ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಬಾಲ ನಟಿಯರಾಗಿ ಮಿಂಚಿದ್ದ ನಟಿಮಣಿಯರು ಈಗ ಹೇಗಿದ್ದಾರೆ ಗೊತ್ತೇ? ಎಷ್ಟೆಲ್ಲಾ ಬದಲಾಗಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯ ಲೋಕದಲ್ಲಿ ಕೂಡ ಬಾಲನಟಿ ಹಾಗೂ ನಟರ ಸಂಖ್ಯೆಗೇನೂ ಕಡಿಮೆಯಿಲ್ಲ. ಹಲವಾರು ಪುಟಾಣಿಗಳು ಧಾರವಾಹಿಯಲ್ಲಿ ನಡೆಸಿ ಕನ್ನಡ ಪ್ರೇಕ್ಷಕರ ಮನಸೂರೆಗೊಳ್ಳಲು ಯಶಸ್ವಿಯಾಗಿದ್ದಾರೆ. ಕಿರುತೆರೆ ವಾಹಿನಿ ಹಲವಾರು ಪ್ರತಿಭಾನ್ವಿತ ಪ್ರತಿಭೆಗಳಿಗೆ ಈಗಾಗಲೇ ಅವಕಾಶ ಮಾಡಿ ಅವರ ಪ್ರತಿಭೆಗೆ ಒಂದು ಸುವರ್ಣ ವಾದ ವೇದಿಕೆಯನ್ನು ಮಾಡಿಕೊಟ್ಟಿದೆ.
ಹೌದು ಗೆಳೆಯರೇ ಕೇವಲ ಪ್ರಬುದ್ಧ ನಟರಿಗೆ ಮಾತ್ರವಲ್ಲದೆ ಬಾಲ ನಟ ನಟಿಯರು ಕೂಡ ಹೀರಿದರೆ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅವರು ಧಾರವಾಹಿಗಳ ಮೂಲಕ ಜನರ ಮನಸ್ಸಿನಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಸಫಲರಾಗಿದ್ದಾರೆ. ನೀವು ನೋಡುವ ಧಾರವಾಹಿಗಳಲ್ಲಿ ಇಂತಹ ಹಲವು ಬಾಲ ನಟಿಯರನ್ನು ಹಾಗೂ ಬಾಲ ನಟರನ್ನು ನೀವು ನೋಡಿರುತ್ತೀರಿ. ನಾವು ಇಂದು ಮಾತನಾಡಲು ಹೊರಟಿರುವುದು ಒಂದು ಕಾಲದಲ್ಲಿ ಧಾರವಾಹಿಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡವರು ಈಗ ಹೇಗಿದ್ದಾರೆ ಎಂಬುದರ ಕುರಿತಂತೆ
ಮೊದಲಿಗೆ ಪುಟಗೌರಿಮದುವೆ ಖ್ಯಾತಿಯ ಸಾನಿಯಾ ಹೌದು ಗೆಳೆಯರೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಒಂದೊಮ್ಮೆ ಪುಟ್ಟಗೌರಿ ಪಾತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದ ಸಾನಿಯಾ ಅಯ್ಯರ್ ಈಗಾಗಲೇ ಬೆಳೆದು ದೊಡ್ಡವರಾಗಿದ್ದಾರೆ. ಇನ್ನು ಇವರು ಪದವಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ನೋಡಲು ಯಾವ ಸ್ಟಾರ್ ಹೀರೋಯಿನ್ನು ಕೂಡ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಪ್ರವೇಶ ಮಾಡಿದರು ಕೂಡ ಯಾವುದೇ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಇನ್ನು ಸಾನಿಯಾ ಅಯ್ಯರ್ ಕೇವಲ ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಫೇಮಸ್. ಹೌದು ಇವರು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಲಕ್ಷಾಂತರ ಮಂದಿ ಫಾಲವರ್ಸ್ ಹಾಗೂ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಇವರು ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಬಂದರೆ ಖಂಡಿತವಾಗಿಯೂ ಸಿನಿಮಾ ಪ್ರೇಕ್ಷಕರು ಕೂಡ ಇವರನ್ನು ಮೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇವರು ಈಗ ಹೇಗಿದ್ದಾರೆ ಎಂಬುದನ್ನು ನೀವು ಈ ಭಾವಚಿತ್ರಗಳಲ್ಲಿ ನೋಡಬಹುದಾಗಿದೆ.
ಕಿನ್ನರಿ ಧಾರವಾಹಿಯ ದಿಶಾ ರಾಮ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿ ಮಣಿ ಪಾತ್ರವನ್ನು ನಿರ್ವಹಿಸುತ್ತಿದ್ದ ದಿಶಾ ರಾಮ್ ರವರು ಈಗಾಗಲೇ ಬೆಳೆದು ದೊಡ್ಡವರಾಗಿದ್ದು ಇವರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿರುತ್ತದೆ. ಚುಕ್ಕಿ ಸೀರಿಯಲ್ ಪ್ರಶ್ಮಾ ಚುಕ್ಕಿ ಸೀರಿಯಲ್ ಖ್ಯಾತಿಯ ಪ್ರಶ್ಮಾ ಎಸ್ ಪ್ರಕಾಶ್ ರವರು ಈಗಾಗಲೇ ಟೀನೇಜ್ ಹುಡುಗಿಯಾಗಿದ್ದು ಪ್ರಬುದ್ಧ ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ.
ಲಕುಮಿ ಧಾರಾವಾಹಿಯಲ್ಲಿ ನಟಿಸಿದ್ದ ಸುಷ್ಮ ಶೇಖರ್ ಅವರು ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳಲ್ಲಿ ಹೀರೋಯಿನ್ ಪಾತ್ರದಲ್ಲಿ ಕೂಡ ಕಾಣಿಸಿಕೊಂಡು ಎಲ್ಲರ ಮನಗೆದ್ದಿದ್ದಾರೆ. ಡ್ರಾಮಾ ಜೂನಿಯರ್ ಸೀಸನ್ 1ರಲ್ಲಿ ಕಾಣಿಸಿಕೊಂಡಿದ್ದ ಅಂತಹ ಮಹತಿ ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿ ಅಮೂಲ್ಯ ರವರ ಮುದ್ದು ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಈ ಹಿಂದೆ ಧಾರವಾಹಿಗಳಲ್ಲಿ ಪುಟ್ಟ ಮುದ್ದು ಮಕ್ಕಳಂತೆ ಕಾಣಿಸಿಕೊಂಡಿದ್ದ ಬಾಲ ನಟಿಯರಿಗೆ ಪ್ರಬುದ್ಧರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.