Neer Dose Karnataka
Take a fresh look at your lifestyle.

ತಾನು ಇಹಲೋಕ ತ್ಯಜಿಸುವ ಮುನ್ನ ತನ್ನ ಸಂಪೂರ್ಣ ಆಸ್ತಿಯನ್ನು ಟಾಪ್ ನಟಿ ಶ್ರೀ ವಿದ್ಯಾ ಏನು ಮಾಡಿದ್ದಾರೆ ಗೊತ್ತೇ? ತಿಳಿದರೆ ಭೇಷ್ ಎನ್ನುತ್ತೀರಿ.

15

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ನಟಿಯರು ತಮ್ಮ ಸೌಂದರ್ಯದ ಮೂಲಕ ನಟಿಯರಾಗಿ ಹೆಸರು ಮಾಡಿದರೆ ಇನ್ನು ಕೆಲವರು ತಮ್ಮ ಪ್ರತಿಭೆಯ ನಟನೆಯ ಮೂಲಕ ಉತ್ತಮ ನಟಿಯಾಗಿ ಹೆಸರು ಮಾಡಿದ್ದಾರೆ. ಇಂದು ನಾವು ಮಾತನಾಡಲು ಹೊರಟಿರುವುದು ನಟಿ ಶ್ರೀವಿದ್ಯಾ ರವರ ಕುರಿತಂತೆ. ಇವರು ಸೌಂದರ್ಯ ಪ್ರತಿಭೆ ಎರಡರಲ್ಲೂ ಕೂಡ ತನ್ನನ್ನು ತಾನು ಸಾಬೀತು ಪಡಿಸಿಕೊಂಡಂತಹ ಕಲಾವಿದೆ. ಶ್ರೀವಿದ್ಯಾ ರವರು 1953 ರಲ್ಲಿ ಜನಿಸುತ್ತಾರೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಶ್ರೀವಿದ್ಯಾ ರವರು ಎಂದರೆ ಖಂಡಿತವಾಗಿ ಒಂದು ಸ್ಥಾನಮಾನ ಗೌರವಗಳು ಇಂದಿಗೂ ಇವೆ. ಶ್ರೀವಿದ್ಯಾ ರವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಬರೋಬ್ಬರಿ ಎಂಟು ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ನಾಯಕ ನಟಿಯಾಗಿ ಮಾತ್ರವಲ್ಲದೆ ಪೋಷಕ ನಟಿಯಾಗಿ ಕಂಠದಾನ ಕಲಾವಿದೆಯಾಗಿ ಸಂಗೀತ ಗಾಯಕಿಯಾಗಿ ಹೀಗೆ ಹಲವಾರು ಪ್ರಕಾರದಲ್ಲಿ ಕಾರ್ಯನಿರ್ವಹಿಸಿದ್ದಾರೆ ಶ್ರೀ ವಿದ್ಯಾ ರವರು. ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಬಾಲಚಂದರ್ ನಿರ್ದೇಶನದ ಸಿನಿಮಾಗಳಲ್ಲಿ. ಇನ್ನು ಶ್ರೀವಿದ್ಯಾ ರವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಅವರಿಗೂ ಹಾಗೂ ಕಮಲ್ ಹಾಸನ್ ಅವರಿಗೆ ಪ್ರೀತಿ ಪ್ರೇಮಗಳು ಇತ್ತು. ಆದರೆ ಅವರು ಮದುವೆಯಾಗಿದ್ದು ನಿರ್ದೇಶಕ ಜಾರ್ಜ್ ಥಾಮಸ್ ರವರನ್ನು. ನಂತರ ಹಲವಾರು ಭಿನ್ನಾಭಿಪ್ರಾಯಗಳಿಂದಾಗಿ ವಿವಾಹ ವಿಚ್ಛೇದನವನ್ನು ನೀಡುತ್ತಾರೆ.

ಇದಾದ ನಂತರ ಮತ್ತೊಬ್ಬ ನಿರ್ದೇಶಕ ಭರತ್ ನನ್ನ ಮದುವೆಯಾಗುತ್ತಾರೆ ಅವನು ಅವರ ಆಸ್ತಿಯನ್ನು ಲಪಟಾಯಿಸಲು ನೋಡಿದಾಗ ಕೋರ್ಟಿನಲ್ಲಿ ಪ್ರಕರಣವನ್ನು ಗೆಲ್ಲುತ್ತಾರೆ. 2013 ರಲ್ಲಿ ಶ್ರೀವಿದ್ಯಾ ರವರಿಗೆ ತನಗೆ ಕ್ಯಾನ್ಸರ್ ಇದೆ ಎಂಬ ವಿಚಾರ ತಿಳಿದು ಬರುತ್ತದೆ. ಇದಾದ ನಂತರ ಅವರು ಮಹತ್ವದ ನಿರ್ಧಾರ ಮಾಡಿ ಒಂದು ಚಾರಿಟೇಬಲ್ ಟ್ರಸ್ಟ್ ಅನ್ನು ತೆರೆದು ಅದರಿಂದ ಪ್ರತಿಭಾನ್ವಿತ ಹಾಗೂ ಬಡ ನೃತ್ಯಗಾರ ಹಾಗೂ ಗಾಯಕರಿಗೆ ಸ್ಕಾಲರ್ಶಿಪ್ ನೀಡುತ್ತಾರೆ. ತಾನು ಕೊನೆಯುಸಿರೆಳೆಯುವ ಸಂದರ್ಭದಲ್ಲಿ ತನ್ನ ಆಸ್ತಿಯನ್ನು ತನ್ನ ಮನೆಯ ಕೆಲಸದವರಿಗೆ ಆಪ್ತ ವರ್ಗದವರಿಗೆ ಹಾಗೂ ಊರಿನ ಸಾಮಾಜಿಕ ಕಾರ್ಯಗಳಿಗಾಗಿ ದೇಣಿಗೆಯಾಗಿ ಕೊಟ್ಟುಬಿಡುತ್ತಾರೆ. ನಟಿ ಶ್ರೀವಿದ್ಯಾ ರವರ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.