Neer Dose Karnataka
Take a fresh look at your lifestyle.

ಜನ ಕಷ್ಟದಲ್ಲಿ ಇರುವದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಕೆಜಿ ಕೆಜಿ ಚಿನ್ನದ ಅಂಗಿ ಹಾಕಿಕೊಂಡು ಓಡಾಡುತ್ತಿದ್ದ, ಆದರೆ ಆಮೇಲೆ ಏನಾಗಿ ಹೋದ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಮ್ಮ ಭಾರತ ದೇಶ ಚಿನ್ನ ಖರೀದಿಯಲ್ಲಿ ಇಡೀ ಪ್ರಪಂಚದಲ್ಲಿ ಟಾಪ್ ದೇಶ. ನಮ್ಮ ದೇಶದಲ್ಲಿ ಚಿನ್ನವನ್ನು ಖರೀದಿ ಮಾಡುವಷ್ಟು ಪ್ರಪಂಚದಲ್ಲಿ ಯಾವ ದೇಶದಲ್ಲಿ ಕೂಡ ಖರೀದಿ ಮಾಡುವುದಿಲ್ಲ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಇನ್ನು ನಾವು ಇಂದು ಮಾತನಾಡಲು ಹೊರಟಿರುವುದು ಮಹಾರಾಷ್ಟ್ರದಲ್ಲಿ ದತ್ತಾತ್ರೇಯ ಎಂಬ ಗೋಲ್ಡ್ ಮ್ಯಾನ್ ಇದ್ದ. ಇತರ ಕುರಿತಂತೆ ಈ ಹಿಂದೆ ನೀವು ಸುದ್ದಿಮಾಧ್ಯಮಗಳಲ್ಲಿ ಕೇಳಿರುತ್ತೀರಿ ಅಥವಾ ನೋಡಿರುತ್ತೇವೆ. ಈತ ಚಿನ್ನದ ಅಂಗಿಯನ್ನೇ ಮಾಡಿಸಿಕೊಂಡು ಹಾಕಿಕೊಂಡಿದ್ದ. ಹೌದು ಸ್ನೇಹಿತರೆ ದತ್ತಾತ್ರೆಯ ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಅಧಿಕ ಬೆಲೆಬಾಳುವ 22 ಕ್ಯಾರೆಟ್ ಮೌಲ್ಯದ ಚಿನ್ನವನ್ನು ಶರ್ಟ್ ಮಾಡಿ ಹಾಕಿಕೊಂಡಿದ್ದ. ಇನ್ನು ದತ್ತಾತ್ರೇಯ ಈ ಚಿನ್ನದ ಅಂಗಿಯನ್ನು ಮಾಡಿಸಿಕೊಂಡಿದ್ದು ತನ್ನ ಸ್ನೇಹಿತನ ಮೂಲಕ.

ಅವನ ಸ್ನೇಹಿತ ಚಿನ್ನದ ಅಂಗಡಿಯ ಮಾಲೀಕ ನಾಗಿದ್ದ. ಇನ್ನು ಚಿನ್ನದ ಶರ್ಟಿಗೆ 22 ಕ್ಯಾರೆಟ್ ಮೌಲ್ಯದ 14000 ಚಿನ್ನದ ತುಂಡುಗಳನ್ನು ಹಾಕಲಾಗಿತ್ತು. ಇನ್ನು ಈ ಬಂಗಾರದ ಶರ್ಟನ್ನು ಮಾಡಲು 15 ಜನ ಅಕ್ಕ ಸಾಲಿ ಗರಿಗೆ 16 ದಿನ ಸಮಯ ಬೇಕಾಗಿತ್ತು. ಇನ್ನು ಈ ಶರ್ಟನ್ನು ಮಾಡಲು ಅಕ್ಕಸಾಲಿಗರಿಗೆ ದಿನದಲ್ಲಿ 18 ಗಂಟೆ ಕೆಲಸ ಮಾಡಬೇಕಾಗಿತ್ತು. ಇನ್ನು ಈ ಬಂಗಾರದ ಶರ್ಟು ಬರೋಬ್ಬರಿ ಮೂರೂವರೆ ಕೆಜಿಯಷ್ಟು ತೂಕವನ್ನು ಹೊಂದಿತ್ತು. ಇನ್ನು ಈತನನ್ನು ಅಲ್ಲಿಯ ಜನರು ಬಂಗಾರದ ಮನುಷ್ಯ ಎಂಬುದಾಗಿ ಕರೆಯುತ್ತಿದ್ದರು.

ಇಷ್ಟು ಭಾರದ ಹಾಗೂ ಚಿನ್ನದ ಶರ್ಟನ್ನು ಹಾಕಿಕೊಂಡಿದ್ದ ಈತ ಗಿನ್ನಿಸ್ ದಾಖಲೆಯಲ್ಲಿ ಕೂಡ ಶಾಮೀಲಾಗಿದ್ದ. ಇನ್ನು ಇಷ್ಟೆಲ್ಲಾ ಹಣವನ್ನು ಹಾಗೂ ಜನ ಬೆಂಬಲವನ್ನು ಹೊಂದಿದ್ದ ಈತ ಒಂದು ದಿನ ಮಧ್ಯ ರೋಡಿನಲ್ಲಿ ಕೊನೆಯುಸಿರೆಳೆದಿದ್ದ. ಹಾಗಿದ್ದರೆ ಇದಕ್ಕೆ ಕಾರಣ ಯಾರು ಇದನ್ನು ಮಾಡಿದವರು ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ.

ಹೌದು ಗೆಳೆಯರೇ ದತ್ತಾತ್ರೇಯ ಚಿನ್ನದ ಶರ್ಟ್ ಹಾಕಿಕೊಂಡಿದ್ದ ಆದರೆ ಆತ ಮನಸ್ಸಿನಿಂದ ಅಷ್ಟೊಂದು ಒಳ್ಳೆಯವನಾಗಿ ಇರಲಿಲ್ಲ. ಇನ್ನು ಇವನ ಬಳಿ ಜನರು ಚೀಟಿಯ ರೀತಿ ಹಣವನ್ನು ನೀಡಿದ್ದರು. ಇನ್ನು ಜನರ ಹಣಕ್ಕೆ ವಾಪಾಸ್ ಬಡ್ಡಿ ನೀಡದೆ ಉಡಾಫೆ ಮಾತುಗಳನ್ನು ಆಡುತ್ತಿದ್ದ, ಈ ಲೆಕ್ಕಗಳು ಕೋಟಿಯಲ್ಲಿ ಇದ್ದವು. ಕಷ್ಟದ ಸಮಯದಲ್ಲಿ ಉಪಯೋಗಕ್ಕೆ ಬರಲಿ ಎಂದು ಈತನ ಬಳಿ ಬಡವರು ಚೀಟಿಯ ರೀತಿಯ ಹಣ ಕಟ್ಟುತ್ತಿದ್ದರು. ಹೀಗಾಗಿ ಹಲವಾರು ಜನರಿಗೆ ಈತನ ಮೇಲೆ ಸಾಕಷ್ಟು ಅಸಮಾಧಾನ ಉಂಟುಮಾಡಿತ್ತು. ಒಮ್ಮೆ ಒಂದು ದಿವಸ ಈತನ ಮಗನ ವಯಸ್ಕರಾದ ಸ್ನೇಹಿತರು ಪಕ್ಕದಲ್ಲಿ ಒಬ್ಬನ ಜನ್ಮದಿನವಿದೆ ಬನ್ನಿ ಎಂಬುದಾಗಿ ಆಮಂತ್ರಣ ನೀಡುತ್ತಾರೆ.

ಅವರ ಮಾತನ್ನು ನಂಬಿ ದತ್ತಾತ್ರೆಯ ಗಾಡಿ ಹತ್ತಿ ಹೊರಡುತ್ತಾನೆ. ಗಾಡಿ ಸಮಾರಂಭಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಹಲವಾರು ಜನರ ಗುಂಪು ಆತನ ಗಾಡಿಯನ್ನು ಅಡ್ಡಗಟ್ಟಿ ಆತನನ್ನು ಮಾರ್ಗಮಧ್ಯದಲ್ಲಿ ಮುಗಿಸಿಬಿಡುತ್ತಾರೆ. ಇನ್ನು ಇವನ ಕಾರಿನ ಹಿಂದೆ ಬರುತ್ತಿದ್ದ ಮಗ ಬಂದಿದ್ದನ್ನು ನೋಡಿ ಅಲ್ಲಿರುವವರೆಲ್ಲ ಓಡಿಹೋಗುತ್ತಾರೆ. ಇನ್ನು ಆರೋಪಿಗಳು ಪೊಲೀಸರ ಬಳಿಯೂ ಕೂಡ ಇದನ್ನೇ ಹೇಳುತ್ತಾರೆ. ಅದೇನೋ ಗಾದೆ ಹೇಳುತ್ತಾರಲ್ಲ ಸ್ನೇಹಿತರೆ ಬಡವರ ಹಣಕ್ಕೆ ಕೈ ಹಾಕಿದರೆ ಖಂಡಿತವಾಗಿಯೂ ಅದು ಪರಿಣಾಮವನ್ನು ಬೀರುತ್ತದೆ ಎಂಬುದು. ದತ್ತಾತ್ರೇಯನ ವಿಚಾರದಲ್ಲಿ ಕೂಡ ಇದೆ ಆಗಿರೋದು. ಇನ್ನು ಈ ವಿಚಾರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.