Neer Dose Karnataka
Take a fresh look at your lifestyle.

ಇಡೀ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದ್ದ ಈ ಹುಡುಗಿ ಕಥೆ ಕೇಳಿದರೇ ನಿಜಕ್ಕೂ ದಂಗಾಗ್ತೀರಾ, ಸ್ವಂತ ಅಪ್ಪ ಅಮ್ಮನನ್ನು ಏನು ಮಾಡಿದ್ದಾಳೆ ಗೊತ್ತೇ?? ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪೋಷಕರು-ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂಬುದಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ ಆದರೆ ಆ ಯೋಜನೆಗಳು ಮಕ್ಕಳಿಗೆ ಉಸಿರುಗಟ್ಟುವ ವಾತಾವರಣವನ್ನು ನಿರ್ಮಾಣ ಮಾಡಬಾರದು. ಒಂದು ವೇಳೆ ಮಕ್ಕಳಿಗೆ ಪೋಷಕರ ರೀತಿನೀತಿಗಳು ಕಷ್ಟವಾದರೆ ಯಾವ ಪರಿಣಾಮವುಂಟಾಗುತ್ತದೆ ಎಂಬುದರ ಕುರಿತಂತೆ ಇಂದು ನಾವು ಹೇಳಲು ಹೊರಟಿರುವ ವಿಚಾರವೇ ಜೀವಂತ ಸಾಕ್ಷಿ ಎಂದರೆ ತಪ್ಪಾಗಲಾರದು. ಅತಿಯಾದ ಒತ್ತಡಗಳು ಮಕ್ಕಳನ್ನು ತೀವ್ರ ಮಾದರಿಯ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಪ್ರೇರೇಪಿಸುತ್ತದೆ.

ಚೀನಾ ಮೂಲದ ದಂಪತಿಗಳ ಮಗಳಾಗಿರುವ ಜನಿಫರ್ ಫಾನ್ ಕೆನಡಾದಲ್ಲಿ ಜನಿಸುತ್ತಾಳೆ. ಇವರ ತಂದೆ ತಾಯಿಯರಾಗಿರುವ ಫಾನ್ ದಂಪತಿಗಳು ಅಲ್ಲಿರುವ ಆಟೋ ಪಾರ್ಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಆದಷ್ಟು ತಮ್ಮ ಮಕ್ಕಳಿಗಾಗಿ ಉಳಿತಾಯವನ್ನು ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಕೆನಡದಲ್ಲಿ ಎರಡಂತಸ್ತಿನ ಮನೆಯನ್ನು ಕೂಡ ಖರೀದಿಸುತ್ತಾರೆ. ಇನ್ನು ಹಿರಿಯ ಮಗಳಾಗಿರುವ ಜೆನಿಫರ್ ಕುರಿತಂತೆ ದಂಪತಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಆಕೆಯನ್ನು ಸಾಕಷ್ಟು ಬಿಗಿಯಾಗಿ ಬೆಳೆಸಿದ್ದರು.

ಆಕೆಗೆ ಯಾವುದೇ ಮನರಂಜನೆ ನೀಡಿದೆ ಶಿಕ್ಷಣ ಹಾಗೂ ಶಿಕ್ಷಣ ಇತರ ಚಟುವಟಿಕೆಗಳಲ್ಲಿ ಮಗ್ನರಾಗಿರುವಂತೆ ಮಾಡುತ್ತಿದ್ದರು. ಯಾವುದೇ ಮನೋರಂಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವನ್ನು ನೀಡುತ್ತಿರಲಿಲ್ಲ. ಗೆಳೆಯ ಗೆಳತಿಯರೊಂದಿಗೆ ಬೆರೆಯಲು ಸಹ ಅವಕಾಶವಿರಲಿಲ್ಲ. ಮೊದಮೊದಲಿಗೆ ಪೋಷಕರು ನಿರೀಕ್ಷಿಸಿದಂತೆ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಳು ಆದರೆ ನಂತರ ಬರಬರುತ್ತ ಪೋಷಕರ ಒತ್ತಡದ ಕಾರಣದಿಂದಾಗಿ ಯುನಿವರ್ಸಿಟಿಯಲ್ಲಿ ಫೇಲ್ ಆಗುತ್ತಾಳೆ.

ಮನೆಯವರಿಗೆ ಹೇಳಲು ಹೆದರಿಕೊಂಡು ತಾನು ಪಾಸಾಗಿದ್ದೇನೆ ಎಂಬುದಾಗಿ ಸುಳ್ಳು ಹೇಳುತ್ತಾಳೆ. ಇಷ್ಟು ಮಾತ್ರವಲ್ಲದೆ ಕಾಲೇಜಿಗೆ ಹೋಗುತ್ತೇನೆ ಎಂಬ ನೆಪ ಹೇಳಿ ಹತ್ತಿರದಲ್ಲೇ ಇದ್ದ ಕೆಫೆಯಲ್ಲಿ ಸುಮ್ಮನೆ ಕೂತಿರುತ್ತಿದ್ದಳು. ಇನ್ನು ಪಿಯಾನೋ ತರಗತಿಗಳನ್ನು ಮಾಡಿ ಅದರಿಂದ ಹಣವನ್ನು ಸಂಪಾದಿಸುತ್ತಿದ್ದರು. ಹೀಗೆ ನನಗೆ ಅಲ್ಲಿ ಕೆಲಸ ಸಿಕ್ಕಿದೆ ಇಲ್ಲಿ ಸೇವೆಗೆ ಹೋಗಬೇಕು ಎಂಬುದಾಗಿ ಹಲವಾರು ನಾಟಕಗಳನ್ನು ದಿನೇದಿನೇ ಮಾಡುತ್ತಿದ್ದಳು. ಇತರ ಮನೆಯಲ್ಲಿ ಹೇಳಿ ಆಕೆಯ ಬಾಯ್ ಫ್ರೆಂಡ್ ಜೊತೆಗೆ ಇರುತ್ತಿದ್ದಳು.

ಒಮ್ಮೆ ಆಕೆ ತಾನು ಆಸ್ಪತ್ರೆಗೆ ಕೆಲಸಕ್ಕೆ ಹೋಗಬೇಕು ಎಂಬುದಾಗಿ ಹೇಳಿ ಹೊರಟಾಗ ಆಕೆಯ ಕೈಯಲ್ಲಿ ಯಾವುದೇ ಐಡಿ ಕಾರ್ಡುಗಳು ಇಲ್ಲದಿದ್ದಾಗ ಆಕೆಯ ತಾಯಿ ಅವಳನ್ನು ಹಿಂಬಾಲಿಸುತ್ತಾಳೆ. ನಂತರ ಆಕೆಗೆ ಅವಳ ನಿಜಾಂಶ ಎಲ್ಲವೂ ತಿಳಿಯುತ್ತದೆ ಇದನ್ನು ತಿಳಿದ ತಂದೆ ಕೂಡ ಕೋಪಗೊಂಡು ಮನೆಯಿಂದ ಹೊರಹಾಕಲು ಪ್ರಯತ್ನಿಸುತ್ತಾರೆ. ಅದಕ್ಕೆ ತಾಯಿ ಮನೆಯಿಂದ ಹೊರ ಹೋಗೋದು ಬೇಡ ಆಕೆ ಪರೀಕ್ಷೆ ಕಟ್ಟಿ ಪಾಸಾಗಲಿ ಎಂಬುದಾಗಿ ಹೇಳುತ್ತಾಳೆ.

ಆದರೆ ಪೋಷಕರ ಅತಿಯಾದ ಕಟ್ಟುನಿಟ್ಟಿನ ವರ್ತನೆಯಿಂದಾಗಿ ತನಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಲೇ ಬಂದಿದ್ದ ಜೆನಿಫರ್ ಗೆ ಇದನ್ನು ಮಾಡಲು ಮನಸ್ಸಿರಲಿಲ್ಲ. ಹೀಗಾಗಿ ತನ್ನ ಪೋಷಕರನ್ನು ಮುಗಿಸಲು ತನ್ನ ಬಾಯ್ ಫ್ರೆಂಡ್ ಹಾಗೂ ಆತನ ಗೆಳೆಯರಿಗೆ ಸೇರಿ ಪ್ಲಾನ್ ಮಾಡುತ್ತಾನೆ. ಒಂದು ದಿನ ರಾತ್ರಿ ಜನಿಫರ್ ನ ಬಾಯ್ ಫ್ರೆಂಡ್ ಹಾಗೂ ಆತನ ಸಹಚರರು ದರೋಡೆ ಮಾಡಲು ಬಂದವರಂತೆ ಬಂದು ಹಣ ಚಿನ್ನಾಭರಣಗಳನ್ನು ಮಾಡಿ ನಂತರ ಆಕೆಯ ತಂದೆ ಹಾಗು ತಾಯಿಯನ್ನು ಮುಗಿಸಿಬಿಡುತ್ತಾರೆ. ಇದಾದ ನಂತರ ವಿಚಾರಣೆಗೆ ಬಂದ ಮೊದಲ ದಿನದಲ್ಲಿ ಆಕೆಯ ಬಣ್ಣ ಬಯಲಾಗುತ್ತದೆ. ಆಕೆ ಮೊಬೈಲ್ ಫೋನ್ ನಿಂದ ಆಕೆಯ ಬಾಯ್ ಫ್ರೆಂಡ್ ಗೆ ಸಾಕಷ್ಟು ಮೆಸೇಜ್ ಗಳು ಹೋಗಿರುತ್ತವೆ. ಇನ್ನು ಜನಿಫರ್ ಗೆ ಈಗ 24 ವರ್ಷಗಳ ಜೀವಾವಧಿ ಶಿಕ್ಷೆಯಾಗಿದೆ. ಈ ವಿಷಯದಲ್ಲಿ ಯಾರ ತಪ್ಪು ಎನ್ನುವುದು ನಿಮ್ಮ ಅನಿಸಿಕೆಯಾಗಿದೆ ಎಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.