Neer Dose Karnataka
Take a fresh look at your lifestyle.

ಇಡೀ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಲಗ ಹಾಗೂ ಕೋಟಿಗೊಬ್ಬ ನಡುವೆ ಗೆದ್ದದ್ದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಸಾಕಷ್ಟು ಸಮಯಗಳಿಂದ ನಿಂತ ನೀರಿನಂತೆ ಅಚಲವಾಗಿತ್ತು. ಆದರೆ ಸಲಗ ಹಾಗೂ ಕೋಟಿಗೊಬ್ಬ3 ಚಿತ್ರಗಳು ಬಿಡುಗಡೆ ಆಗುವುದರ ಮೂಲಕ ಮತ್ತೊಮ್ಮೆ ಅದ್ದೂರಿಯಾಗಿ ಚಲನೆಗೆ ನಿಂತಿದೆ. ಹೌದು ಗೆಳೆಯರೆ ದುನಿಯಾ ವಿಜಯ್ ನಟನೆಯ ಸಲಗ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಒಂದು ದಿನದ ಅಂತರದಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದ್ದವು.

ಇನ್ನು ಹಬ್ಬದ ಸಂದರ್ಭ ವಾಗಿದ್ದರಿಂದ ಕನ್ನಡ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಿ ತಮ್ಮ ನೆಚ್ಚಿನ ನಟರ ಚಿತ್ರವನ್ನು ಆನಂದಿಸಿದರು. ಹಲವಾರು ತಿಂಗಳುಗಳ ಕಾಲ ಚಿತ್ರಮಂದಿರಗಳು ಮುಚ್ಚಿದ್ದವು ಅವೆಲ್ಲದರ ಬೇಸರವನ್ನು ಕಳೆಯುವಂತೆ ಸಲಗ ಹಾಗೂ ಕೋಟಿಗೊಬ್ಬ-3 ಚಿತ್ರಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡಿದ್ದಾವೆ. ಇನ್ನು ರಾಜ್ಯಾದ್ಯಂತ ಎರಡನೇ ವಾರ ಕಳೆದರೂ ಕೂಡ ಎರಡು ಚಿತ್ರಗಳು ಜನಭರಿತ ಪ್ರದರ್ಶನವನ್ನು ಕಾಣುತ್ತಿವೆ. ಪ್ರೇಕ್ಷಕ ಮಹಾಪ್ರಭು 2 ಚಿತ್ರಗಳಿಗೂ ಕೂಡ ಯಶಸ್ಸನ್ನು ಒದಗಿಸಿಕೊಳ್ಳುವುದರಲ್ಲಿ ಯಶಸ್ವಿ ಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇವೆರಡರ ನಡುವೆ ಗೆದ್ದಿದ್ದು ಯಾರು ಎಂದು ಕೇಳಿದರೆ ಅದಕ್ಕೂ ಕೂಡ ನಮ್ಮಲ್ಲಿ ಉತ್ತರವಿದೆ.

ಹೌದು ಗೆಳೆಯರೇ ಎರಡು ನಮ್ಮ ಕನ್ನಡದ ಹೆಮ್ಮೆಯ ಚಿತ್ರಗಳು. ಸಲಗ ಹಾಗೂ ಕೋಟಿಗೊಬ್ಬ-2 ಚಿತ್ರಗಳು ಕೂಡ ರಾಜ್ಯಾದ್ಯಂತ ಚಿತ್ರ ಮಂದಿರಗಳಲ್ಲಿ ಗೆದ್ದಿದೆ ಎಂದರೆ ತಪ್ಪಾಗಲಾರದು. ಮನರಂಜನೆಯ ದೃಷ್ಟಿಯಲ್ಲಿ ಸಲಗ ಚಿತ್ರ ಗೆದ್ದರೆ ಕೋಟಿಗೊಬ್ಬ 3 ಚಿತ್ರ ಬಾಕ್ಸಾಫೀಸ್ ನಲ್ಲಿ ಅತಿ ಹೆಚ್ಚಿನ ಗಳಿಕೆಯನ್ನು ಕಂಡಿದೆ. ಒಟ್ಟಾರೆಯಾಗಿ ಎರಡು ದೊಡ್ಡ ಬಜೆಟ್ ನ ಚಿತ್ರಗಳು ಚಿತ್ರ ಮಂದಿರದಲ್ಲಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುವಲ್ಲಿ ಗೆದ್ದಿದೆ ಎಂದರೆ ಅತಿಶಯೋಕ್ತಿಯಲ್ಲ. ಎರಡು ಚಿತ್ರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.