ಅಪ್ಪು ನೆನಪಿನಲ್ಲಿ ಇಡೀ ಕನ್ನಡಿಗರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೇ ಮಹಾರಾಷ್ಟ್ರದಲ್ಲಿ ಜನರು ಏನು ಮಾಡಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹತ್ತಿರತ್ತಿರ ಒಂದು ತಿಂಗಳಾಗುತ್ತ ಬಂದಿದೆ. ಆದರೂ ಕೂಡ ನಮ್ಮಿಂದ ದೂರವಾಗಿ ಅವರು ನೀಡಿರುವ ನೋವಿನ ನೆನಪು ಇನ್ನೂ ಕೂಡ ಮಾಡುತ್ತಿಲ್ಲ. ಒಳ್ಳೆಯವರನ್ನು ಆ ದೇವರು ಬೇಗ ಕರೆದುಕೊಳ್ಳುತ್ತಾನೆ ಎಂಬ ಮಾತು ಪುನೀತ್ ರಾಜಕುಮಾರ್ ಅವರನ್ನು ನೋಡಿದರೆ ನಿಜ ಎಂದು ಹೇಳಬಹುದು.
ಪುನೀತ್ ರಾಜ್ ಕುಮಾರ್ ರವರು ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲಿ ಹೋದರೂ ಕೂಡ ಅವರ ಒಳ್ಳೆಯ ಕಾರ್ಯಗಳು ಇಂದಿಗೂ ಕೂಡ ಸಮಾಜದಲ್ಲಿ ಅವರ ಅಭಿಮಾನಿಗಳ ಮೂಲಕ ನೆರವೇರುತ್ತಿವೆ. ಪುನೀತ್ ರಾಜಕುಮಾರ್ ರವರು ಮರಣಾನಂತರ ನೇತ್ರದಾನವನ್ನು ಮಾಡಿದ ನಂತರ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನ ಮಾಡಲು ಅರ್ಜಿಗಳಿಗೆ ಸಹಿ ಹಾಕಿದ್ದರು. ಇಷ್ಟು ಮಾತ್ರವಲ್ಲದೆ ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ರಾಜ್ಯಾದ್ಯಂತ ಅಭಿಮಾನಿಗಳು ಬೇರೆಬೇರೆ ಒಳ್ಳೆಯ ಕೆಲಸದಲ್ಲಿ ನಿರತರಾಗಿದ್ದರು. ಇನ್ನು ಈಗ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಮಹಾರಾಷ್ಟ್ರದಲ್ಲಿ ಮಾಡಿರುವ ಕೆಲಸವನ್ನು ನೋಡಿದರೆ ನೀವು ಕೂಡ ಬೆರಗಾಗುವುದು ಗ್ಯಾರಂಟಿ.
ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಾಗಿರುವ ಮಹದೇವ ಕಲ್ಯಾಣಪ್ಪ ತಿಮ್ಮಲಾಪುರ್ ಎನ್ನುವವರು ಮಹಾರಾಷ್ಟ್ರದ ಅಹಮದಾಬಾದ್ ನಗರ ನಲ್ಲಿ ಅನಾಥಾಶ್ರಮದಲ್ಲಿ ನೂರಾರು ಮಕ್ಕಳಿಗೆ ಅನ್ನದಾನವನ್ನು ಮಾಡುವ ಮೂಲಕ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ರಾಜ್ಯದ ಎಲ್ಲೆಯನ್ನು ಮೀರಿ ಕೂಡ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಅವರ ಮರಣಾನಂತರ ಸಾಮಾಜಿಕ ಕಾರ್ಯಗಳಿಗೆ ಅವರ ಆದರ್ಶವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
Comments are closed.