Neer Dose Karnataka
Take a fresh look at your lifestyle.

ಚಿಕ್ಕ ವಯಸ್ಸಿನಲ್ಲೇ ಜಗ ಮೆಚ್ಚುವ ಸಾಧನೆ, ಪುನೀತ್ ಗೆ ತಕ್ಕ ಮಗಳು ಧೃತಿ, ಅಪ್ಪು ಹೆಸರು ಉಳಿಸ್ತಾಳೆ ಮಗಳು ಧೃತಿ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ನಾಯಕನಟನಾಗಿ ಮಾತ್ರವಲ್ಲದೆ ಅದ್ಭುತ ವ್ಯಕ್ತಿತ್ವ ಉಳ್ಳಂತಹ ಮನುಷ್ಯನಾಗಿ ಕೂಡ ಎಲ್ಲರ ಮನಗೆದ್ದಿದ್ದಾರೆ ಅದಕ್ಕಾಗಿಯೇ ಅವರನ್ನು ಕೊನೆಯ ಬಾರಿ ನೋಡಲು 20 ಲಕ್ಷಕ್ಕಿಂತಲೂ ಅಧಿಕ ಜನ ಕಂಠೀರವ ಸ್ಟೇಡಿಯಂ ಗೆ ಬಂದಿದ್ದರು.

ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ನಟಿಸಿಕೊಂಡು ಬಂದಂತಹ ಮಾಸ್ಟರ್ ಲೋಹಿತ್ ನಂತರದ ದಿನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಆಗುತ್ತಾರೆ. ಅಣ್ಣಾವ್ರ ಮಗನಾಗಿದ್ದರೂ ಕೂಡ ತನ್ನ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಗುರುತನ್ನು ಪಡೆದುಕೊಳ್ಳುತ್ತಾರೆ. ಹತ್ತನೇ ವಯಸ್ಸಿನಲ್ಲಿಯೇ ರಾಷ್ಟ್ರಪ್ರಶಸ್ತಿಯನ್ನು ಗೆದ್ದಂತಹ ಅದ್ವಿತೀಯ ಕಲಾವಿದ. ತಂದೆ ಹಾಗೂ ತಾಯಿ ಹೇಳಿ ಕೊಟ್ಟಂತಹ ರಾಜಮಾರ್ಗದಲ್ಲಿ ನಡೆದು ಎಲ್ಲರಿಗೂ ಮಾದರಿಯಾಗುವಂತಹ ಜೀವನವನ್ನು ಜೀವಿಸಿದವರು ನಮ್ಮ ಅಪ್ಪು.

ಅಪ್ಪುವನ್ನು ಪ್ರೀತಿಸುವವರೇ ಎಲ್ಲಾ ದ್ವೇಷಿಸುವವರು ಇಲ್ಲ. ಕರ್ನಾಟಕ ಚಿತ್ರರಂಗದ ಅಜಾತಶತ್ರು ಎಂದರೂ ಕೂಡ ತಪ್ಪಾಗಲಾರದು. ಇನ್ನು ಕೇವಲ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕ ಹಾಗೂ ಹಿನ್ನೆಲೆ ಗಾಯಕನಾಗಿ ಕೂಡ ಹೆಸರನ್ನು ಸಂಪಾದಿಸಿದವರು. ತಮ್ಮ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯ ಅನಾವರಣ ಮಾಡಲು ವೇದಿಕೆಯನ್ನು ಹಾಕಿಕೊಟ್ಟರು. ದೊಡ್ಮನೆ ಯವರ ಗುಣಗಳು ಏನು ಎಂಬುದನ್ನು ಇಡೀ ಕರ್ನಾಟಕ ಚಿತ್ರರಂಗಕ್ಕೆ ಸಾರಿ ದಂತಹ ಮಹಾನುಭಾವ.

ಅವರನ್ನು ಇದೇ ಕಾರಣಕ್ಕಾಗಿ ದೊಡ್ಮನೆ ಹುಡುಗ ಎಂಬುದಾಗಿ ಹೇಳುತ್ತಿದ್ದರು. ಕೇವಲ ಚಿತ್ರರಂಗಕ್ಕಾಗಿ ಮಾತ್ರವಲ್ಲದೆ ಬಡ ಹಾಗೂ ವೃದ್ಧರಿಗೆ ಅಶಕ್ತರಿಗೆ ಎಲ್ಲ ರೀತಿಯ ನೆರವನ್ನು ನೀಡಲು ಕೂಡ ಸಾಕಷ್ಟು ಶ್ರಮಿಸಿದ್ದರು. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಲವಾರು ವೃದ್ದಾಶ್ರಮ ಉಚಿತ ಶಾಲೆ ಅನಾಥಾಶ್ರಮ ಹಾಗೂ ಗೋಶಾಲೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇನ್ನು ಇಂತಹ ಒಳ್ಳೆಯ ವಿಷಯಗಳನ್ನು ಅವರು ತಮ್ಮ ಮಕ್ಕಳಿಗೂ ಕೂಡ ಕಳಿಸಿಕೊಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ದೃತಿ ಹಾಗೂ ವಂದನ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಅದರಲ್ಲೂ ಕೂಡ ನಾವು ಇಂದು ದೃತಿ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ದೃತಿ ಅವರು ಓದಿನಲ್ಲೂ ಕೂಡ ಸದಾ ಮುಂದು. ಚೆನ್ನಾಗಿ ಓದಿ ತನ್ನ ಸ್ವಂತ ಪರಿಶ್ರಮದ ಮೂಲಕ ಸ್ಕಾಲರ್ಶಿಪ್ ಪಡೆದು ಅಮೆರಿಕದ ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಇನ್ನು ಈ ಹಿಂದೆ ಇವರು ಅಂಧಮಕ್ಕಳ ಬಾಳಿಗೆ ಬೆಳಕಾಗಿದ್ದು ಕೂಡ ಕೆಲವು ಕಡೆ ಸುದ್ದಿಯಾಗಿತ್ತು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೋದಮೇಲೆ ಅವರು ನಡೆಸಿಕೊಂಡು ಬಂದಿದ್ದ ಎಲ್ಲಾ ಸಮಾಜಸೇವೆ ಸಂಸ್ಥೆಗಳು ಏನಾಗುತ್ತದೆ ಎಂಬ ಗೊಂದಲ ಎಲ್ಲರಲ್ಲಿತ್ತು.

ಅವುಗಳು ಕೂಡ ಅನಾಥವಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇವುಗಳನ್ನು ಪುನೀತ್ ರಾಜಕುಮಾರ್ ರವರ ಮಗಳು ದೃತಿ ಇನ್ನು ಮುಂದೆ ನೋಡಿಕೊಂಡು ಹೋಗಲು ನಿರ್ಧರಿಸಿದ್ದಾರಂತೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಈ ಸಂಸ್ಥೆಗಳನ್ನು ನೋಡಿಕೊಳ್ಳಲು ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳು ಬೇಕಾಗಿತ್ತು. ಆದರೂ ಕೂಡ ಇದನ್ನು ಬೆಂಬಿಡದೆ ಮುನ್ನಡೆಸಿಕೊಂಡು ಹೋಗುತ್ತಿದ್ದರು. ಈಗ ಅವರ ಹಾದಿಯಲ್ಲಿ ಅವರ ಹಿರಿಯ ಮಗಳು ಸಾಗುತ್ತಿದ್ದು ಇವನ್ನೆಲ್ಲ ಅವರೇ ನೋಡಿಕೊಂಡು ಹೋಗಲು ನಿರ್ಧರಿಸಿದ್ದಾರಂತೆ. ತಂದೆಯ ಆಶೀರ್ವಾದ ಮಗಳ ಮೇಲೆ ಸದಾ ಇರಲಿ ಎಂದು ಹಾರೈಸೋಣ ಗೆಳೆಯರೇ.

Comments are closed.