Neer Dose Karnataka
Take a fresh look at your lifestyle.

ಭಾರತಕ್ಕೆ ಪ್ರವಾಸಕ್ಕೆ ಬಂದ ಅಮೆರಿಕಾದ ಹುಡುಗಿ ಇಲ್ಲಿ 12 ತರಗತಿಯ ಹುಡುಗನನ್ನು ಮದುವೆಯಾಗಿದ್ದು ಯಾಕೆ ಗೊತ್ತೇ?? ಇದಪ್ಪ ಅದೃಷ್ಟ ಅಂದ್ರೆ.

8

ನಮಸ್ಕಾರ ಸ್ನೇಹಿತರೇ ನೀವು ಹಲವಾರು ಸಿನಿಮಾಗಳಲ್ಲಿ ಪರದೇಶಗಳಿಂದ ಭಾರತಕ್ಕೆ ಬಂದು ಇಲ್ಲಿ ಸುತ್ತಾಡುತ್ತಾ ಹೀರೋ ವನ್ನು ಪ್ರೀತಿಸಿ ಮದುವೆಯಾಗಿ ಇಲ್ಲೇ ಇರುವುದನ್ನು ನೀವು ನೋಡಿರಬಹುದು. ಆದರೆ ಇದರ ಕುರಿತಂತೆ ಸಾಮಾನ್ಯ ಜನರಲ್ಲಿ ಕೇಳಿದರೆ ಅವರು ಖಂಡಿತವಾಗಿಯೂ ಇದು ಸಿನಿಮಾಗಳಲ್ಲಿ ಮಾತ್ರ ನಡೆಯುವುದು ನಿಜಜೀವನದಲ್ಲಿ ಹೇಗೆ ನಡೆಯಲು ಸಾಧ್ಯ ಎಂಬುದಾಗಿ ಉಡಾಫೆಯಿಂದ ಮಾತನಾಡುತ್ತಾರೆ.

ಹೌದು ಸ್ನೇಹಿತರೆ ಇನ್ನು ನಾವು ಮಾತನಾಡಲು ಹೊರಟಿರುವುದು ಕೂಡ ಇಂತಹ ಪ್ರೀತಿಯ ಕುರಿತಂತೆ. ಕೇಳಲು ಫಿಲ್ಮಿ ಟೈಪ್ ಇದ್ದರೂ ಕೂಡ ಇದು ನಿಜವಾಗಿಯೂ ನಡೆದಂತ ಘಟನೆಯಾಗಿದೆ. ಹಾಗಿದ್ದರೆ ಇನ್ನೇಕೆ ತಡ ಈ ಕುರಿತಂತೆ ನಾವು ನಿಮಗೆ ನೈಜ ಘಟನೆಯ ಪೂರ್ತಿ ವಿವರವನ್ನು ನೀಡುತ್ತೇವೆ ತಪ್ಪದೆ ಕೊನೆಯವರೆಗೂ ಓದಿ. ಅಮೆರಿಕ ಮೂಲದ ಮೇರಿ ಎಂಬಾಕೆ ಭಾರತ ಪ್ರವಾಸಕ್ಕಾಗಿ 2015 ರಲ್ಲಿ ಭಾರತಕ್ಕೆ ಬಂದಿರುತ್ತಾರೆ. ಇಲ್ಲಿ ಸುತ್ತಾಡುತ್ತಾ ಆಕೆ ಪ್ರಮುಖವಾಗಿ ಹಿಮಾಚಲಪ್ರದೇಶದ ಕೆಲವು ಪ್ರಮುಖ ತಾಣಗಳನ್ನು ನೋಡಲು ಬಂದಿರುತ್ತಾರೆ.

ಆದರೆ ಆಕೆ ಹಿಮಾಚಲಪ್ರದೇಶದಲ್ಲಿ ನೋಡಲು ಬಂದ ಸ್ಥಳದಲ್ಲಿ ಆಕೆಗೆ ಸರಿಯಾದ ರೂಮ್ ಹಾಗೂ ಗೈಡ್ ಸಿಗುವುದಿಲ್ಲ. ಹೀಗಾಗಿ ಮೇರಿ ಆ ಪ್ರದೇಶದ ಬೀದಿಗಳಲ್ಲಿ ಯಾವ ಸಹಾಯವೂ ಸಿಗುವುದಿಲ್ಲ ಎಂಬ ನಿರಾಶೆಯಿಂದ ಕೂತು ಕೊಂಡಿದ್ದಳು. ಆದರೆ ಅಲ್ಲಿಗೆ ಪೃಥ್ವಿ ಎಂಬಾತ 12ನೇ ತರಗತಿಯ ಹುಡುಗ ಅದೇ ದಾರಿಯಾಗಿ ಸೈಕಲ್ ನಲ್ಲಿ ಬರುತ್ತಿರಬೇಕಾದರೆ ಮೇರಿಯನ್ನು ನೋಡುತ್ತಾನೆ. ಇನ್ನು ಪ್ರಥ್ವಿ ಕೂಡ ಇಂಗ್ಲೀಷಿನಲ್ಲಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಆದರೂ ಕೂಡ ಆಕೆ ನಿರಾಸೆ ಆಗಿರುವುದಕ್ಕೆ ಕಾರಣವೇನು ಎಂಬುದನ್ನು ಆಕೆ ಬಳಿ ಹೇಗೋ ಕೇಳುತ್ತಾನೆ.

ಅದಕ್ಕೆ ಮೇರಿ ಕೂಡ ತನ್ನ ಅಸಹಾಯಕತೆಯನ್ನು ಹಾಗೂ ತಾನು ಸಿಕ್ಕಿಹಾಕಿಕೊಂಡಿರುವುದು ಕುರಿತಂತೆ ಅವರಿಗೆ ಎಲ್ಲವನ್ನು ವಿವರವಾಗಿ ಹೇಳುತ್ತಾರೆ. ಅದನ್ನು ಕೇಳಿದ ಪೃಥ್ವಿ ಮೇರಿಗೆ ಅಲ್ಲೇ ಹತ್ತಿರದಲ್ಲಿದ್ದ ಹೋಟೆಲೊಂದರಲ್ಲಿ ರೂಮಿನ ವ್ಯವಸ್ಥೆ ಮಾಡುತ್ತಾನೆ. ಇನ್ನು ಇಷ್ಟು ಮಾತ್ರವಲ್ಲದೆ ಅವಳು ಸುತ್ತಾಡಬೇಕು ಎಂದು ಇದ್ದ ಪ್ರಮುಖ ಸ್ಥಳವನ್ನು ಕೂಡ ಪ್ರತ್ವಿ ಆಕೆಗೆ ತೋರಿಸುತ್ತಾನೆ. ಇನ್ನು ಈ ಸಂದರ್ಭದಲ್ಲಿ ಮೇರಿಗೆ ಪ್ರಥ್ವಿಯ ಮೇಲೆ ಪ್ರೀತಿ ಮೂಡತೊಡಗಿತ್ತು. ಈ ಸಂದರ್ಭದಲ್ಲಿ ಮೇರಿ ತನ್ನ ಕುತ್ತಿಗೆಯ ಮೇಲೆ ಪೃಥ್ವಿಯ ಟ್ಯಾಟುವನ್ನು ಕೂಡ ಹಾಕಿಸಿಕೊಳ್ಳುತ್ತಾರೆ.

ಇನ್ನೊಮ್ಮೆ ಮೇರಿ ತನ್ನ ಪ್ರೀತಿಯನ್ನು ಪ್ರಪೋಸ್ ಮಾಡುವ ಮೂಲಕ ಪೃಥ್ವಿಗೆ ನಿವೇದನೆ ಮಾಡಿಕೊಳ್ಳುತ್ತಾಳೆ. ಇದಕ್ಕೆ ಪೃಥ್ವಿಯ ಮನೆಯವರು ಕೂಡ ಒಪ್ಪಿಕೊಳ್ಳುತ್ತಾರೆ. ಪ್ರತ್ವಿ ಗೂ ಹಾಗೂ ಮೇರಿಗೂ ಇದ್ದ ಒಂದೇ ಒಂದು ಸಮಸ್ಯೆಯೆಂದರೆ ಅದು ಭಾಷೆ. ಆದರೆ ಅದೇನು ಹೇಳುತ್ತಾರಲ್ಲ ಸ್ನೇಹಿತರೆ ಪ್ರೀತಿಯಲ್ಲಿ ಭಾಷೆ ವಯಸ್ಸು ಹಾಗೂ ರೂಪ ಮುಖ್ಯ ಅಲ್ಲ ಎಂಬುದು. ಇಲ್ಲಿ ಕೂಡ ಅದೇ ಆಯ್ತು ಸ್ನೇಹಿತರೆ. ಇನ್ನು ಮದುವೆಯಾದ ಮೇಲೆ ಪೃಥ್ವಿ ಹೇಳುವುದೇನೆಂದರೆ ಮೇರಿ ಸಾಕಷ್ಟು ಒಳ್ಳೆಯ ಹುಡುಗಿ ಹಾಗೂ ಎಲ್ಲವನ್ನೂ ಕೂಡ ಅರ್ಥಮಾಡಿಕೊಳ್ಳಬಲ್ಲ ಬುದ್ಧಿ ಅವಳಲ್ಲಿದೆ ಎಂಬುದಾಗಿ.

ಎಲ್ಲದಕ್ಕಿಂತ ಹೆಚ್ಚಾಗಿ ಜೀವನಪೂರ್ತಿ ಅವರ ಜೊತೆ ಸಂಸಾರವನ್ನು ಮಾಡಲು ನಾನು ತುಂಬಾನೇ ಖುಷಿಯಾಗಿದ್ದೇನೆ ಎಂಬುದಾಗಿ ಹೇಳುತ್ತಾನೆ. ಇನ್ನು ಮೇರಿಯನ್ನು ಕೇಳಿದಾಗ ನಾನು ಪೃಥ್ವಿಯನ್ನು ಪೂರ್ಣವಾಗಿ ಅರಿತುಕೊಂಡ ಮೇಲೆ ಅವನ್ನು ಮದುವೆಯಾಗಿದ್ದೇನೆ ಎಂಬುದಾಗಿ ಹೇಳುತ್ತಾರೆ. ಅಮೆರಿಕದ ಹುಡುಗರಿಗೆ ಹೋಲಿಸಿದರೆ ಭಾರತೀಯ ಹುಡುಗರು ಸಾಕಷ್ಟು ಒಳ್ಳೆಯ ಮನೋಭಾವದವರು ಹಾಗೂ ಶ್ರಮಜೀವಿಗಳು. ಹೀಗಾಗಿ ಪ್ರಥ್ವಿ ನನಗೆ ತುಂಬಾನೇ ಹಿಡಿಸಿದ್ದಾನೆ ನಾನು ಅವನ ಜೊತೆ ಜೀವನಪೂರ್ತಿ ಜೊತೆಯಾಗಿ ಬಾಳುತ್ತೇನೆ ಎಂಬುದಾಗಿ ಹೇಳಿಕೊಳ್ಳುತ್ತಾಳೆ. ಈ ಲವ್ ಸ್ಟೋರಿ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.