ಫೇಸ್ಬುಕ್ ನಲ್ಲಿ ಪ್ರೀತಿ, ಮನೆಯವರನ್ನು ಬೇಡಿ ಬೇಡಿ ಒಪ್ಪಿಸಿ ಮದುವೆಯಾದಳು. ಆಸ್ತಿ ಹಣ ಎಲ್ಲವೂ ಇತ್ತು. ಆದರೆ ಕೊನೆಗೆ ಏನಾದಳು ಗೊತ್ತಾ??
ನಮಸ್ಕಾರ ಸ್ನೇಹಿತರೇ, ಮದುವೆ ಅನ್ನುವುದು ಒಂದು ಅದ್ಭುತ ಬಂಧ. ಆದರೆ ಅದನ್ನು ಉಳಿಸಿಕೊಳ್ಳುವುದು, ಅಥವಾ ಹಾಳು ಮಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಹಾಗೆಯೇ ಇಂಥ ಸಂಬಂಧಗಳನ್ನು ಬೆಸೆಯುವಲ್ಲಿ ಸೋಶಿಯಲ್ ಮಿಡಿಯಾಗಳೂ ಇತ್ತೀಚಿಗೆ ಕಾರಣವಾಗ್ತಾ ಇರೋದು ಸೋಜಿಗದ ಸಂಗತಿ. ಹೌಸು ಸ್ನೇಹಿತರೆ ಎಷ್ಟೋ ಜನ ಇದೀಗ ಫೇಸ್ಬುಕ್ ನಲ್ಲಿ ಪರಿಚಯವಾಗಿ, ಸ್ನೇಹ ಬೆಳೆದು ಕೊನೆಗೆ ಪ್ರೀತಿ, ಮದುವೆಯ ಹಂತಕ್ಕೂ ಹೋಗುತ್ತಾರೆ. ಕೆಲವರು ಮದುವೆಯಾಗಿ ಚೆನ್ನಾಗಿಯೇ ಇದ್ದಾರೆ ಎಂದುಕೊಂಡರೆ ಇನ್ನೂ ಹಲವರ ಜೀವನ ಈ ಫೇಸ್ಭುಕ್ ಪ್ರೀತಿಗೆ ಹಾಳಾಗಿ ಹೋಗಿದೆ. ಇಂಥ ಒಂದು ಫೇಸ್ಭುಕ್ ಪ್ರೀತಿಗೆ ಸಿಲುಕಿ ನಲುಗಿಹೋದ ಹುಡುಗಿಯೊಬ್ಬಳ ಕಥೆಯನ್ನ ನಿಮ್ಮ ಮುಂದೆ ಇಡ್ತಾ ಇದ್ದೇವೆ. ಮುಂದೆ ಓದಿ..
ಆಕೆಯ ಹೆಸರು ಕೃತಿ. ಅದ್ಭುತ ಸೌಂದರ್ಯವನ್ನು ಹೊಂದಿರುವ ಈಕೆ ಕೇರಳ ರಾಜ್ಯದ ಕುಂದಾರದವಳು. ಕೃತಿ, ಮೋಹನನ್ ಹಾಗೂ ಬಿಂದು ಅವರ ಏಕೈಕ ಪುತ್ರಿ. ಹಾಗಾಗಿ ಅತ್ಯಂತ ಮುದ್ದಾಗಿ ಬೆಳೆದಿದ್ದಳು ಕೃತಿ. ಮೋಹನನ್ ಪಂಚಾಯತ್ ಆಫೀಸರ್ ಆಗಿದ್ದರೆ ಬಿಂದು ಬ್ಯೂಟಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ತಾವು ಅತ್ಯಂತ ಮುದ್ದಾಗಿ ಬೆಳೆಸಿದ್ದ ಕೃತಿಯನ್ನು ತರಾಚಿರದ ಹುಡುಗನೊಬ್ಬನಿಗೆ ಕೊಟ್ಟು ಮದುವೆ ಮಾಡ್ತಾರೆ. ಮದುವೆಯಲ್ಲಿ ಬರಿಗೈ ಅಲ್ಲ, ಸಾಕಷ್ಟು ಚಿನ್ನಾಭರಣಗಳನ್ನು ಹಾಕಿ ವೈಭವದಿಂದಲೇ ಮಗಳ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ಆದರೆ ವಿಧಿ ಬೇರೆಯದೇ ಆಟ ಆಡಿತ್ತು!
ಮದುವೆಯಾಗಿ 6 ತಿಂಗಳಿನಲ್ಲಿ ಕಾರಣಾಂತರಗಳಿಂದ ಗಂಡನಿಗೆ ವಿಚ್ಛೇಧನ ಕೊಟ್ಟು ತವರು ಮನೆಗೆ ವಾಪಸ್ಸಾಗುತ್ತಾಳೆ ಕೃತಿ. ಹಾಗೆ ಬರುವಾಗ ಆಕೆ 4 ತಿಂಗಳ ಗರ್ಭಿಣಿ. ನಂತರ ಮಗುವಾಗಿ ತವರು ಮನೆಯಲ್ಲಿಯೇ ಇದ್ದಳು ಕೃತಿ. ಹೀಗೆ 3 ವರ್ಷಗಳು ಕಳೆದುಹೋಗುತ್ತದೆ. ಹೀಗೆ ಸುಗಮವಾಗಿ ಪಾಲಕರ ಜೊತೆ ಜೀವನ ಕಳೆಯುತ್ತಿದ್ದ ಕೃತಿಗೆ ಆಗ ಗಂಡಾಂತರವೊಂಡು ಕಾದಿತ್ತು.
ಕೃತಿಗೆ ಆಗ 25 ವರ್ಷ. ಈ ಸಮಯದಲ್ಲಿ ಫೇಸ್ಬುಕ್ ನಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಪರಿಚಯವಾಗುತ್ತಾನೆ ಕೃತಿಗೆ. ಆತನ ಫ್ರೇಂಡ್ ರಿಕ್ಚೆಸ್ಟ್ ನ್ನು ಒಪ್ಪಿಕೊಂಡ ಕೃತಿ ಅವನೊಂದಿಗೆ ಮಾತನಾಡಲು ಶುರು ಮಾಡುತ್ತಾಳೆ. ತನ್ನ ಹೆಸರು ವೈಝಾಕ್, ತಾನು ಕೊಲ್ಲಂ ಮೂಲದವನು ಎಂದು ಹೇಳಿಕೊಂಡಿರುತ್ತಾನೆ ಆತ. ಆತನಿಗೆ 27 ವರ್ಷ ವಯಸ್ಸು. ಗಲ್ಫ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ಆತ ಕೇರಳದವನು. ವೈಝಾಕ್ ಹಾಗೂ ಕೃತಿ ಪರಸ್ಪರ ಮಾತನಾಡುತ್ತಾ ಒಬ್ಬರ ಬಗ್ಗೆ ಒಬ್ಬರು ಭಾವನೆಗಳನ್ನು ಹಂಚಿಕೊಳ್ಳಲು ಆರಂಭಿಸುತ್ತಾರೆ. ಇನ್ನು ವೈಝಾಕ್ ಕೃತಿಯ ಮೂರು ವರ್ಷದ ಮಗುವಿನ ಮೇಲೆಯೂ ಕೂಡ ಅಕ್ಕರೆ ತೋರಿಸುತ್ತಾನೆ. ಇದರಿಂದ ಕೃತಿಗೆ ಇಷ್ಟು ವರ್ಷ ದೂರವಾಗಿದ್ದ ಪ್ರೀತಿ ವಿಶ್ವಾಸಗಳು ಒಮ್ಮೆಲೆ ಸಿಕ್ಕಂತಾಗುತ್ತದೆ. ಗಲ್ಫ್ ನಿಂದ ಭಾರತಕ್ಕೆ ಬರುತ್ತಿರುವುದಾಗಿ ಒಮ್ಮೆ ಹೇಳುವ ಈತ ಕೃತಿಯನ್ನು ಭೇಟಿಯಾಗುವುದಾಗಿ ಹೇಳುತ್ತಾನೆ..
ಕೃತಿ ತನ್ನ ಮಗಳ ಬರ್ತಡೆಗೆ ಆತನನ್ನು ಆಹ್ವಾನಿಸುತ್ತಾಳೆ. ಆತ ಬಂದಿದ್ದು ಕೃತಿಯ ಮನೆಯವರಿಗೆ ಇಷ್ಟವಾಗುವುದೇ ಇಲ್ಲ. ಅವರು ಇದನ್ನು ಖಂಡಿಸುತ್ತಾರೆ. ಆದರೆ ಕೃತಿ ಮಾತ್ರ ಆತನೊಂಡಿಗೆ ಇನ್ನೂ ಗಾಢವಾದ ಸ್ನೇಹ ಬೆಳೆಸಿಕೊಂಡು ವಿಡೀಯೋ, ಆಡಿಯೋ ಕಾಲ್ ಮಾಡಿಕೊಂಡು ಖುಷಿಯಾಗಿರುತ್ತಾಳೆ. ನಂತರ ಆತನನ್ನೇ ಮದುವೆಯಾಗುವುದಾಗಿ ಕೃತಿ ಹೇಳಿದಾಗ ಮಗಳ ಖುಷಿಗೆ ಇಲ್ಲ ಎನ್ನಲಾಗದೆ 2019 ಫೆಬ್ರವರಿ 3 ರಂದು ಮೊದಲಿನ ಮದುವೆಯಂತೆಯೇ ಅದ್ಧೂರಿಯಾಗಿ ಸಾಕಷ್ಟು ಚಿನ್ನವನ್ನೂ, ವರದಕ್ಷಿಣೆಯನ್ನೂ ಕೊಟ್ಟು ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಡುತ್ತಾರೆ ಮನೆಯವರು.
ಇಷ್ಟಕ್ಕೆ ಮುಗಿದಿಲ್ಲ ಸ್ನೇಹಿತರೆ. ಕೆಲಸಕ್ಕೆಂದು ಗಲ್ಫ್ ಗೆ ಹಿಂತಿರುಗಿದ ವೈಝಾಕ್ ಒಂದೇ ಒಂದು ತಿಂಗಳಿನಲ್ಲಿ ಕೆಲಸ ಕಳೆದುಕೊಂಡು ಹಿಂತಿರುಗುತ್ತಾನೆ. ಕೆಲಸ ಹೋಗಿದ್ದಕ್ಕೆ ಸರಿಯಾದ ಕಾರಣವನ್ನೂ ಆತ ಕೊಡುವುದಿಲ್ಲ. ಇಲ್ಲಿಯೇ ತಾವು ಉದ್ಯಮ ಮಾಡುವುದಾಗಿ ಹೇಳಿ ಕೃತಿ ಖಾತೆಯಲ್ಲಿದ್ದ 4 ಲಕ್ಷ ಹಾಗೂ ಆಕೆಯ ತಾಯಿಯ ಖಾತೆಯಲ್ಲಿದ್ದ 6 ಲಕ್ಷ, ಒಟ್ಟೂ 10 ಲಕ್ಷ ಹಣವನ್ನು ತೆಗೆದುಕೊಳ್ಳುತ್ತಾನೆ. ಆದರೆ ಲಾಭ ಗಳಿಸುವ ಬದಲು ನಷ್ಟವನ್ನೇ ಅನುಭವಿಸುತ್ತಾನೆ. ಅಷ್ಟೇ ಅಲ ಒಂದರ ಹಿಂದೆ ಒಂದರಂತೆ ಸಾಲ ಮಾಡಿಕೊಳ್ಳುತ್ತಾ ಹೋಗುತ್ತಾನೆ. ಈ ಸಾಲ ತೀರಿಸಲು ತವರಿಂದ ಹಣ ತರಬೇಕೆಂದು ಕೃತಿಯನ್ನು ಪೀಡಿಸಲು ಶುರುಮಾಡುತ್ತಾನೆ ವೈಝಾಕ್. ಈತನ ಹಣದ ವ್ಯಾಮೋಗದ ಬಗ್ಗೆ ಕೊನೆಗೂ ಅರಿತ ಕೃತಿ ತನ್ನ ಹಣದ ಲಾಕರ್ ಕೀಯನ್ನು ಅಡಗಿಸಿಡುತ್ತಾಳೆ. ಅದನ್ನು ಕೊಡುವಂತೆಯೂ ಪೀಡಿಸುತ್ತಾನೆ. ನಂತರ ಆಕೆಯ ಪಿತ್ರಾರ್ಜಿತ ಆಸ್ತಿಯ ಮೇಲೂ ಕಣ್ಣುಹಾಕುತ್ತಾನೆ ವಝಾಕ್!
ಕೃತಿ ತಂದೆ ತಾಯಿ ಎಷ್ಟು ಬೇಡವೆಂದರೂ ಕೇಳದೆ ಇವನನ್ನು ನಂಬಿ ಮೂಸ ಹೋಗಿದ್ದಕ್ಕೆ ಪಶ್ಚಾತಾಪದಿಂದ ಅವರಿಗೂ ಹೇಳದೆ ಪತಿ ಕೊಡುವ ಮಾನಸಿಕ ಹಾಗೂ ದೈಹಿಕ ತೊಂದರೆಯನ್ನು ಸಹಿಸಿಕೊಂಡೆ ಬರುತ್ತಾಳೆ. ಆದರೆ 2019 ಅಕ್ಟೋಬರ್ ಹೊತ್ತಿಗೆ ಆಕೆಗೆ ಸಹಿಸಿಕೊಳ್ಳಲು ಸಾಧ್ಯವಾಗದೇ, ಮಗಳ ಜೊತೆಗೆ ತವರನ್ನು ಸೇರುತ್ತಾಳೆ. ಅಲ್ಲಿ ನಡೆದದ್ದೇಲ್ಲವನ್ನೂ ಹೇಳಿ ತಪ್ಪೊಪ್ಪೊಕೊಳ್ಳುತ್ತಾಳೆ. ಮಗಳ ಈ ಪರಿಸ್ಥಿತಿ ನೋಡಿ ಆಕೆಯ ತಂದೆ ತಾಯಿ ಕೃತಿಗೆ ಆಶ್ರಯ ನೀಡುತ್ತಾರೆ. ಆದರೆ ವೈಝಾಕ್ ಇಷ್ಟಕ್ಕೇ ಸುಮ್ಮನಾಗಲಿಲ್ಲ!
ವೈಝಾಕ್ ತಾನು ಬದಲಾಗಿರುವುದಾಗಿಯೂ ಕೃತಿಯ ಜೊತೆ ಮಾತನಾಡಲು ಅವಕಾಶ ಮಾಡಿಕೊಡಬೇಕೆಂದು ಕೃತಿಯ ತಂದೆ ತಾಯಿಯರನ್ನು ಕೇಳುತ್ತಾನೆ. ಕೃತಿಯ ತಂದೆ ಇದನ್ನು ನಿರಾಕರಿಸಿದರೂ ಕೃತಿಯ ತಾಯಿ ವೈಝಾಕ್ ಮೇಲೆ ಕರುಣೆಯಿಂದ ಕೃತಿಯನ್ನು ನೋಡಲು ಅವಕಾಶ ಮಾಡಿಕೊಡುತ್ತಾಳೆ. ವೈಝಾಕ್ ನವೆಂಬರ್ ನಲ್ಲಿ ಒಂದು ದಿನ ಕೃತಿಯ ಮನೆಗೆ ಬಂದು ಆಕೆಯನ್ನು ಮಾತನಾಡಿಸುತ್ತಾನೆ. ನಂತರ ಸಂಭವಿಸಿಯೇ ಬಿಡ್ತು ಅವಘಡ!
ಎಷ್ಟು ಹೊತ್ತಾದರೂ ಕೋಣೆಯಿಂದ ಹೊರ ಬರದ್ದನ್ನು ನೋಡಿ ಕೃತಿಯ ತಾಯಿ ಕೃತಿಯನ್ನು ಕರೆಯುತ್ತಾಳೆ. ಆದರೆ ಬಾಗಿಲು ತೆರೆದೇ ಇಟ್ಟು ಮಾತನಾಡಬೇಕು ಎಂಬ ತಾಕೀತಿನ ಮೇಲೆ ಕೃತಿಯನ್ನು ಮಾತನಾಡಿಸಲು ಅನುಮತಿ ಸಿಕ್ಕಿದ್ದಕಾಗಿ ಹಾಗೆಯೇ ಮಾಡಿದ್ದ ವೈಝಾಕ್. ಹಾಗಾಗಿ ಮೊದಮೊದಲು ಕೃತಿಯ ತಾಯಿಗೆ ಯಾವುದೇ ಅನುಮಾನ ಬರಲಿಲ್ಲ. ಆದರೆ ರಾತ್ರಿ 10 ಗಂಟೆ ಆದ್ರೂ ಮಗಳು ಊಟಕ್ಕೂ ಬರದ್ದನ್ನು ನೋಡಿ ಬೆಡ್ ಮೇಲೆ ಮಲಗಿರುವ ಮಗಳನ್ನು ಎಬ್ಬಿಸುತ್ತಾಳೆ ತಾಯಿ. ತಾನು ಆಸ್ಪತೆಗೆ ಹೋಗಿ ವೈದ್ಯರನ್ನು ಕರೆತರುವುದಾಗಿ ಹೇಳಿ ವೈಝಾಕ್ ವೇಗವಾಗಿ ಕಾರಿನತ್ತ ಧಾವಿಸುತ್ತಾನೆ. ಕೃತಿಯ ತಂದೆ ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಇತ್ತ ಕೃತಿ ಮಲಗಿದ್ದು ಹಾಗೆಯೇ ಅಲ್ಲ ಚಿರ ನಿದ್ರೆಗೆ ಜಾರಿಬಿಟ್ಟಿದ್ದಳು!
ನಂತರ ಕೃತಿಯ ಪಾಲಕರು ಪೋಲೀಸರಿಗೆ ವಿಷಯ ತಿಳಿಸಿದಾಗ ವೈಝಾಕ್ ನನ್ನು ಕಂಡು ಹಿಡಿಯುವುದರಲ್ಲಿ ಯಶಸ್ವಿಯಾಗುತ್ತಾರೆ. ನಂತರ ವಿಚಾರಣೆಯಲ್ಲೊ ಮಾತಿಗೆ ಮಾತು ಬೆಳೆದು ತಾವು ಕೃತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿದ್ದಾಗಿ ಹೇಳುತ್ತಾನೆ. ಕೋಪದಲ್ಲಿ ಅಚಾನಕ್ಕಾಗಿ ಘಟನೆ ನಡೆದುಹೋಯಿತು ಎನ್ನುತ್ತಾನೆ. ಸ್ನೇಹಿತರೆ, ನಾವು ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಕ್ಷಣಿಕ ಸುಖಕ್ಕೋಸ್ಕರ, ಆಕರ್ಷಣೆಗೆ ಒಳಗಾಗಿ ತಪ್ಪು ಮಾಡಿದರೆ ಅದನ್ನು ಸರಿಪಡಿಸಲು ಎಂದಿಗೂ ಸಾಧ್ಯವೇ ಇಲ್ಲ!
Comments are closed.