ಅಧಿಕೃತವಾಗಿ ಬಿಡುಗಡೆಯಾಯಿತು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಕೋಟಿ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿನ್ನೆಯಷ್ಟೇ ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಬಹು ಸಮಯಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ದೊಡ್ಡ ಪರದೆ ಮೇಲೆ ಬಿಡುಗಡೆಯಾಗಿತ್ತು. ಚಮಕ್ ಚಿತ್ರದ ನಂತರ ಮತ್ತೊಮ್ಮೆ ಸಿಂಪಲ್ ಸುನಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಖತ್ ಚಿತ್ರದ ಮೂಲಕ ಒಂದಾಗಿದ್ದಾರೆ.
ಚಮಕ್ ಚಿತ್ರ ಕೂಡ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿತ್ತು. ಈಗ ಸಖತ್ ಚಿತ್ರ ಕೂಡ ಅದೇ ಮಾರ್ಗಕ್ಕೆ ಸೇರುವ ಎಲ್ಲಾ ಲಕ್ಷಣಗಳು ಕೂಡ ಎದ್ದುಕಾಣುತ್ತಿವೆ. ಇನ್ನು ಸಖತ್ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ರವರು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರತಿಯೊಂದು ಕ್ಷಣವು ಕೂಡ ಮನರಂಜನಾತ್ಮಕವಾಗಿ ಪ್ರೇಕ್ಷಕರಿಗೆ ಎಲ್ಲೂ ಕೂಡ ಬೋರು ಹೊಡೆಸದಂತೆ ಅದ್ಭುತವಾಗಿ ಮೂಡಿ ಬಂದಿದೆ. ಕೇವಲ ಹಾಸ್ಯಾತ್ಮಕ ದೃಶ್ಯಗಳು ಮಾತ್ರವಲ್ಲದೆ ಕೆಲವು ಕಡೆಗಳಲ್ಲಿ ಇರುವ ಟ್ವಿಸ್ಟ್ ಗಳು ಕೂಡ ನಿಮಗೆ ಸಾಕಷ್ಟು ಇಷ್ಟವಾಗುತ್ತದೆ.
ಈಗಾಗಲೇ ವಾರಾಂತ್ಯದ ದಿನವೂ ಕೂಡ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಜನಭರಿತ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಸಾಧುಕೋಕಿಲ ಹಾಗೂ ಧರ್ಮಣ್ಣ ನವರ ಕಾಮಿಡಿ ಟಾನಿಕ್ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನು ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಚಿತ್ರ ಬಾಕ್ಸಾಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಕುತೂಹಲಕ್ಕೆ ಉತ್ತರಿಸಲು ನಾವು ಹೊರಟಿದ್ದೇವೆ. ಮೊದಲನೇ ದಿನ ಸಖತ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ ಎರಡರಿಂದ ಮೂರು ಕೋಟಿ ರೂಪಾಯಿಗಳ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
Comments are closed.