ಮುದ್ದಿನ ಗಂಡ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ನಂತರ ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ ಮಿಡಿದ ಹೃದಯಗಳು ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದು ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಈ ಚಿತ್ರದಲ್ಲಿ ನಂತರ ನಿರೋಶಾ ರವರು ಕನ್ನಡದಲ್ಲಿ 10ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಕೊನೆಯಬಾರಿ ಕನ್ನಡ ಚಿತ್ರರಂಗದಲ್ಲಿ ನಿರೋಷ ರವರು ಕಾಣಿಸಿಕೊಂಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬೃಂದಾವನ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಸದ್ಯಕ್ಕೆ ನಿರೋಷ ರವರಿಗೆ ಐವತ್ತು ವರ್ಷ ವಯಸ್ಸಾಗಿದ್ದು ತಮಿಳು ಕಿರುತೆರೆಯ ಧಾರವಾಹಿಗಳಲ್ಲಿ ಹಾಗೂ ಕೆಲವು ಸಿನಿಮಾಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ ನಿರೋಶಾ ರವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚ್ಚಿಕೊಳ್ಳಿ.

Comments are closed.