Neer Dose Karnataka
Take a fresh look at your lifestyle.

ಕೊನೆಯುಸಿರೆಳೆದ ನಂತರ ವ್ಯಕ್ತಿಯ ಎರಡು ಕಾಲಿನ ಹೆಬ್ಬೆರುಳು ಗಳನ್ನು ಒಟ್ಟಿಗೆ ಸೇರಿಸಿ ದಾರದಿಂದ ಕಟ್ಟುವುದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಧರ್ಮದ ಆಚರಣೆಯಲ್ಲಿ ಹಲವಾರು ಆಚಾರ ಸಂಪ್ರದಾಯಗಳು ಇವೆ. ಅವುಗಳ ಹಿಂದಿನ ರಹಸ್ಯವನ್ನು ಇಂದಿಗೂ ಕೂಡ ಕೆಲವು ಅರ್ಥವಾಗಿಲ್ಲ. ಅದರಲ್ಲಿ ಒಂದರ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಸನಾತನ ಸಂಸ್ಕೃತಿಯನ್ನು ವುದು ಪ್ರಪಂಚದಲ್ಲಿ ಅತ್ಯಂತ ಪ್ರಾಚೀನ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಹಾಗಾಗಿ ನಮ್ಮ ಹಿಂದೂ ಧರ್ಮದಲ್ಲಿ ಅಸಂಖ್ಯಾತ ಆಚರಣೆಗಳು ಹಾಗೂ ಕಟ್ಟುಪಾಡುಗಳಿವೆ.

ಇನ್ನೊಬ್ಬ ಮನುಷ್ಯ ಹುಟ್ಟಿದ್ದಾನೆ ಅಂದರೆ ಆತನಿಗೆ ಅಂತ್ಯ ಕೂಡ ಇದ್ದೇ ಇರುತ್ತದೆ. ಒಬ್ಬ ಮನುಷ್ಯ ಹುಟ್ಟಿದಾಗ ಜನರು ಎಷ್ಟು ಸಂತೋಷ ಪಡುತ್ತಾರೋ ಹಾಗೂ ಆತನ ಕೊನೆ ಉಸಿರು ಎಳೆದಾಗ ಕೂಡ ಅಷ್ಟೇ ದುಃಖವನ್ನು ಪಡುತ್ತಾರೆ. ಹೀಗಾಗಿ ಹುಟ್ಟಿದಂತಹ ಪ್ರತಿಯೊಂದು ವಸ್ತುವಿಗೂ ಕೂಡ ಅಂತ್ಯ ಖಂಡಿತವಾಗಿಯೂ ಇದ್ದೇ ಇರುತ್ತದೆ ಎಂಬುದು ಇದರಲ್ಲಿ ಸಾಬೀತಾಗುತ್ತದೆ. ಇನ್ನು ಹುಟ್ಟಿನಿಂದ ಕೊನೆಯುಸಿರೆಳೆಯುವ ತನಕ ಮನುಷ್ಯ ಹಲವಾರು ಆಚರಣೆಗಳನ್ನು ಹಾಗೂ ಕಟ್ಟುಪಾಡುಗಳನ್ನು ನೋಡಿರುತ್ತಾನೆ ಹಾಗೂ ಆತ ಕೂಡ ಅದಕ್ಕೆ ಒಳಗಾಗಿರುತ್ತಾರೆ.

ಇನ್ನು ಇಂದಿನ ವಿಷಯದಲ್ಲಿ ನಾವು ಮನುಷ್ಯ ಕೊನೆಯುಸಿರೆಳೆದ ನಂತರ ಕೊನೆಯ ವಿಧಿವಿಧಾನವನ್ನು ಮಾಡುವಾಗ ಆತನ ಎರಡು ಬೆರಳುಗಳನ್ನು ಕಟ್ಟಲಾಗುತ್ತದೆ ಇದಕ್ಕೆ ಇರುವ ವೈಜ್ಞಾನಿಕ ಹಾಗೂ ಪುರಾತನ ಆಚರಣೆಯ ನಂಬಿಕೆ ಎರಡನ್ನು ಕೂಡ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ. ಹೌದು ಗೆಳೆಯರೇ ಒಬ್ಬ ಮನುಷ್ಯ ಕೊನೆಯುಸಿರೆಳೆದ ನಂತರ ಆತನ ಕೊನೆಯ ವಿಧಿವಿಧಾನ ಸಂಸ್ಕಾರಗಳನ್ನು ಮಾಡಬೇಕಾದರೆ ಆತನ ಎರಡು ಹೆಬ್ಬೆರಳುಗಳನ್ನು ಕಟ್ಟಿರುತ್ತಾರೆ.

ಧಾರ್ಮಿಕವಾಗಿ ಇದಕ್ಕೆ ಕಾರಣವೇನೆಂದು ಹೇಳುವುದಾದರೆ ಆತನ ಆತ್ಮವು ಮನೆಯನ್ನು ಪ್ರವೇಶಿಸಬಾರದು ಎಂಬ ಕಾರಣಕ್ಕಾಗಿ ಆತನ ಎರಡು ಹೆಬ್ಬೆರಳುಗಳನ್ನು ಕೂಡ ದಾರದಿಂದ ಕಟ್ಟಲಾಗುತ್ತದೆ. ಹೌದು ಸ್ನೇಹಿತರೆ ಆತ ಕೊನೆಯುಸಿರೆಳೆದ ನಂತರ ಹಾಗೂ ಆತನ ಕೊನೆಯ ಸಂಸ್ಕಾರಗಳು ಮುಗಿಯುವ ತನಕವೂ ಕೂಡ ಆತನ ಆತ್ಮವು ಅಲ್ಲಿಯ ಓಡಾಡಿಕೊಂಡಿರುತ್ತವೆ ಹೀಗಾಗಿ ಅದು ಆತನ ಮನೆಯೊಳಗೆ ಪ್ರವೇಶ ಮಾಡಬಾರದು ಎಂಬ ಕಾರಣಕ್ಕಾಗಿ ಈ ವಿಧಾನವನ್ನು ಧಾರ್ಮಿಕವಾಗಿ ಮಾಡುತ್ತಾರೆ ಎಂದು ನಂಬಿಕೆ.

ಇನ್ನು ಈ ಆಚರಣೆಯನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಮನುಷ್ಯ ಕೊನೆಯುಸಿರೆಳೆದ ನಂತರ ಆತನ ದೇಹದಲ್ಲಿ ರಕ್ತಸಂಚಾರ ಎನ್ನುವುದು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಆತನ ಎರಡು ಕಾಲುಗಳು ಕೂಡ ಅಗಲ ವಾದರೆ ಮತ್ತೆ ಅದನ್ನು ಒಂದು ಸೇರಿಸಲು ಸಾಧ್ಯವಾಗುವುದಿಲ್ಲ ಇದಕ್ಕಾಗಿಯೇ ಕೊನೆಯುಸಿರೆಳೆದ ಕೂಡಲೇ ಆತನ ಕಾಲಿನ ಎರಡೂ ಹೆಬ್ಬೆರಳನ್ನು ಕಟ್ಟಲಾಗುತ್ತದೆ. ಇನ್ನೂ ಒಂದು ಲೆಕ್ಕದಲ್ಲಿ ಹೇಳಬಹುದಾದರೆ ಅಂದಿನ ಕಾಲದಿಂದಲೂ ಕೂಡ ನಮ್ಮ ಪೂರ್ವಜರು ಇದೇ ಕಾರಣಕ್ಕಾಗಿ ಕಟ್ಟಿಕೊಂಡು ಬಂದರು ಬಂದಿರಬಹುದು.

ಏಕೆಂದರೆ ಇಂದಿನ ಕಾಲದಲ್ಲಿ ನಾವು ಅವಿಷ್ಕರಿಸಿರುವ ಹಲವಾರು ವಿಚಾರಗಳನ್ನು ನಮ್ಮ ಪೂರ್ವಜರು ಅಂದಿನ ಕಾಲದಲ್ಲೇ ಮಾಡಿ ಮುಗಿಸಿದ್ದಾರೆ. ಹೀಗಾಗಿ ಈ ಕಾರ್ಯವನ್ನು ಕೂಡ ಅದೇ ಮಾದರಿಯಲ್ಲಿ ಅಂದಿನ ಕಾಲದಿಂದ ಇಂದಿನವರೆಗೂ ಕೂಡ ಅವರು ಆಚರಿಸಿಕೊಂಡು ಬಂದಿರಬಹುದು ಎಂಬ ಅನುಮಾನಗಳು ಕೂಡ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪಿದೇ ಹಂಚಿಕೊಳ್ಳಿ.

Comments are closed.