ನರೇಂದ್ರ ಮೋದಿ ಕೃಷಿ ಕಾಯ್ದೆ ವಾಪಸ್ ಪಡೆಯಲು ಇದು ಪ್ರಮುಖ ಕಾರಣವಂತೆ, ಯಾವುದು ಗೊತ್ತಾ?? ಮೋದಿ ಪ್ಲಾನ್ ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನರೇಂದ್ರ ಮೋದಿ ಸರ್ಕಾರದ ಬಹು ನೀರಿಕ್ಷಿತ ಯೋಜನೆಯಾಗಿದ್ದ ಕೃಷಿ ಕಾಯಿದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಇಂದು ಘೋಷಿಸಿದ್ದರು. ಗುರು ನಾನಕ್ ಜಯಂತಿ ಅಂಗವಾಗಿ ಮಾತನಾಡುವ ವೇಳೆ, ಈ ಚಳಿಗಾಲದ ಅಧಿವೇಶನದಲ್ಲಿ ರೈತ ಕಾಯಿದೆಗಳನ್ನು ಹಿಂಪಡೆಯಲಾಗುವುದು ಹಾಗಾಗಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಈ ಕೂಡಲೇ ಕೈ ಬಿಟ್ಟು ಮನೆಗಳಿಗೆ ತಲುಪಬೇಕು ಎಂದು ಆಗ್ರಹಿಸಿದ್ದರು. ಆದರೇ ಇದಕ್ಕೆ ಸೊಪ್ಪು ಹಾಕದ ರೈತ ಮುಖಂಡ ರಾಕೇಶ್ ಟಿಕಾಯತ್, ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಬಿಲ್ ಹಿಂಪಡೆದ ನಂತರವಷ್ಟೇ, ಪ್ರತಿಭಟನೆಯನ್ನ ಕೊನೆಗೊಳಿಸುವುದಾಗಿ ಹೇಳಿದ್ದಾರೆ, ಅದು ಕೂಡ ಇಂದು ನಡೆದು ಹೋಗಿದೆ.
ಇನ್ನು ಈ ರೈತ ಪ್ರತಿಭಟನೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದವು.ಏಕಾಏಕಿ ಮೋದಿ ಸರ್ಕಾರದ ಈ ಮಹಾತ್ವಾಕಾಂಕ್ಷೆಯ ಯೋಜನೆ, ರೈತ ಮಸೂದೆ ವಾಪಸ್ ಪಡೆಯಲು ಮುಂಬರುವ ಚುನಾವಣೆಗಳೇ ಕಾರಣ ಎಂದು ಹೇಳಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ಹಾಗೂ ಉತ್ತರ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ. ಪಂಜಾಬ್ ನಲ್ಲಿ ಬಹಳಷ್ಟು ಜನ ಸಿಖ್ ಧರ್ಮಿಯರು ಈ ರೈತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈಗ ಚುನಾವಣೆ ನಿಮಿತ್ತ ಬಿಜೆಪಿ ಪಂಜಾಬ್ ನ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳಲು ಹೊರಟಿದೆ.
ಆದರೇ ಬಿಜೆಪಿ ರೈತ ಮಸೂದೆ ಕಾಯ್ದೆ ವಾಪಸ್ ಪಡೇದರೇ ಮಾತ್ರ ಅದರ ಜೊತೆ ಮೈತ್ರಿ ಎಂದು ಅಮರಿಂದರ್ ಸಿಂಗ್ ಹೇಳಿದ್ದರು. ಹೀಗಾಗಿ ರೈತ ಮಸೂದೆ ವಾಪಸ್ ಪಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ವಿಸ್ತೀರ್ಣದಲ್ಲಿ ಅತಿ ದೊಡ್ಡ ರಾಜ್ಯವಾಗಿರೀವ ಉತ್ತರ ಪ್ರದೇಶದಲ್ಲಿಯೂ ಚುನಾವಣೆ ಬರುತ್ತಿದೆ. ಹೀಗಾಗಿ ಅಲ್ಲಿ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಹಾಗೂ ಆರ್.ಎಲ್.ಡಿ ಅಲ್ಲಿ ರೈತರನ್ನ ಬಿಜೆಪಿ ವಿರುದ್ದ ಎತ್ತಿ ಕಟ್ಟುತ್ತಿದೆ. ಹಾಗಾಗಿ ಅದನ್ನು ಸಹ ಹತ್ತಿಕ್ಕಲು ಸದ್ಯ ರೈತ ಮಸೂದೆಯನ್ನ ವಾಪಸ್ ಪಡೆದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ದೆಹಲಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ಒಂದು ಅಂತ್ಯ ಶೀಘ್ರದಲ್ಲಿಯೇ ದೊರೆಯಲಿದೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.