ವಿಚ್ಛೇದನದ ಬಳಿಕ ನಾಗಚೈತನ್ಯ ಕುಟುಂಬಕ್ಕೆ ಸೇರಿದ ಸ್ಟುಡಿಯೋಗೆ ಭೇಟಿ ನೀಡಿದ ಸಮಂತ ಯಾಕೆ ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಟಾಲಿವುಡ್ ಚಿತ್ರರಂಗದ ಖ್ಯಾತ ಜೋಡಿಗಳಾಗಿರುವ ಸಮಂತ ಹಾಗೂ ನಾಗಚೈತನ್ಯ ಪರಸ್ಪರ ಒಪ್ಪಿಗೆಯಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವುದು ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ. ಸಮಂತಾ ರವರು ವಿವಾಹ ವಿಚ್ಛೇದನವನ್ನು ಪಡೆದ ನಂತರ ಹಲವಾರು ಪ್ರದೇಶಗಳಿಗೆ ಹೋಗಿ ಸುತ್ತಾಡಿಕೊಂಡು ಬಂದಿದ್ದರು. ನಾಗಚೈತನ್ಯ ರವರ ಹಲವಾರು ಚಿತ್ರಗಳು ಕೂಡ ಅವರ ಜನ್ಮದಿನದ ವಿಶೇಷವಾಗಿ ಮೊನ್ನೆಯಷ್ಟೇ ಘೋಷಣೆ ಕೂಡ ಆಗಿದ್ದರು.

ಇನ್ನು ನಿಮಗೆಲ್ಲ ತಿಳಿದಿರುವಂತೆ ಸಮಂತ ರವರು ಇತ್ತೀಚೆಗೆ ಯಾವುದೇ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ತೆಲುಗಿನಲ್ಲಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಐಟಂ ಡಾನ್ಸ್ ನಲ್ಲಿ ಸಮಂತರ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಈಗಾಗಲೇ ಚಿತ್ರತಂಡದಿಂದ ಕನ್ಫರ್ಮ್ ಆಗಿದೆ. ಇನ್ನು ಪುಷ್ಪ ಚಿತ್ರ ಬಿಟ್ಟರೆ ತೆಲುಗಿನಲ್ಲಿ ಸಮಂತ ರವರು ನಟಿಸಿರುವ ಏಕೈಕ ತೆಲುಗು ಚಿತ್ರವೆಂದರೆ ಅದು ಶಾಕುಂತಲಂ. ಶಾಕುಂತಲಂ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಚಿತ್ರದ ಡಬ್ಬಿಂಗ್ ಭಾಗ ಮಾತ್ರ ಬಾಕಿ ಉಳಿದಿದೆ.

ಇನ್ನು ಇದೇ ಶಾಕುಂತಲಂ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್ ನಲ್ಲಿ ಇರುವ ಅನ್ನಪೂರ್ಣ ಸ್ಟುಡಿಯೋ ವಿವಾಹ ವಿಚ್ಛೇದನ ಪಡೆದ ನಂತರ ಮೊದಲ ಬಾರಿಗೆ ಸಮಂತ ರವರು ಭೇಟಿ ನೀಡಿದ್ದಾರೆ. ಇದೇನಪ್ಪ ವಿಶೇಷ ಅಂತೀರಾ ಹೌದು ಇಲ್ಲಿ ಕೂಡ ಒಂದು ವಿಶೇಷವಿದೆ. ಅನ್ನಪೂರ್ಣ ಸ್ಟುಡಿಯೋ ನಾಗಚೈತನ್ಯ ರವರ ಅಕ್ಕಿನೇನಿ ಕುಟುಂಬಕ್ಕೆ ಸೇರಿದ್ದಾಗಿದೆ. ಕೆಲವರು ಇದನ್ನು ನೋಡಿ ಚಿತ್ರದ ಕುರಿತಂತೆ ಸಮಂತ ಅವರಿಗಿರುವ ಕಮಿಟ್ಮೆಂಟ್ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *