ಪುನೀತ್ ಅವರನ್ನು ಮೋದಿಯವರು ರಾಜಕೀಯಕ್ಕೆ ಕರೆದಿದ್ದರೆ?? ಇದರ ಕುರಿತು ತೆರೆಯಿಂದ ನಡೆದಿರುವ ಕಥೆ ಏನು?? ಮ್ಯಾನೇಜರ್ ಕುಮಾರ್ ಏನು ಹೇಳಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗದ ಮಾಣಿಕ್ಯ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಪುನೀತ್ ರಾಜಕುಮಾರ್ ಅವರನ್ನು ರಾಜಕೀಯಕ್ಕೆ ಕರೆದಿದ್ರಾ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವರು ಇದನ್ನು ನಿಜ ಎಂದು ಕರೆದರೆ ಕೆಲವರು ಇದನ್ನು ಸುಳ್ಳು ಎಂದು ಕರೆಯುತ್ತಾರೆ. ಆದರೆ ಇದರ ನಿಜಾಂಶ ಬೇರೆನೆ ಇದೆ. ಅದರ ಕುರಿತಂತೆ ಅವರ ಮ್ಯಾನೇಜರ್ ಆಗಿರುವ ಕುಮಾರ್ರವರು ಇದರ ಕುರಿತಂತೆ ಸವಿವರವಾಗಿ ಹೇಳುತ್ತಾರೆ.
ಕುಮಾರ್ರವರು ಹಲವಾರು ವರ್ಷಗಳಿಂದ ಅಂದರೆ ಪುನೀತ್ ರಾಜಕುಮಾರ್ ಅವರ ಪ್ರಾರಂಭದ ದಿನಗಳಿಂದಲೂ ಕೂಡ ಅವರ ಮ್ಯಾನೇಜರ್ ಆಗಿ ಅವರ ಜೊತೆಗೆ ಹಗಲಿನಿಂದ ರಾತ್ರಿಯವರೆಗೆ ಇರುತ್ತಾರೆ. ಇನ್ನು ಅವರು ಹೇಳುವಂತೆ ಒಮ್ಮೆ ಅವರಿಗೆ ನಿರ್ಮಾಪಕರಾದ ಎಸ್ಪಿ ಬಾಬುರವರು ಕರೆಮಾಡಿ ಮಾತನಾಡಬೇಕು ಎಂದು ಕರೆದು ಕರೆಸಿಕೊಳ್ಳುತ್ತಾರೆ ಆ ಜಾಗದಲ್ಲಿ ಅವರ ಜೊತೆಗೆ ಬಿಜೆಪಿ ನಾಯಕರು ಕೂಡ ಇರುತ್ತಾರೆ. ಸಿನಿಮಾ ಡೇಟ್ ಕೇಳುತ್ತಾರೆ ಎಂದು ಹೋದ ಕುಮಾರ್ ರವರಿಗೆ ಅಲ್ಲಿಯವರು ಅಪ್ಪು ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಪ್ರಶ್ನೆ ಕೇಳಿ ಹೈರಾಣಾದರು. ಇದಕ್ಕೆ ಕುಮಾರ್ ರವರು ನೇರವಾಗಿ ಅವರು ಇದಕ್ಕೆಲ್ಲ ಬರುವುದಿಲ್ಲ ಸಾರ್ ಎಂಬುದಾಗಿ ಹೇಳುತ್ತಾರೆ. ಆದರೂ ಕೂಡ ಭೇಟಿ ಮಾಡಲು ಕೇಳುತ್ತಾರೆ ಅಲ್ಲಿ ಕೂಡ ಅಪ್ಪುವವರು ನೇರಾನೇರವಾಗಿ ರಾಜಕೀಯಕ್ಕೆ ಎಂಟ್ರಿ ನೀಡುವುದಿಲ್ಲ ಎಂಬುದಾಗಿ ಹೇಳುತ್ತಾರೆ.
ಆದರೂ ಸಹ ಮೋದಿ ಅವರನ್ನು ಭೇಟಿ ಮಾಡಿ ಎಂದು ಕೇಳಿದಾಗ ಅಪ್ಪಾಜಿ ಅವರ ಬುಕ್ ಅನ್ನು ಮೋದಿಯವರಿಗೆ ನೀಡುವ ಆಸೆ ಇದ್ದಿದ್ದರಿಂದ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಮೋದಿಯವರು ಬೆಂಗಳೂರಿನ ಹೆಚ್ ಎ ಎಲ್ ನಲ್ಲಿ ವಿಮಾನ ಬದಲಾಯಿಸುವಾಗ ಅಲ್ಲಿ ಅವರಿಗೆ ರಾಜಕುಮಾರರವರ ಬುಕ್ ನೀಡಿ ಛಾಯಾಚಿತ್ರವನ್ನು ತೆಗೆದುಕೊಳ್ಳುತ್ತಾರೆ. ಇದಾದನಂತರ ಮೋದಿಯವರು ಪುನೀತ್ ರಾಜಕುಮಾರ್ ಅವರನ್ನು ಕರೆಸಿ ಆರು ನಿಮಿಷಗಳ ಕಾಲ ಮಾತನಾಡಿ ನಿಮ್ಮಂತಹ ಯುವ ನಾಯಕರು ಭಾರತ ದೇಶದ ಭವಿಷ್ಯವನ್ನು ಬದಲಾಯಿಸಲು ರಾಜಕೀಯಕ್ಕೆ ಬರಬೇಕು ಎಂಬುದಾಗಿ ಮಾತನಾಡುತ್ತಾರೆ. ಅಲ್ಲೂ ಕೂಡ ಏನು ಹೇಳದೆ ನೇರವಾಗಿ ಮನೆಗೆ ಬರುತ್ತಾರೆ. ಅವರಿಗೆ ರಾಜಕೀಯಕ್ಕೆ ಬರದೆ ಅಪ್ಪಾಜಿ ಅವರಂತೆ ಇರಬೇಕೆಂಬ ಆಸೆ ಇತ್ತು. ಹೀಗಾಗಿಯೇ ಸಾಮಾನ್ಯ ವ್ಯಕ್ತಿಯಾಗಿ ಇದ್ದುಕೊಂಡು ಸಾಕಷ್ಟು ಜನ ಸೇವೆಗಳನ್ನು ಮಾಡಿದ್ದಾರೆ ಎಂಬುದಾಗಿ ಕುಮಾರ್ರವರು ನೆನಪಿಸಿಕೊಳ್ಳುತ್ತಾರೆ.
Comments are closed.