ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಕಜ್ ನಾರಾಯಣ್, ಹುಡುಗಿ ಯಾರು ಗೊತ್ತೇ?? ಇಲ್ಲಿದೆ ನೋಡಿ ಸುಂದರ ಕ್ಷಣಗಳು.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಎಸ್ ನಾರಾಯಣ್ ಕೂಡ ಒಬ್ಬರು. ಇನ್ನು ಎಸ್ ನಾರಾಯಣರವರ ಪುತ್ರ ಪಂಕಜ್ ನಾರಾಯಣ್ ರವರು ಈಗಾಗಲೇ ನಿನ್ನೆಯಷ್ಟೇ ಗುರುಹಿರಿಯರ ಸಮ್ಮುಖದಲ್ಲಿ ಗೃಹಸ್ಥ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಂಕಜ್ ನಾರಾಯಣ್ ರವರು ಈಗಾಗಲೇ ನೀವೆಲ್ಲ ತಿಳಿದಿರುವಂತೆ ಹಲವಾರು ಚಿತ್ರಗಳಲ್ಲಿ ನಾಯಕ ನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಒಡೆಯ ಚಿತ್ರದಲ್ಲಿ ಕೂಡ ದರ್ಶನ್ ರವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಈಗ ನಿನ್ನೆಯಷ್ಟೇ ಮದುವೆಯಾಗುವುದರ ಮೂಲಕ ಸ್ಯಾಂಡಲ್ ವುಡ್ ಮಂದಿಗೆ ಸಂತೋಷವನ್ನು ನೀಡಿದ್ದಾರೆ. ಇನ್ನು ಪಂಕಜ್ ನಾರಾಯಣರವರು ಮದುವೆಯಾಗಿರುವುದು ರಕ್ಷಿತಾ ಸುರೇಂದರ್ ಎನ್ನುವವರನ್ನು. ಇಬ್ಬರು ಕೂಡ ಕಳೆದ ತಿಂಗಳಷ್ಟೇ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು.
ಇನ್ನು ನೆನ್ನೆಯಷ್ಟೇ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಇನ್ನು ಕೆಲವು ಸಮಯಗಳ ಹಿಂದಷ್ಟೇ ಎಸ್ ನಾರಾಯಣ ರವರ ಎರಡನೇ ಮಗನ ಮದುವೆ ನಡೆದಿತ್ತು. ಈಗ ಮೊದಲನೇ ಮಗ ಪಂಕಜ್ ನಾರಾಯಣರವರ ಮದುವೆ ನಡೆದಿದೆ. ಇನ್ನು ಪಂಕಜ್ ನಾರಾಯಣ್ ಹಾಗೂ ರಕ್ಷಿತಾ ಅವರ ಮದುವೆಯ ಫೋಟೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸುದ್ದಿ ಮಾಡುತ್ತಿದ್ದು ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ. ಇನ್ನು ಇವರಿಬ್ಬರ ಮದುವೆಗೆ ಕೂಡ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿ ವಧುವರರಿಗೆ ಶುಭಹಾರೈಸಿದರು. ಪಂಕಜ್ ನಾರಾಯಣರವರ ಮದುವೆಗೆ ಯಾರೆಲ್ಲ ಬಂದಿದ್ದಾರೆ ಎಂಬುದನ್ನು ನೀವು ಈ ಕೆಳಗಡೆ ಇರುವ ಫೋಟೋಗಳನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ.
Comments are closed.