Neer Dose Karnataka
Take a fresh look at your lifestyle.

ಮೊದಲ ದಿನವೇ ದಾಖಲೆಗಳನ್ನು ಸೃಷ್ಟಿಸಿದ ಸಲಗ, ಬಾಕ್ಸ್ ಆಫೀಸ್ ನಲ್ಲಿ ಧೂಳು ಎಬ್ಬಿಸಿ ಬಾಚಿದ್ದು ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂತೂ-ಇಂತೂ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರ ಕನ್ನಡ ಪ್ರೇಕ್ಷಕ ಮಹಾ ಪ್ರಭುಗಳಿಗೆ ಮನರಂಜನೆಯ ರಸದೌತಣವನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಕೆಪಿ ಶ್ರೀಕಾಂತ್ ನಿರ್ಮಾಣದಲ್ಲಿ ದುನಿಯಾ ವಿಜಯ್ ಚೊಚ್ಚಲ ಬಾರಿ ನಿರ್ದೇಶಿಸಿರುವ ಸಲಗ ಚಿತ್ರ ರಾಜ್ಯಾದ್ಯಂತ ಮೊದಲ ದಿನವೇ 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ಮೊದಲ ದಿನವೇ 1200ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಕಂಡಿದೆ.

ಇನ್ನು ಚಿತ್ರದಲ್ಲಿ ದುನಿಯಾ ವಿಜಯ್ ರವರ ಸಲಗ ಪಾತ್ರ ಪ್ರಮುಖ ಆಕರ್ಷಣೆ ಎಂದು ಹೇಳಬಹುದಾಗಿದೆ. ಇನ್ನು ಚಿತ್ರದಲ್ಲಿ ಮಾಸ್ತಿಯವರ ಕಚಗುಳಿ ಇಡುವ ಡೈಲಾಗ್ ಗಳು ಹಾಗೂ ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಪ್ರಮುಖ ಆಕರ್ಷಣೆಯೆಂದರೆ ಕೂಡ ತಪ್ಪಾಗಲಾರದು. ಡಾಲಿ ಧನಂಜಯ್ ರವರು ಖಡಕ್ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಸಂಜನಾ ಆನಂದರವರು ನಾಯಕ ನಟಿಯಾಗಿ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಟ್ಟಾರೆಯಾಗಿ ಹಬ್ಬದ ದಿನಕ್ಕೆ ಕನ್ನಡ ಪ್ರೇಕ್ಷಕ ಮಹಾ ಪ್ರಭುಗಳಿಗೆ ಮನರಂಜನೆಯ ಫುಲ್ ಮೀಲ್ಸ್ ಕೊಟ್ಟಿದೆ ನಮ್ಮ ಸಲಗ ಚಿತ್ರತಂಡ.

ಮೊದಲ ದಿನವೇ ಸಲಗ ಚಿತ್ರ ರಾಜ್ಯಾದ್ಯಂತ ಹಲವಾರು ಹೌಸ್ ಫುಲ್ ಪ್ರದರ್ಶನ ಗಳನ್ನು ಕಂಡಿದ್ದು ಬಾಕ್ಸಾಫೀಸ್ ನಲ್ಲಿ ಕೂಡ ಕಮಾಲ್ ಮಾಡಿದೆ. ಗಾಂಧಿನಗರದ ಮಂದಿ ಹೇಳುವಂತೆ ದುನಿಯಾ ವಿಜಯ್ ನಟನೆಯ ಸಲಗ ಚಿತ್ರ ರಾಜ್ಯಾದ್ಯಂತ ಒಟ್ಟಾರೆಯಾಗಿ ಬಾಕ್ಸಾಫೀಸ್ ನಲ್ಲಿ ಎಂಟರಿಂದ 10 ಕೋಟಿ ಎಷ್ಟು ಕಲೆಕ್ಷನ್ ಮಾಡಿರಬಹುದು ಎಂಬುದಾಗಿ ಹೇಳಲಾಗುತ್ತಿದೆ. ಇನ್ನು ಇದು ದುನಿಯಾ ವಿಜಯ್ ರವರ ಸಿನಿ ಜೀವನದಲ್ಲಿ ಅತ್ಯಧಿಕ ಮೊತ್ತ ಎಂದು ಹೇಳ ಬಹುದಾಗಿದೆ. ಸಲಗ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.