Neer Dose Karnataka
Take a fresh look at your lifestyle.

ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಕಿಕೊಂಡ ಲೆಹಂಗಾ ಬೆಲೆ ಎಷ್ಟು ಗೊತ್ತೇ?? ತಿಳಿದರೆ ನೀವು ನಂಬುವುದಿಲ್ಲ.

9

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಕಳೆದ ಲಾಕ್ ಡೌನ್ ಸಮಯದಲ್ಲಿ ಅತ್ಯಂತ ಹೆಚ್ಚು ಸುದ್ದಿಗೆ ಬಂದಂತಹ ಹೆಸರು ಎಂದರೆ ಸುಶಾಂತ್ ಸಿಂಗ್ ರಜಪೂತ್ ರವರ ಹೆಸರು. ಸುಶಾಂತ್ ಸಿಂಗ್ ರಜಪೂತ್ ರವರ ಪ್ರೇಯಸಿಯಾಗಿ ಸುದ್ದಿಯಾದವರು ರಿಯಾ ಚಕ್ರಬೋರ್ಟಿ. ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು ಕೂಡ ಅವರು ಜನಪ್ರಿಯರಾಗಿದ್ದು ಸುಶಾಂತ್ ಸಿಂಗ್ ರಜಪೂತ್ ರವರ ದೇಹಾಂತ್ಯ ಆದಮೇಲೆ.

ಇನ್ನು ಸುಶಾಂತ್ ಸಿಂಗ್ ರಜಪೂತ್ ಅವರು ನಿಧನ ಹೊಂದಲು ರಿಯಾ ಚಕ್ರಬೋರ್ಟಿ ಕಾರಣ ಎಂಬುದಾಗಿ ಪೊಲೀಸರ ಬಳಿ ಸುಶಾಂತ್ ಸಿಂಗ್ ರಜಪೂತ್ ರವರ ಹೆತ್ತವರು ಕೂಡ ದೂರಿದ್ದರು. ಇನ್ನು ಇದೆಲ್ಲಾ ಪ್ರಕರಣಗಳಿಂದ ಕೂಡ ಹೊರಬರಲು ರಿಯಾ ಚಕ್ರಬೋರ್ಟಿ ಸಾಕಷ್ಟು ಹೋರಾಟವನ್ನು ಕೂಡ ಮಾಡಿದ್ದರು. ಇನ್ನು ಬಾಲಿವುಡ್ ಚಿತ್ರರಂಗದಿಂದ ಕೂಡ ಇವರನ್ನು ಕೊಂಚ ಮಟ್ಟಿಗೆ ದೂರ ಇಡಲಾಯಿತು. ಇನ್ನು ಇವರು ಕಾಣಿಸಿಕೊಂಡಿರುವ ಕೊನೆಯ ಚಿತ್ರವೆಂದರೆ ಅಮಿತಾಬ್ ಬಚ್ಚನ್ ಹಾಗೂ ಇಮ್ರಾನ್ ಹಶ್ಮಿ ನಟಿಸಿರುವ ಚೆಹ್ರೆ ಚಿತ್ರ. ಇದಾದ ನಂತರ ಯಾವುದೇ ಸಿನಿಮಾಗಳಿಗೂ ಕೂಡ ಅವರಿಗೆ ಆಫರ್ ಅಥವಾ ಅವಕಾಶ ಸಿಕ್ಕಿಲ್ಲ ಎಂಬುದಾಗಿ ಕೇಳಿಬರುತ್ತಿದೆ.

ಇನ್ನು ಇತ್ತೀಚಿಗಷ್ಟೇ ರಿಯಾ ಚಕ್ರಬೋರ್ಟಿ ಅವರು ಸಾಕಷ್ಟು ಸುದ್ದಿಗೆ ಬಂದಿದ್ದಾರೆ. ನಮಗೆಲ್ಲ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಮದುವೆ ಸೀಸನ್ ಪ್ರಾರಂಭವಾಗಿದೆ. ಅನುಷ್ಕಾ ರಂಜನ್ ಹಾಗೂ ಆದಿತ್ಯ ಸೀಲ್ ರವರ ಮದುವೆ ಇತ್ತೀಚೆಗೆ ನಡೆಯಿತು. ಈ ಮದುವೆಯಲ್ಲಿ ಬಾಲಿವುಡ್ ಚಿತ್ರರಂಗದ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಆದರೆ ಅವರೆಲ್ಲರಿಗಿಂತ ಸಾಕಷ್ಟು ಮಿಂಚಿದ್ದು ಮಾತ್ರ ರಿಯಾ ಚಕ್ರಬೋರ್ಟಿ. ಬರೋಬ್ಬರಿ ಒಂದು ಲಕ್ಷ ರೂಪಾಯಿ ಮೌಲ್ಯದ ಲೆಹೆಂಗಾ ವನ್ನು ಧರಿಸಿಕೊಂಡು ರಿಯಾ ಚಕ್ರಬೋರ್ಟಿ ಈ ಮದುವೆಗೆ ಹಾಜರಾಗಿದ್ದರು. ಇದು ಎಲ್ಲರ ಕಣ್ಮನವನ್ನು ಕೂಡ ಸೆಳೆಯಿತು. ಇನ್ನು ಈ ಫೋಟೋವನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಇದಕ್ಕೆ ಅಭಿಮಾನಿಗಳು ಪರಮ ಸುಂದರಿ ಎಂಬುದಾಗಿ ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.