ಬಿಗ್ ನ್ಯೂಸ್: ಅಪ್ಪುಗಾಗಿ ಸ್ಮಾರಕ ಮಾಡಲು ನಿರ್ಧರಿಸಿದ ಶಿವಣ್ಣ ಸ್ಮಾರಕದಲ್ಲಿ ಏನು ವಿಶೇಷತೆ ಇರಲಿದೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ 29 ನೇ ತಾರೀಕು ಬಂದರೆ ಬರೋಬ್ಬರಿ ಒಂದು ತಿಂಗಳು ಆಗುತ್ತದೆ. ಅವರನ್ನು ಕಳೆದುಕೊಂಡ ಮೇಲೆ ಒಂದೊಂದು ಕ್ಷಣವು ಕೂಡ ಅವರ ನೆನಪು ಅವರ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಎಡೆಬಿಡದೆ ಕಾಡುತ್ತಿದೆ.
ಇನ್ನು ಪುನೀತ್ ರಾಜಕುಮಾರ್ ಅವರ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಮೊನ್ನೆಯಷ್ಟೇ ಮುಗಿದಿದ್ದು ಇನ್ನು ಮೊನ್ನೆಯಷ್ಟೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸಿದ ಪುನೀತ್ ಗೀತನಮನ ಕಾರ್ಯಕ್ರಮವು ಕೂಡ ಸಾಂಗವಾಗಿ ನೆರವೇರಿತು. ಇಷ್ಟೆಲ್ಲಾ ಕಾರ್ಯಕ್ರಮಗಳು ನಡೆದರೂ ಕೂಡ ಇನ್ನೂ ಕೂಡ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ಮನಸಿನ ಯಾವುದೋ ಒಂದು ಮೂಲೆಯಲ್ಲಿ ಕಾಡುತ್ತಿದೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿ ಕಂಠೀರವ ಸ್ಟುಡಿಯೋದಲ್ಲಿ ಇದೆ. ಈ ಸಮಾಧಿಯನ್ನು ಸ್ಮಾರಕವನ್ನಾಗಿ ಮಾಡುವ ಕುರಿತಂತೆ ಅವರ ಸಹೋದರ ನಾಗಿರುವ ಶಿವಣ್ಣನವರು ಯೋಚಿಸಿದ್ದಾರೆ.
ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಚಿಕ್ಕಂದಿನಿಂದ ಹಿಡಿದು ಇಲ್ಲಿಯವರೆಗೂ ಕೂಡ ಅವರು ನಟಿಸಿರುವ ಎಲ್ಲಾ ಫಿಲಂಗಳ ಪೋಸ್ಟರನ್ನು ಸ್ಮಾರಕದಲ್ಲಿ ಅಳವಡಿಸುವ ಮೂಲಕ ವಿಭಿನ್ನವಾಗಿ ಸ್ಮಾರಕವನ್ನು ನಿರ್ಮಿಸಲು ಶಿವಣ್ಣನವರು ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇನ್ನು ಶಿವಣ್ಣನವರು ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಪ್ರತಿದಿನ ಸಮಾಧಿಗೆ ಬಂದು ಹೋಗುತ್ತಾರೆ. ಇನ್ನು ಪುನೀತ್ ರಾಜಕುಮಾರ್ ರವರ ನಿಧನವಾಗಿ ಇಷ್ಟೊಂದು ದಿನಗಳು ಕಳೆದರು ಕೂಡ ಈಗಲೂ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಮಾಧಿಯ ಬಳಿ ಅಭಿಮಾನಿಗಳು ಬಂದು ಪುನೀತ್ ರಾಜಕುಮಾರ್ ರವರ ಸಮಾಧಿಯ ದರ್ಶನವನ್ನು ಮಾಡಿಕೊಂಡು ಹೋಗುತ್ತಾರೆ.
Comments are closed.