Neer Dose Karnataka
Take a fresh look at your lifestyle.

ಅಪ್ಪು ನಮನ ಕಾರ್ಯಕ್ರಮದಲ್ಲಿ ಸತತ ಹತ್ತು ಗಂಟೆಗಳ ಕಾಲ ನಿರೂಪಣೆ ಮಾಡಿದ ನಿರೂಪಕಿ ಅಪರ್ಣಾ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇಷ್ಟೇನಾ?

23

ನಮಸ್ಕಾರ ಸ್ನೇಹಿತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇದೇ ಅಕ್ಟೋಬರ್ 16ರಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್ ಗೀತನಮನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ತಮಿಳು ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟರುಗಳು ಕೂಡ ಆಗಮಿಸಿದ್ದರು.

ಕರ್ನಾಟಕ ರಾಜ್ಯದ ಖ್ಯಾತ ರಾಜಕಾರಣಿಗಳು ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ನಿರೂಪಿಸಿದ್ದು ಕನ್ನಡ ಚಿತ್ರರಂಗದ ಖ್ಯಾತ ನಿರೂಪಕರಾಗಿರುವ ಅಪರ್ಣ ರವರು. ಕನ್ನಡದ ಯಾವುದೇ ಕಾರ್ಯಕ್ರಮಗಳಿದ್ದರೂ ಕೂಡ ಪ್ರಮುಖವಾಗಿ ಅಪರ್ಣ ರವರೆ ನಿರೂಪಣೆ ಮಾಡುತ್ತಾರೆ. ಅಪರ್ಣ ರವರ ಸುಲಲಿತವಾದ ಕನ್ನಡದ ಬಳಕೆ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ. ಇನ್ನು ಅಪ್ಪು ಅವರ ಪುನೀತ್ ನಮನ ಕಾರ್ಯಕ್ರಮದಲ್ಲಿ ಬರೋಬ್ಬರಿ 10 ಗಂಟೆಗಳ ಕಾಲ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು.

ಇನ್ನು ಅಪರ್ಣಾ ರವರು ಕನ್ನಡ ಚಿತ್ರರಂಗದ ಅಗ್ರಗಣ್ಯ ನಿರೂಪಕರಾಗಿದ್ದರಿಂದ ಯಾವುದೇ ಕಾರ್ಯಕ್ರಮಗಳಿಗೂ ಹೋದರು ಕೂಡ 50 ಸಾವಿರದಿಂದ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಪುನೀತ್ ನಮನ ಕಾರ್ಯಕ್ರಮವನ್ನು ಯಾವುದೇ ಸಂಭಾವನೆ ಇಲ್ಲದೆ ಉಚಿತವಾಗಿ ಮಾಡಿಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ಪುನೀತ್ ರವರನ್ನು ಕಳೆದುಕೊಂಡಿರುವ ದುಃಖ ಕೂಡ ಅವರ ಮನಸ್ಸಿನಲ್ಲಿದ್ದು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಭಾವುಕರಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇಂತಹ ಕಾರ್ಯಕ್ರಮವನ್ನು ಇನ್ನುಮುಂದೆ ನಡೆಸದಂತಾಗಲಿ ಎಂಬ ಅಭಿಪ್ರಾಯವನ್ನು ಕೂಡ ಹಂಚಿಕೊಂಡಿದ್ದರು. ಪುನೀತ್ ರವರ ಚಿತ್ರದ ಯಶಸ್ವಿ ಕಾರ್ಯಕ್ರಮವನ್ನು ನಡೆಸಿಕೊಡುವ ಬದಲು ಅವರ ನಿಧನದ ನಂತರ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದಕ್ಕಾಗಿ ಸಾಕಷ್ಟು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.