Neer Dose Karnataka
Take a fresh look at your lifestyle.

ಶ್ರೀ ಬಿಸಿ ಪಾಟೀಲ್ ಅವರಂತಹ ಕೃಷಿ ಮಂತ್ರಿಗಳನ್ನು ಪಡೆದ ಕರ್ನಾಟಕ ರಾಜ್ಯವೇ ಧನ್ಯ..!!

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಅದೆಷ್ಟು ಕೃಷಿ ಮಂತ್ರಿಗಳನ್ನು ನೋಡಿರಬಹುದು ಆದರೆ ಸನ್ಮಾನ್ಯ ಶ್ರೀ ಬಿ ಸಿ ಪಾಟೀಲ್ ಅವರಂತಹ ಜನಪ್ರಿಯ ಹಾಗೂ ಜನಾನುರಾಗಿ ಕೃಷಿ ಮಂತ್ರಿಗಳನ್ನು ನೋಡಿರಲು ಸಾಧ್ಯವೇ ಇಲ್ಲ.

ಬಿಸಿ ಪಾಟೀಲ್ ರವರು ಕರ್ನಾಟಕ ಜನತೆಗೆ ಇಂದಿನಿಂದ ಮಾತ್ರವಲ್ಲದೆ ಹಲವಾರು ವರ್ಷಗಳ ಕಾಲದಿಂದ ಚಿರಪರಿಚಿತರು. ಮೊದಲಿಗೆ ಕರ್ನಾಟಕ ಪೊಲೀಸ್ ಇಲಾಖೆಗೆ ಪಿಎಸ್ಐ ಆಗಿ ಸೇರ್ಪಡೆಯಾಗುತ್ತಾರೆ. ನಂತರ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೂಡ ಬಡ್ತಿಯನ್ನು ಪಡೆಯುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಎರಡು ದಶಕಗಳಿಗೂ ಅಧಿಕ ಕಾಲ ಜನಸೇವೆಯಲ್ಲಿ ನಿರತರಾಗಿರುತ್ತಾರೆ. ನಂತರ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಕೂಡ ಪರಿಚಿತರಾಗುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ 50ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಕೂಡ ನಮ್ಮೆಲ್ಲರ ನೆಚ್ಚಿನ ಕೌರವ ನಮ್ಮ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ರಾಜಕೀಯ ಕ್ಷೇತ್ರದಲ್ಲಿ ಕೂಡ ತಮ್ಮ ಜನಪ್ರಿಯತೆಯನ್ನು ಸಾಬೀತು ಪಡಿಸಿರುವ ಜನರ ಮೆಚ್ಚಿನ ಜನನಾಯಕ. ಇನ್ನು ಈಗ ಕೃಷಿ ಮಂತ್ರಿಗಳಾಗಿ ರಾಜ್ಯದ ಜನತೆಯ ಆಸರೆಯಾಗಿದ್ದಾರೆ ನಮ್ಮ ಶ್ರೀ ಬಿ ಸಿ ಪಾಟೀಲ್ ಸಾಹೇಬರು. ಕೃಷಿ ಮಂತ್ರಿಗಳಾದ ಮೇಲೆ ಶ್ರೀ ಮಾನ್ಯ ಬಿ ಸಿ ಪಾಟೀಲ್ ರವರು ರೈತರಿಗೆ ಸಾಕಷ್ಟು ರೀತಿಯಲ್ಲಿ ನೆರವಾಗಿದ್ದಾರೆ.

ನೇರವಾಗಿ ರೈತರಿಂದಲೇ ಪ್ರಶ್ನೆಗಳನ್ನು ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಅದಕ್ಕೆ ಅತ್ಯಂತ ವೇಗವಾಗಿ ಪರಿಹಾರವನ್ನು ಹುಡುಕುವ ಮಾರ್ಗವನ್ನು ಕಂಡುಹಿಡಿದಿದ್ದಾರೆ ಪಾಟೀಲ್ ಸಾಹೇಬರು. ಇಷ್ಟೊಂದು ಪಾರದರ್ಶಕ ಆಡಳಿತವನ್ನು ಯಾವ ಮಂತ್ರಿ ಕೂಡ ಇದುವರೆಗೆ ಮಾಡಿಲ್ಲ . ರಾಜಕಾರಣಿ ಎಂಬ ಪದಕ್ಕಿಂತ ಹೆಚ್ಚಾಗಿ ಜನರ ಮೆಚ್ಚಿನ ಸೇವೆಯನ್ನು ಮಾಡುವ ನಾಯಕ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇನ್ನು ಜನರ ಮೆಚ್ಚಿನ ಜನನಾಯಕ ಶ್ರೀ ಮಾನ್ಯ ಬಿ ಸಿ ಪಾಟೀಲ್ ಸಾಹೇಬರು ನಾಳೆ ತಮ್ಮ 66ನೇ ಜನ್ಮದಿನಾಚರಣೆ ಆಚರಿಸಿಕೊಳ್ಳಲು ಸಿದ್ಧರಾಗಿದ್ದಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೊಂದಿಗೆ ತಮ್ಮ ಕ್ಷೇತ್ರವಾದ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನಲ್ಲಿ ರೈತರ ಸಂಕಷ್ಟಗಳನ್ನು ಕೇಳುವ ಹಾಗೂ ಅದನ್ನು ಪರಿಹರಿಸಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಿದ್ದಾರೆ. ಬೇರೆ ಯಾವ ರಾಜಕಾರಣಿಯಾಗಿದ್ದರು ಕೂಡ ಸಂಭ್ರಮದಿಂದ ತಮ್ಮ ಕುಟುಂಬದವರೊಂದಿಗೆ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಬಿ ಸಿ ಪಾಟೀಲ್ ಸಾಹೇಬರು ರೈತರ ಕಷ್ಟಗಳನ್ನು ಸಂಪೂರ್ಣ ದಿನದಂದು ವಿಚಾರಿಸಿಕೊಳ್ಳಲು ಹಾಗೂ ಅವರಿಗೆ ಬೇಕಾದ ಸಹಕಾರಗಳನ್ನು ನೀಡಲು ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ಅವರ ಜನ್ಮದಿನವನ್ನು ಬಳಸಿಕೊಳ್ಳುತ್ತಿದ್ದಾರೆ. ಇಂತಹ ಕೃಷಿ ಮಂತ್ರಿಗಳನ್ನು ಪಡೆದ ಕರ್ನಾಟಕ ರಾಜ್ಯವೇ ಧನ್ಯ. ಬಿಸಿ ಪಾಟೀಲ್ ಸಾಹೇಬರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

Comments are closed.