ಲಕ್ಷ್ಮೀ ಬಾರಮ್ಮ ಖ್ಯಾತಿಯ ರಶ್ಮಿ ಪ್ರಭಾಕರ್ ಅವರನ್ನು ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತಾ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಮದುವೆಯಾಗುವುದನ್ನು ಜಾಸ್ತಿ ಮಾಡಿದ್ದಾರೆ. ಕಾರಣ ಯಾವುದೇ ಇರಲಿ ಶುಭ ಸಂದರ್ಭಕ್ಕೆ ಸಮಯಗಳ ಲೆಕ್ಕಾಚಾರ ಹಾಕಬಾರದು. ಇನ್ನು ಈ ಮದುವೆಯಾಗುವವರ ಲಿಸ್ಟಿಗೆ ಲಕ್ಷ್ಮೀ ಬಾರಮ್ಮ ಖಾತೆಯ ಚಿನ್ನು ಅಂದರೆ ರಶ್ಮಿ ಪ್ರಭಾಕರ್ ಅವರು ಕೂಡ ಸೇರಿದ್ದಾರೆ.
ಹೌದು ಗೆಳೆಯರೆ ರಶ್ಮಿ ಪ್ರಭಾಕರ್ ರವರು ನಿನ್ನೆಯಷ್ಟೇ ತಮ್ಮ ಬಹುಕಾಲದ ಗೆಳೆಯ ನಿಖಿಲ್ ಭಾರ್ಗವ್ ರವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ರಶ್ಮಿ ಪ್ರಭಾಕರ್ ರವರು ದಕ್ಷಿಣ ಭಾರತ ಚಿತ್ರರಂಗ ಕಂಡಂತಹ ಅತ್ಯಂತ ಜನಪ್ರಿಯ ನಟಿ ದಿವಂಗತ ಸೌಂದರ್ಯ ರವರ ದೂರದ ಸಂಬಂಧಿ. ಇನ್ನು ಈಗ ರಶ್ಮಿ ಪ್ರಭಾಕರ್ ಅವರು ಕೆಲವು ದಿನಗಳ ಹಿಂದಷ್ಟೇ ತಾವು ಮುಂದೆ ಮದುವೆಯಾಗಲಿರುವ ಹುಡುಗನ ಜೊತೆಗೆ ಫೋಟೋವನ್ನು ಶೇರ್ ಮಾಡಿದ್ದರು ಆದರೆ ಆ ಫೋಟೋದಲ್ಲಿ ಅವರ ಮುಖವನ್ನು ತೋರಿಸಲಿಲ್ಲ. ಅಭಿಮಾನಿಗಳು ಕೂಡ ರಶ್ಮಿ ಪ್ರಭಾಕರ್ ಅವರ ಮನೆ ಗೆದ್ದಂತಹ ರಾಜಕುಮಾರ ಯಾರು ಎಂಬುದನ್ನು ನೋಡಲು ಸಾಕಷ್ಟು ಕಾತರರಾಗಿದ್ದರು. ಕೊನೆಗೂ ರಶ್ಮಿ ಪ್ರಭಾಕರ್ ರವರ ನಿನ್ನೆಯ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಹುಡುಗನ ಕುರಿತಂತೆ ಎಲ್ಲರಿಗೂ ಕೂಡ ತಿಳಿದುಬಂದಿದೆ.
ರಶ್ಮಿ ಪ್ರಭಾಕರ್ ರವರು ನಿಖಿಲ್ ಭಾರ್ಗವ್ ರವರ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಇಬ್ಬರು ಕೂಡ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಹಲವಾರು ವರ್ಷಗಳಿಂದ ಇಬ್ಬರೂ ಕೂಡ ಪರಿಚಿತರಾಗಿದ್ದು ಪರಿಚಯ ಸ್ನೇಹಕ್ಕೆ ತಿರುಗಿ ಈಗ ಮದುವೆಗೆ ಸಿದ್ಧರಾಗಿದ್ದಾರೆ. ಇನ್ನು ಮೂಲಗಳ ಪ್ರಕಾರ ತಿಳಿದುಬಂದಿರುವಂತೆ ನಿಖಿಲ್ ಭಾರ್ಗವ್ ಅವರು ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಉನ್ನತ ಸ್ಥಾನದಲ್ಲಿರುವ ಉದ್ಯೋಗಿಯಾಗಿದ್ದಾರೆ. ಈಗಾಗಲೇ ಅಭಿಮಾನಿಗಳು ಈ ಜೋಡಿಯನ್ನು ನೋಡಿ ತುಂಬಾನೇ ಖುಷಿಪಟ್ಟು ಕೊಂಡಿದ್ದು ಅತಿ ಶೀಘ್ರದಲ್ಲಿ ಇವರ ಮದುವೆಯನ್ನು ನೋಡುವುದಕ್ಕಾಗಿ ಕಾತರರಾಗಿದ್ದಾರೆ. ಈ ಜೋಡಿಯ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.