Neer Dose Karnataka
Take a fresh look at your lifestyle.

ಯಾರಿಗೂ ತಿಳಿಯದ ಗಂಡನ ಒಂದು ಸೀಕ್ರೆಟ್ ತಿಳಿಸಿದ ಎಬಿ ಡಿವಿಲಿಯರ್ಸ್ ಪತ್ನಿ, ಆ ಸೀಕ್ರೆಟ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಮ್ಮ ದೇಶದಲ್ಲಿ ಐಪಿಎಲ್ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಐಪಿಎಲ್ ವಿಷಯಕ್ಕೆ ಬಂದಾಗ ಸೌತ್ ಆಫ್ರಿಕಾದ ಈ ಬ್ಯಾಟ್ಸ್ ಮ್ಯಾನ್ ಖಂಡಿತವಾಗಿಯೂ ಎಲ್ಲರ ನೆಚ್ಚಿನ ಆಟಗಾರರ ಲಿಸ್ಟಿನಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರವಸೆಯ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಅವರ ಕುರಿತಂತೆ. ಹೌದು ಸ್ನೇಹಿತರೆ ಎಬಿ ಡಿವಿಲಿಯರ್ಸ್ ಬಂದರೆ ಸಾಕು ಖಂಡಿತವಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ಇಂದಿನವರೆಗೂ ಕೂಡ ಇದೆ. ಹಲವಾರು ಸಂದರ್ಭಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದ ಅಂತಹ ಅದ್ಭುತ ಕ್ರಿಕೆಟಿಗ ಎಬಿ ಡಿವಿಲಿಯರ್ಸ್. ಇನ್ನು ಎಬಿಡಿ ಅವರ ಕುರಿತಂತ ಹಲವಾರು ರಹಸ್ಯ ವಿಚಾರಗಳನ್ನು ಅವರ ಪತ್ನಿಯಾಗಿರುವ ಡೇನಿಯಲ್ ಡಿವಿಲಿಯರ್ಸ್ ರವರು ಹೇಳಿಕೊಂಡಿದ್ದಾರೆ.

ಹೌದು ಸ್ನೇಹಿತರೆ ಡೇನಿಯಲ್ ಡಿವಿಲಿಯರ್ಸ್ ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಸಂದರ್ಭದಲ್ಲಿ ಅಭಿಮಾನಿಗಳು ಎಬಿ ಡಿವಿಲಿಯರ್ಸ್ ಗಂಡನಾಗಿ ಹೇಗೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ಎಬಿಡಿ ವಿಲಿಯರ್ಸ್ ಅವರ ಪತ್ನಿಯಾಗಿರುವ ಡೇನಿಯಲ್ ಡಿವಿಲಿಯರ್ಸ್ ಅವರು ತಮ್ಮ ಗಂಡ ತುಂಬಾ ರೋಮ್ಯಾಂಟಿಕ್ ಎಂಬುದಾಗಿ ಕೂಡ ಹೇ ಳಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಗಂಡನಾಗಿ ತಂದೆಯಾಗಿ ಎರಡರಲ್ಲಿ ಕೂಡ ಮಿಸ್ಟರ್ ಪರ್ಫೆಕ್ಟ್ ಎಂಬುದಾಗಿ ಹೇಳಿ ಕೊಂಡಿದ್ದಾರೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ಐದು ವರ್ಷಗಳ ಹಿಂದೆ ಭಾರತ ಪ್ರವಾಸದಲ್ಲಿದ್ದಾಗ ಡೇನಿಯಲ್ ಡಿವಿಲಿಯರ್ಸ್ ಅವರನ್ನು ಕೂಡ ಎಬಿ ಡಿವಿಲಿಯರ್ಸ್ ಅವರು ಕರೆಸಿಕೊಂಡಿದ್ದರು. ಇನ್ನು ಪ್ರೀತಿಯ ಪ್ರತೀಕವಾಗಿರುವ ತಾಜ್ಮಹಲ್ ಎದುರಿಗೆ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದರು. ಇನ್ನು ಐದು ವರ್ಷದ ಹಿಂದೆ ಮದುವೆಯಾಗಿರುವ ಇವರಿಬ್ಬರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಇನ್ನು ಎಬಿಡಿ ವಿಲಿಯರ್ಸ್ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.