Neer Dose Karnataka
Take a fresh look at your lifestyle.

ತೀರಿಹೋದ ವ್ಯಕ್ತಿ ಎರಡು ಗಂಟೆ ನಂತರ ಬದುಕಿ ಬಂದ. ಆತ ಎಲ್ಲಿ ಇದ್ದನಂತೆ ಗೊತ್ತೇ?? ಅಷ್ಟಕ್ಕೂ ಆತ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಹಲವಾರು ವಿಚಿತ್ರ ಹಾಗೂ ಅಸಹಜ ವಿಷಯಗಳನ್ನು ಹಾಗೂ ಘಟನೆಗಳನ್ನು ನೀವು ನೋಡಿರಬಹುದು ಹಾಗೂ ಕೇಳಿರಬಹುದು. ಇಂದು ನಾವು ಹೇಳಹೊರಟಿರುವ ವಿಚಾರ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಇದನ್ನು ಕೇಳಿದ ನಂತರ ನೀವು ಕೂಡ ಆಶ್ಚರ್ಯ ಹಾಗೂ ಬೆಚ್ಚಿ ಬೀಳುವುದು ಗ್ಯಾರಂಟಿ. ಯಾಕೆಂದರೆ ವಿಷಯವೇ ಹಾಗಿದೆ.

ಹೌದು ಗೆಳೆಯರು ಯಾಕೆಂದರೆ ಒಬ್ಬ ಮನುಷ್ಯ ಮರಣ ಹೊಂದಿದ ನಂತರ ಎರಡು ಗಂಟೆ ನಂತರ ಬರುವುದು ಸಾಧ್ಯನಾ. ಇದು ಖಂಡಿತವಾಗಿಯೂ ಸಲಹೆ ನೀಡುವ ಮಾತಲ್ಲ ನಿಜವಾಗಿಯೂ ಕೂಡ ಹೀಗೆ ಆಗುವುದಕ್ಕೆ ಸಾಧ್ಯವಿಲ್ಲ. ಆದರೆ ಇದು ನಮ್ಮ ದೇಶದಲ್ಲಿ ಒರಿಸ್ಸಾದ ಬೈ ರಾಂಪುರದಲ್ಲಿ ನಡೆದಿದೆ. ಹಾಗಿದ್ದರೆ ಆತ ಮರಣ ಹೊಂದಿದ ನಂತರ 2ಗಂಟೆಯಲ್ಲಿ ಏನಾದ ಏನು ಮಾಡುತ್ತಿದ್ದ ಎಲ್ಲಿಗೆ ಹೋಗಿದ್ದ ಎಂಬುದರ ಕುರಿತಂತೆ ವಿವರವಾಗಿ ಹೇಳುತ್ತೇನೆ ತಪ್ಪದೇ ಕೊನೆಯವರೆಗೂ ಓದಿ. ಶ್ರೀಕಾಂತ್ ರೆಡ್ಡಿ ದಂಪತಿಗಳು ಒರಿಸ್ಸಾದಲ್ಲಿ ನೆಲೆಸಿರುತ್ತಾರೆ ಮೂಲತಹ ಅವರು ಆಂಧ್ರಪ್ರದೇಶದವರು.

ಇನ್ನು ಅವರಿಗೆ ಐದು ಜನ ಮಕ್ಕಳು. ಇನ್ನು ಇವರ ಮಕ್ಕಳಿಗೆ ಮದುವೆ ಕೂಡ ಆಗಿರುತ್ತೆ ಇದು ನಡೆದಿರೋದು 1984 ರಲ್ಲಿ. ನಿಮಗೆಲ್ಲ ತಿಳಿದಿರುವಂತೆ ಜಗದ್ವಿಖ್ಯಾತ ಪುರಿಜಗನ್ನಾಥ ಸ್ವಾಮಿ ದೇವಾಲಯ ಇರುವುದು ಕೂಡ ಒರಿಸ್ಸಾದ ಪುರಿಯಲ್ಲಿ. ಇವರು ಕುಟುಂಬ ಸಮೇತರಾಗಿ ಪುರಿಜಗನ್ನಾಥ ಸ್ವಾಮಿಯ ಜಾತ್ರಾಮಹೋತ್ಸವವನ್ನು ನೋಡಲು ಹೋಗಿರುತ್ತಾರೆ. ದೇವರ ದರ್ಶನವನ್ನು ಮಾಡಿ ಉತ್ಸವವನ್ನು ಮುಗಿಸಿಕೊಂಡು ಬಂದು ರಾತ್ರಿ ಊಟ ಮಾಡಿ ಎಲ್ಲರೂ ಕೂಡ ಮಲಗಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀಕಾಂತ್ ರೆಡ್ಡಿ ಅವರಿಗೆ ಹಠಾತ್ತಾಗಿ ಎದೆಯಲ್ಲಿ ಸಮಸ್ಯೆ ಕಂಡುಬರುತ್ತದೆ.

ಶ್ರೀಕಾಂತ್ ರೆಡ್ಡಿ ಅವರ ಎರಡನೇ ಮಗನಾಗಿರುವ ಗೋವಿಂದರೆಡ್ಡಿ ತಮ್ಮ ಫ್ಯಾಮಿಲಿ ಡಾಕ್ಟರನ್ನು ಕರೆದುಕೊಂಡು ಬರುವ ಅಷ್ಟರೊಳಗೆ ಶ್ರೀಕಾಂತ್ ರೆಡ್ಡಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನು ಅವರ ಫ್ಯಾಮಿಲಿ ಡಾಕ್ಟರ್ ಬಂದು ತಪಾಸಣೆ ಮಾಡಿ ಕುಟುಂಬದವರಿಗೆ ದೃಢೀಕರಿಸುತ್ತಾರೆ. ಇದನ್ನು ಕೇಳಿದ ನಂತರ ಅವರ ಪತ್ನಿ ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳು ಎಲ್ಲರೂ ಕೂಡ ಅಳಲು ಪ್ರಾರಂಭಿಸುತ್ತಾರೆ. ಆರ್ತನಾದ ಎನ್ನುವುದು ಆಕ್ರಂದನ ವಾಗಿ ಬದಲಾಗಿ ಹೋಗುತ್ತದೆ. ಆದರೆ ಸರಿಸುಮಾರು ಎರಡು ಗಂಟೆ ನಂತರ ಅಂದರೆ ರಾತ್ರಿ ಸರಿ ಸುಮಾರು 1.30 ಹೊತ್ತಿಗೆ ಶ್ರೀಕಾಂತ ರೆಡ್ಡಿ ಸಡನ್ನಾಗಿ ಎದ್ದು ನಿಲ್ಲುತ್ತಾರೆ.

ಆಗ ಎಲ್ಲರನ್ನೂ ಹೊರಗೆ ಕಳುಹಿಸಿ ಅವರ ಗಂಡುಮಕ್ಕಳು ಹಾಗೂ ಫ್ಯಾಮಿಲಿ ಡಾಕ್ಟರ್ ಶ್ರೀಕಾಂತ್ ರೆಡ್ಡಿ ಅವರ ಬಳಿ ಏನಾಯ್ತು ಎಂಬುದಾಗಿ ಸವಿವರವಾಗಿ ಹೇಳಲು ಕೇಳುತ್ತಾರೆ. ಆಗ ಶ್ರೀಕಾಂತ್ ರೆಡ್ಡಿ ಅವರು ನಾನು ನೀವೆಲ್ಲರೂ ಅಳುತ್ತಿರುವುದನ್ನು ನೋಡುತ್ತಲೇ ಇದ್ದೆ ಆದರೆ ನನ್ನ ದೇಹದ ಮೇಲೆ ನನಗೆ ಯಾವುದೇ ಕಂಟ್ರೋಲ್ ಇರಲಿಲ್ಲ ನಾನು ಜ್ಞಾನದಿಂದಲೇ ಇದ್ದೆ ಆದರೆ ನನ್ನ ದೇಹವನ್ನು ನಾನು ಎದ್ದು ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ.

ಯಾರೋ ಇಬ್ಬರು ನನ್ನನ್ನು ಎಲ್ಲಿಗೋ ಕರೆದುಕೊಂಡು ಹೋಗಲು ಬಂದಿದ್ದರು ಆದರೆ ಎರಡು ಗಂಟೆಗಳ ಸತತ ಪ್ರಯತ್ನ ನಂತರವೂ ಕೂಡ ಅವರು ನನ್ನನ್ನು ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅವರು ಹೋದ ನಂತರ ನನಗೆ ಈಗ ಎದ್ದೇಳಲು ಸಾಧ್ಯವಾಗಿದೆ ನೀವೆಲ್ಲರೂ ಅಳುತ್ತಿದ್ದುದನ್ನು ನೋಡಿದ್ದೇನೆ ಇಲ್ಲಿ ಏನೇನಾಯಿತು ಎಲ್ಲವೂ ಕೂಡ ನನಗೆ ತಿಳಿದಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ನಂತರ ಫ್ಯಾಮಿಲಿ ಡಾಕ್ಟರ್ ಗೆ ಸಾಕಷ್ಟು ಗೊಂದಲಮಯ ಸನ್ನಿವೇಶ ಏರ್ಪಾಡಾಗುತ್ತದೆ. ಆದರೆ ಇದಾದ ನಂತರ ಮತ್ತೆ ನಾಲ್ಕು ತಿಂಗಳಲ್ಲಿ ಶ್ರೀಕಾಂತ್ ರೆಡ್ಡಿ ಅವರಿಗೆ ಮತ್ತೆ ಹೃದಯದ ಸಮಸ್ಯೆ ಕಾಣಿಸಿಕೊಂಡು ಮರಣವನ್ನು ಹೊಂದುತ್ತಾರೆ. ಇಂತಹ ಅದೆಷ್ಟೋ ವಿಚಾರಗಳು ವೈಜ್ಞಾನಿಕ ಲೋಕಕ್ಕೆ ಸವಾಲನ್ನು ಹೆಸರೂ ಕೂಡ ಅದನ್ನು ನಂಬುವುದು ಬಿಡುವುದು ಎಂಬುದು ತರ್ಕಕ್ಕೆ ನಿಲುಕದ್ದು.

Comments are closed.