ಬಿಗ್ ನ್ಯೂಸ್: ಹಂಸಲೇಖ ಅವರ ವಿರುದ್ಧ ದಾಖಲಾಗಿದ್ದ ದೂರು ವಾಪಸ್ ಪಡೆಯಲು ನಿಜವಾದ ಕಾರಣ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ 90ರ ದಶಕದಲ್ಲಿ ಎಲ್ಲರಿಗೂ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಚಿತ್ರಗಳು ಸಾಕಷ್ಟು ಇಷ್ಟವಾಗುತ್ತಿದ್ದವು. ಅದಕ್ಕೆ ಮುಖ್ಯ ಕಾರಣವೆಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಚಿತ್ರಗಳೆಲ್ಲವೂ ಕೂಡ ಉತ್ತಮ ಹಾಡುಗಳನ್ನು ಹೊಂದಿರುತ್ತಿದ್ದವು. ಅದಕ್ಕೆ ಮುಖ್ಯ ಕಾರಣವೆಂದರೆ ಸಂಗೀತ ನಿರ್ದೇಶಕ ಹಂಸಲೇಖ ರವರು. ಹಂಸಲೇಖರವರ ಸಂಗೀತ ಗಳಿಂದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಚಿತ್ರಗಳು ಕನ್ನಡ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಿತ್ತು ಎಂದರೆ ಕಂಡಿತವಾಗಿಯೂ ತಪ್ಪಾಗಲಾರದು ಇದು ಅತಿಶಯೋಕ್ತಿಯೂ ಕೂಡ ಅಲ್ಲ.
ಇನ್ನು ಈಗ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಸರಿಗಮಪ ಕಾರ್ಯಕ್ರಮದಲ್ಲಿ ಕೂಡ ಮುಖ್ಯ ಗುರುಗಳಾಗಿ ಕಾರ್ಯಕ್ರಮದ ತೀರ್ಪುಗಾರರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸಂಗೀತಗಾರರಿಗೂ ಕೂಡ ಉತ್ತಮ ಮಾರ್ಗದರ್ಶನವನ್ನು ನೀಡಿ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದ್ದಾರೆ ಕೂಡ. ಆದರೆ ಇತ್ತೀಚೆಗಷ್ಟೇ ಪೇಜಾವರಶ್ರೀಗಳ ಕುರಿತಂತೆ ಮಾತನಾಡಿ ಸಾಕಷ್ಟು ಸುದ್ದಿಗೆ ಬಂದಿದ್ದಾರೆ. ಇದರ ಕುರಿತಂತೆ ಹಂಸಲೇಖ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು ಆದರೆ ಅದನ್ನೀಗ ಹಿಂಪಡೆಯಲಾಗಿದೆ. ಹಾಗಿದ್ದರೆ ಇದರ ನಿಜವಾದ ವಿಚಾರ ಏನೆಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಕೊನೆಯವರೆಗೂ ಓದಿ.
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಇತ್ತೀಚಿಗೆ ಹಂಸಲೇಖ ಅವರು ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿರುವುದಕ್ಕೆ ಮಾತನಾಡಿದ್ದರು. ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಳ್ಳಬಹುದು ಅಷ್ಟೇ ಒಂದು ವೇಳೆ ಅವರು ಕುರಿ ಕೋಳಿ ಯನ್ನು ನೀಡಿದರೇ ತಿನ್ನಕ್ ಆಗುತ್ತಾ. ಬಲಿತವರು ದಲಿತರ ಮನೆಯಲ್ಲಿ ಹೋಗಿ ಕುಳಿತುಕೊಳ್ಳಬಹುದು ಅಷ್ಟೇ ಅದರಲ್ಲೇನು ದೊಡ್ಡ ವಿಷಯ ಎನ್ನುವುದಾಗಿ ಹೇಳಿದರು. ಇದು ಪೇಜಾವರಶ್ರೀಗಳಿಗೆ ಅವಮಾನಕರವಾಗಿ ಮಾತನಾಡಿರುವುದು ಎಂದು ಹೇಳಿ ಕೃಷ್ಣರಾಜ ಅವರು ಪೊಲೀಸ್ ಠಾಣೆಯಲ್ಲಿ ಹಂಸಲೇಖರವರ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಇದೀಗ ಅವರು ದೂರನ್ನು ವಾಪಸು ಪಡೆದಿದ್ದಾರೆ. ಇದಕ್ಕೆ ಕಾರಣ ಹಂಸಲೇಖರವರ ವಿರುದ್ಧ ಬ್ರಾಹ್ಮಣರ ಸಂಘ ಕೂಡ ದೂರನ್ನು ನೀಡಿದೆ ಅದನ್ನು ಗೌರವಿಸಿ ತನ್ನ ದೂರನ್ನು ವಾಪಸು ಪಡೆದು ಕೊಂಡಿದ್ದೇನೆ ಎಂಬುದಾಗಿ ಕೃಷ್ಣರಾಜ ಹೇಳಿದ್ದಾರೆ.
Comments are closed.