ಚಿಕ್ಕ ವಯಸ್ಸಿನಲ್ಲಿಯೇ ದಾಖಲೆ ಸೃಷ್ಟಿ ಮಾಡಿದ ಅಲ್ಲು ಅರ್ಹ, ಕೇವಲ 5 ವರ್ಷದಲ್ಲೇ ಅಲ್ಲೂ ಅರ್ಜುನ್ ಪುತ್ರಿ ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ರವರ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕರಾಗಿರುವ ಅಲ್ಲು ಅರವಿಂದ್ ರವರ ಮಗನಾಗಿದ್ದರೂ ಕೂಡ ಸ್ವಂತ ಪರಿಶ್ರಮದ ಮೂಲಕ ಜನರ ಪ್ರೀತಿಯನ್ನು ಸಂಪಾದಿಸಿದ್ದಾರೆ ಅಲ್ಲು ಅರ್ಜುನ್ ರವರು.
ಇನ್ನು ಸದ್ಯಕ್ಕೆ ಅಲ್ಲು ಅರ್ಜುನ್ ಅವರು ತೆಲುಗು ಚಿತ್ರರಂಗದಲ್ಲಿ ಟಾಪ್ ನಟನಾಗಿ ಕಾಣಿಸಿಕೊಂಡಿದ್ದು ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಈಗ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲು ಇದೇ ಡಿಸೆಂಬರ್ 17ಕ್ಕೆ ಸಜ್ಜಾಗಿದೆ. ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದು ರಶ್ಮಿಕ ಮಂದಣ್ಣ ಫಹಾದ್ ಫಾಸಿಲ್ ಡಾಲಿ ಧನಂಜಯ್ ಹೀಗೆ ಹಲವಾರು ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅಲ್ಲು ಅರ್ಜುನ್ ರವರ ಪತ್ನಿಯಾಗಿರುವ ಸ್ನೇಹ ರೆಡ್ಡಿ ಅವರು ತಮ್ಮ ಮಗಳ ಕುರಿತಂತೆ ಹೆಮ್ಮೆಯ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಹೆಮ್ಮೆ ಪಟ್ಟಿದ್ದಾರೆ. ಹಾಗಿದ್ದರೆ ಆ ವಿಷಯ ಏನೆಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ.
ಗೆಳೆಯರೇ ಅಲ್ಲು ಅರ್ಜುನ್ ಹಾಗೂ ಸ್ನೇಹ ರೆಡ್ಡಿ ಅವರ ಪುತ್ರಿಯಾಗಿರುವ ಅಲ್ಲು ಅರ್ಹ ಸದ್ಯದಲ್ಲೇ ಸಮಂತಾ ನಟಿಸಲಿರುವ ಶಾಕುಂತಲಂ ಮೂಲಕ ಸಿನಿಮಾ ರಂಗಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಆದರೆ ಈಗ ಹೇಳಲು ಹೊರಟಿರುವುದು ಅಲ್ಲು ಅರ್ಹ ಮಾಡಿರುವ ಸಾಧನೆ ಕುರಿತಂತೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಚೆಸ್ ತರಬೇತುದಾರರಾಗಿ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಎಂಟ್ರಿ ನೀಡಿದ್ದಾರೆ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹ. ಈ ವಿಷಯವನ್ನು ತಾಯಿ ಸ್ನೇಹ ರೆಡ್ಡಿ ಅವರ ಜನ್ಮದಿನದ ವಿಶೇಷವಾಗಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಅವರ ಅಭಿಮಾನಿಗಳು ಕೂಡ ಸಾಕಷ್ಟು ಖುಷಿಯಾಗಿದ್ದಾರೆ.
Comments are closed.