ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗೆದ್ದ ಬೃಂದ ಮತ್ತು ರಾಹುಲ್ ಗೆ ಸಿಕ್ಕ ಹಣ ಎಷ್ಟು ಗೊತ್ತಾ?? ಉಳಿದವರಿಗೆ ನೀಡಿದ ಅಸಲಿ ದುಡ್ಡು ಎಷ್ಟು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಅದೊಂದು ಸಂಭ್ರಮದ ಸಂಜೆ. ನೋಡುಗರ ಕಣ್ಮನ ತಣಿಸುವ ಸಂಜೆ. ವೇದಿಕೆಯ ತುಂಬೆಲ್ಲಾ ಜಗಜಗಿಸುವ ಬೆಳಕು, ವೇದಿಕೆಯ ಮುಂದೆ ಕಾತುರದಿಂದ ಕಾದ ನೂರಾರು ಕಣ್ಗಳು, ಯಾರನ್ನು ಗೆಲ್ಲಿಸಬೇಕು, ಸೋತವರಿಗೆ ಹೇಗೆ ಸಮಾಧಾನ ಮಾಡಬೇಕು ಎಂಬ ಚಿಂತೆಯಲ್ಲಿ ಎದುರು ಕುಳಿತ ಜಡ್ಜ್ ಗಳು, ಇನ್ನೇನು ಗೆದ್ದ ಜೋಡಿಯ ಹೆಸರನ್ನು ಹೇಳಬೇಕು ಎಂದು ಹವಣಿಸುತ್ತಿರುವ ನಿರೂಪಕಿ, ನಾವಾಗಬಹುದಾ ಗೆಲ್ಲುವ ಜೋಡಿ ಎಂದು ಕೈಕಟ್ಟಿ ಕುಳಿತ ಸ್ಪರ್ಧಿಗಳು… ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನ ಕೊನೆಯ ಕ್ಷಣದ ಚಿತ್ರಣ ಇದು!

ಹೌದು ಸ್ನೇಹಿತರೆ, ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡಾನ್ಯ ಶೋಗೆ ತೆರೆಬಿದ್ದಿದೆ. ಯಾರಾಗಬಹುದು ಟೈಟಲ್ ವಿನ್ನರ್ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ವಿನ್ನರ್ ಮತ್ಯಾರೂ ಅಲ್ಲ, ಇಡೀ ಕರ್ನಾಟಕದ ನೃತ್ಯ ಪ್ರಿಯರು ಮೆಚ್ಚಿ ಕೊಂಡಾಡಿದ ಜೋಡಿ ಬೃಂದಾ ಹಾಗೂ ರಾಹುಲ್. ಆರಂಭದಿಂದಲೂ ವಿಶೇಷವಾದ ನೃತ್ಯ ಪ್ರದರ್ಶನ ನೀಡುತ್ತಾ ಬಂದಿದ್ದ ಈ ಜೋಡಿ ಪ್ರತಿವಾರ ಹೊಸ ಹೊಸ ಕಾನ್ಸೆಪ್ಟ್ ನೊಂದಿಗೆ ಬಂದು ನೃತ್ಯ ಪ್ರದರ್ಶನ ಮಾಡುತ್ತಿದ್ದರು.

ಇದುವರೆಗೆ ದಿ ಬೆಸ್ಟ್ ಪರ್ಫಾರ್ಮೆನ್ಸ್ ಕೊಟ್ಟಿರುವ ಈ ಜೋಡಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಟೈಟಲ್ ಗೆದ್ದಿದೆ. ಇವರಿಗೆ ೨೦ ಲಕ್ಷ ಮೌಲ್ಯದ ಸೈಟ್ ಹಾಗೂ ಐದು ಲಕ್ಷ ರೂಪಾಯಿ ನಗದು ಕೊಡಲಾಗಿದೆ. ಇನ್ನು ರನ್ನರ್ ಅಪ್ ಆಗಿ ವಿಕ್ರಾಂತ್ ಮತ್ತು ಶಿಫಾಲಿ ಆಯ್ಕೆಯಾಗಿದ್ದಾರೆ. ಇವರಿಗೆ ೧೦ ಲಕ್ಷ ನಗದು ಬಹುಮಾನ ಲಭಿಸಿದೆ. ೨ನೇ ರನ್ನರ್ ಅಪ್ ಆಗಿ ಸೂರ್ಯತೇಜ ಮತ್ತು ಅಮೂಲ್ಯ ಐದು ಲಕ್ಷ ರೂಪಾಯಿಯನ್ನು ತನ್ನದಾಗಿಸಿಕೊಂಡಿದ್ದಾರೆ. ೨೦೨೧ರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಇಷ್ಟು ಬೇಗ ಮುಗಿದೇ ಹೋಯ್ತಾ ಎಂದು ಬೇಸರ ಪಡುತ್ತಿರುವ ಜನತೆಗೆ ಮತ್ತೆ ಯಾವಾಗ ಸಿಹಿ ಸುದ್ದಿ ಸಿಗುವುದೋ ಕಾದು ನೋಡಬೇಕು.

Leave a Reply

Your email address will not be published. Required fields are marked *