ಶಿವಣ್ಣ ರವರ ಮಗಳ ಆರೋಗ್ಯದ ಕುರಿತು ಸುಖಾ ಸುಮ್ಮನೆ ಏನೇನೋ ನಂಬಬೇಡಿ, ಅಸಲಿಗೆ ಏನಾಗಿದೆ ಅನ್ನೋ ಸತ್ಯಂಶ ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಾಗ ಶಿವರಾಜ್ ಕುಮಾರ್ ಅವರ ಪುತ್ರಿಯಾಗಿರುವ ನಿರುಪಮಾ ಶಿವರಾಜ್ ಕುಮಾರ್ ರವರು ಸಮಾಧಿಯ ಬಳಿ ನಿಂತು ಭಾವನಾತ್ಮಕವಾಗಿ ಅಳುತ್ತಿದ್ದುದು ಎಲ್ಲರ ಮನಸ್ಸನ್ನು ಹಿಂಡಿತ್ತು. ಇನ್ನು ದೊಡ್ಡಮನೆಯ ಮೊದಲ ಮೊಮ್ಮಗಳು ಎಂದರೆ ನಿರುಪಮಾ ಶಿವರಾಜ್ ಕುಮಾರ್ ರವರು.
ಶಿವಣ್ಣ ಹಾಗೂ ಗೀತಕ್ಕ ನವರ ಮೊದಲ ಮಗಳಾಗಿರುವ ನಿರುಪಮಾ ಶಿವರಾಜ್ ಕುಮಾರ್ ರವರು ನೋಡಲು ಮೊದಲು ಸಾಕಷ್ಟು ದಪ್ಪ ಆಗಿದ್ದರು. ಇನ್ನು ಇವರು ಡಾಕ್ಟರಾಗಿ ರೋಗಿಗಳ ಸೇವೆ ಮಾಡಬೇಕೆಂದು ಅಂದುಕೊಂಡು ಎಂಬಿಬಿಎಸ್ ಅನ್ನು ಮುಗಿಸಿದ್ದರು. ನಂತರ ನಿರುಪಮಾ ಅವರನ್ನು ಡಾಕ್ಟರ್ ಒಬ್ಬರಿಗೆ ಮದುವೆ ಮಾಡಿಕೊಟ್ಟಿದ್ದರು. ಈ ಮದುವೆ ಸಂದರ್ಭದಲ್ಲಿ ನಿರುಪಮರವರು ಸಾಕಷ್ಟು ಸಣ್ಣ ಆಗಿ ಚಿಕಿತ್ಸೆಯನ್ನು ಕೂಡ ಪಡೆದುಕೊಂಡಿದ್ದರು. ಈ ಮದುವೆಯನ್ನು ಮೂರು ಜನ ಸಹೋದರರು ಹಾಗೂ ರಾಜ ಕುಟುಂಬಸ್ಥರು ಒಟ್ಟಾಗಿ ನಿಂತು ಸಂಭ್ರಮದಿಂದ ಮಾಡಿದ್ದರು.
ಇನ್ನು ಇತ್ತೀಚಿನ ದಿನಗಳಲ್ಲಿ ನಿರುಪಮಾ ಶಿವರಾಜ್ ಕುಮಾರ್ ರವರ ಕುರಿತಂತ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದೇನೆಂದರೆ ಸಣ್ಣ ಆಗಲು ನಿರುಪಮಾ ಶಿವರಾಜ್ ಕುಮಾರ್ ಅವರು ಚಿಕಿತ್ಸೆ ತೆಗೆದುಕೊಂಡು ಈಗ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದರ ಕುರಿತಂತೆ. ಸುದ್ದಿಯಂತೆ ಆಗಿರುವುದು ಕೂಡ ನಿಜಾನೇ. ನಿರುಪಮಾ ಶಿವರಾಜ್ ಕುಮಾರ್ ರವರಿಗೆ ಸಣ್ಣ ಆಗಲು ಚಿಕಿತ್ಸೆ ಪಡೆದ ನಂತರ ಹಲವಾರು ಸಮಸ್ಯೆಗಳು ಕೂಡ ಆರೋಗ್ಯದಲ್ಲಿ ಕಾಣಿಸಿಕೊಂಡು ಆರೋಗ್ಯ ಏರುಪೇರಾಗಿತ್ತು.
ಆದರೆ ಆ ಸಂದರ್ಭದಲ್ಲಿ ನಿರುಪಮಾ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಗಂಭೀರ ಏರುಪೇರಾದ ಕುರಿತಂತೆ ಯಾವುದೇ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿ ರಲಿಲ್ಲ. ನಂತರ ಈ ಸಮಸ್ಯೆಗೂ ಕೂಡ ನಿರುಪಮಾ ಶಿವರಾಜ್ ಕುಮಾರ್ ರವರು ವೈದ್ಯರಿಂದ ಸಲಹೆ ಪಡೆದುಕೊಂಡು ಚಿಕಿತ್ಸೆಯನ್ನು ಮಾಡಿ ಚೇತರಿಸಿಕೊಂಡಿದ್ದರು. ತಮ್ಮ ಮಗಳಿಗೆ ಆರೋಗ್ಯ ಹುಷಾರಾಗಲಿ ಎಂದು ಗೀತಕ್ಕ ಅವರು ಕೂಡ ತಿರುಪತಿಗೆ ಮುಡಿಕೊಟ್ಟಿದ್ದರು.
ಇದಾದ ನಂತರ ನಿರುಪಮಾ ಶಿವರಾಜ್ ಕುಮಾರ್ ಅವರು ತಮ್ಮ ಪತಿಯೊಂದಿಗೆ ವಿದೇಶದಲ್ಲಿ ಹೋಗಿ ನೆಲೆಸಿದ್ದರು. ಹೀಗಾಗಿ ಚಿಕ್ಕಪ್ಪ ಪುನೀತ್ ರಾಜಕುಮಾರ್ ರವರ ಮರಣದ ನಂತರ ಅವರ ಅಂತಿಮದರ್ಶನಕ್ಕೆ ಬರಲಿಕ್ಕೆ ಸಾಧ್ಯವಾಗಿರಲಿಲ್ಲ. ಇನ್ನು ತಮ್ಮ ಪತಿಯೊಡನೆ ನಿರುಪಮಾ ಶಿವರಾಜ್ ಕುಮಾರ್ ರವರು ಪುನೀತ್ ರಾಜಕುಮಾರ್ ರವರ 11ನೇ ದಿನದ ಕಾರ್ಯಕ್ರಮದಂದು ಬಂದು ಪುನೀತ್ ರಾಜಕುಮಾರ್ ರವರ ಸಮಾಧಿಯ ಬಳಿ ಪೂಜೆ ಸಲ್ಲಿಸಿ ಭಾವುಕರಾಗಿ ಕಣ್ಣೀರು ಹಾಕಿದ್ದರು.
ನಿರುಪಮಾ ಅವರ ಆರೋಗ್ಯವೂ ಕೂಡ ಸಾಕಷ್ಟು ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವುದು ಕೂಡ ಎಲ್ಲರ ಬೇಸರಕ್ಕೆ ಕಾರಣವಾಗಿದೆ ವಿಡಿಯೋಗಳಲ್ಲಿ ಕೂಡ ಅವರು ಕಳೆ ಹೀನರಾಗಿ ಇದ್ದುದನ್ನು ನಾವು ನೋಡಬಹುದಾಗಿದೆ. ರಾಜಕುಮಾರ್ ಕುಟುಂಬಕ್ಕೆ ಕಾಡುತ್ತಿರುವ ಆರೋಗ್ಯ ಸಮಸ್ಯೆ ದೋಷ ಅತಿವೇಗವಾಗಿ ಕಳೆದು ಹೋಗಲಿ ಎನ್ನುವುದೇ ನಮ್ಮ ಹಾರೈಕೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.