Neer Dose Karnataka
Take a fresh look at your lifestyle.

ಅಪ್ಪು ಪುಣ್ಯಸ್ಮರಣೆಯ ದಿನವೇ ಗಟ್ಟಿ ನಿರ್ಧಾರ ಮಾಡಿದ ಅಶ್ವಿನಿ, ಧೈರ್ಯ ಕಂಡು ಖುಷಿಯಿಂದ ಕಣ್ಣೀರು ಹಾಕಿದ ಶಿವಣ್ಣ. ಏನು ಗೊತ್ತೇ??

8

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹನ್ನೊಂದನೇ ದಿನದ ತಿಥಿ ಕಾರ್ಯಕ್ರಮ ನಡೆದು ಈಗಾಗಲೇ ಕುಟುಂಬಸ್ಥರು ಪುನೀತ್ ರಾಜಕುಮಾರ್ ಅವರಿಗೆ ಪೂಜೆಯನ್ನು ಕೂಡ ಮಾಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ಮನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹೀಗೆ ಹಲವಾರು ಗಣ್ಯರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದ್ದಾರೆ.

ಇನ್ನು ತಂದೆಯ ತಿಥಿ ಕಾರ್ಯಕ್ರಮ ಇದ್ದರೂ ಕೂಡ ತಂದೆಯ ಕನಸಿನಂತೆ ಅವರ ಎರಡನೇ ಮಗಳು ಪರೀಕ್ಷೆಯನ್ನು ಬರೆದು ಬಂದಿದ್ದಾರೆ. ವಿಚಾರವಾಗಿ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾರೆ. ಅದೇನೆಂದು ತಿಳಿದರೆ ನೀವು ಕೂಡ ಒಂದು ಕ್ಷಣ ಅವಕ್ಕಾಗುತ್ತೀರಿ. ಅದೇನೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾವು ಇದ್ದಷ್ಟು ದಿನ ಎಲ್ಲಾ ಸಾಮಾಜಿಕ ಕಾರ್ಯಗಳನ್ನು ಯಾರಿಗೂ ತಿಳಿಯದಂತೆ ಅಚ್ಚುಕಟ್ಟಾಗಿ ಯಾವುದಕ್ಕೂ ಕಡಿಮೆಯಾಗದಂತೆ ಮಾಡಿಕೊಂಡು ಬರುತ್ತಿದ್ದರು.

ಆದರೆ ಇದೀಗ ಅವರು ಇಲ್ಲದ ನಂತರ ಅವುಗಳು ಅನಾಥವಾಗುತ್ತದೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಇದಕ್ಕೆ ಪೂರಕವೆಂಬಂತೆ ಪುನೀತ್ ರಾಜಕುಮಾರ್ ಅವರ ನೋಡಿಕೊಳ್ಳುತ್ತಿದ್ದ 1800 ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂಬುದಾಗಿ ತಮಿಳು ನಟ ವಿಶಾಲ್ ಹೇಳಿದ್ದರು. ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನಿ ಅವರು ವಿಶಾಲ್ ರವರಿಗೆ ಧನ್ಯವಾದಗಳು. ಆದರೆ ಮಕ್ಕಳನ್ನು ಹಾಗೂ ಎಲ್ಲಾ ಸಾಮಾಜಿಕ ಕಾರ್ಯಗಳನ್ನು ನಾವೇ ನೋಡಿಕೊಳ್ಳುತ್ತೇವೆ ಪುನೀತ್ ಅವರಿಗೆ ಈ ಕಾರ್ಯಗಳ ಮೂಲಕ ಸಂತೋಷ ನೀಡಲು ಪ್ರಯತ್ನಿಸುತ್ತೇವೆ. ಈ ಕಾರ್ಯದಲ್ಲಿ ನಮ್ಮ ಇಬ್ಬರು ಹೆಣ್ಣುಮಕ್ಕಳು ನನಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ನಮಗೆ ಶಿವಣ್ಣ ಹಾಗೂ ನಾಗಣ್ಣನವರ ಬೆಂಬಲ ಕೂಡ ಇದೆ. ಪುನೀತ್ ರವರು ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಕಾರ್ಯಗಳನ್ನು ನಾವೇ ನೋಡಿಕೊಳ್ಳುತ್ತೇವೆ ಎಂಬುದಾಗಿ ಹೇಳಿದ್ದಾರೆ

Leave A Reply

Your email address will not be published.