ಅನಿರುದ್ಧ್ ರವರು ವಿಷ್ಣುವರ್ಧನ್ ರವರ ಮಗಳು ಕೀರ್ತಿ ಅವರನ್ನು ವಿವಾಹವಾದ ಸ್ಟೋರಿ ಗೊತ್ತೇ?? ಅನಿರುಧ್ ಮೊದಲು ಮದುವೆಗೆ ಹಿಂಜರಿದಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡಿಗರು ಆರಾಧಿಸಿ ದಂತಹ ನಟರಲ್ಲಿ ವಿಷ್ಣುವರ್ಧನ್ ಕೂಡ ಒಬ್ಬರು. ತಮ್ಮ ಸರಳತೆ ಹಾಗೂ ಮೇರು ವ್ಯಕ್ತಿತ್ವದ ಮೂಲಕ ವಿಷ್ಣುವರ್ಧನ್ ರವರು ಎಲ್ಲರ ಮನಗೆದ್ದಂತಹವರು. ಹೀಗಾಗಿ ಇಂದಿಗೂ ಕೂಡ ಅವರು ಪ್ರಾಥಸ್ಮರಣೀಯರು ಎಂದರೆ ತಪ್ಪಾಗಲಾರದು. ಇನ್ನು ವಿಷ್ಣುವರ್ಧನ್ ರವರು ಹಾಗೂ ಭಾರತಿ ವಿಷ್ಣುವರ್ಧನ್ ರವರು ಇಬ್ಬರೂ ಕೂಡ ಪ್ರೀತಿಸಿ ಮದುವೆಯಾಗಿದ್ದು ಎಂಬುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ಇನ್ನು ಅವರು ಚಂದನ ಹಾಗೂ ಕೀರ್ತಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡು ಸಾಕುತ್ತಾರೆ.
ಈ ವಿಚಾರವು ಕೂಡ ಬಹುತೇಕ ಎಲ್ಲಾ ಕನ್ನಡಿಗರಿಗೂ ತಿಳಿದಿದೆ. ಇನ್ನು ಬಹುತೇಕರು ವಿಷ್ಣುವರ್ಧನ್ ರವರ ಹಿರಿಯ ಮಗಳು ಹಾಗೂ ಅನಿರುದ್ಧ ಅವರದು ಪ್ರೇಮವಿವಾಹ ಎಂಬುದಾಗಿ ತಿಳಿದುಕೊಂಡಿದ್ದಾರೆ. ಇದು ಪರಿಪೂರ್ಣವಾಗಿ ಅರೆಂಜ್ ಮ್ಯಾರೇಜ್. ವಿವಾಹದ ಹಿಂದಿನ ಸ್ವಾರಸ್ಯಕರ ವಿಚಾರವನ್ನು ಕೂಡ ನಿಮಗೆ ಹೇಳುತ್ತೇವೆ. ವಿಷ್ಣುವರ್ಧನ್ ರವರ ಇಬ್ಬರು ಮಕ್ಕಳ ಹೆಸರು ಕೀರ್ತಿ ಹಾಗೂ ಚಂದನಾ ಎಂದು.
ಇಬ್ಬರನ್ನು ಕೂಡ ಆ ಸಂಸ್ಕಾರಯುತವಾಗಿ ವಿಷ್ಣುವರ್ಧನ್ ರವರು ಬೆಳೆಸಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಮದುವೆ ವಿಚಾರವಾಗಿಯೂ ಕೂಡ ಅವರು ಸಾಕಷ್ಟು ತಲೆಕೆಡಿಸಿಕೊಂಡು ಇರುತ್ತಾರೆ ಯಾಕೆಂದರೆ ಇಷ್ಟೊಂದು ಚೆನ್ನಾಗಿ ಗಿಣಿಯಂತೆ ಸಾಕಿ ಮಕ್ಕಳನ್ನು ಹದ್ದಿನ ಕೈಗೆ ಕೊಡಬಾರದು ಎಂಬುದಾಗಿತ್ತು. ಇನ್ನು ಇತ್ತ ಅನಿರುದ್ಧ ರವರು ಮೂಲತಹ ಮಹಾರಾಷ್ಟ್ರದ ವರಾಗಿದ್ದು ಕರ್ನಾಟಕದಲ್ಲಿ ಇಂಟೀರಿಯರ್ ಡಿಸೈನಿಂಗ್ ಕೋರ್ಸನ್ನು ಕಲಿಯುತ್ತಿದ್ದು ರಂಗಭೂಮಿ ಕಲಾವಿದರಾಗಿದ್ದರು. ನಾಟಕವನ್ನು ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಸ್ವತಹ ವಿಷ್ಣುವರ್ಧನ್ ರವರ ನಿರ್ಮಿಸಿದ್ದ ಹಯವದನ ನಾಟಕದಲ್ಲಿ ಅನಿರುದ್ಧ ಅವರು ಕೂಡ ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದನ್ನು ನೋಡಲು ವಿಷ್ಣುವರ್ಧನ್ ಅವರ ತಮ್ಮ ಕುಟುಂಬ ಸಮೇತರಾಗಿ ಬಂದಿದ್ದರು.
ಇನ್ನು ಹಯವದನ ನಾಟಕದಲ್ಲಿ ಅನಿರುದ್ಧ ರವರ ಪರ್ಫಾರ್ಮೆನ್ಸ್ ನೋಡಿ ವಿಷ್ಣುವರ್ಧನ್ ರವರ ಸಾಕಷ್ಟು ಬಹುವಾಗಿ ಮೆಚ್ಚುತ್ತಾರೆ. ಹಾಗೂ ಅವರಿಗೆ ಹೋಗಿ ಅಭಿನಂದನೆಗಳನ್ನು ಕೂಡ ತಿಳಿಸುತ್ತಾರೆ. ಇದಾದನಂತರ ಅನಿರುದ್ಧ ಹಾಗೂ ವಿಷ್ಣುವರ್ಧನ್ ರವರಿಗೆ ಸಾಕಷ್ಟು ಆತ್ಮೀಯತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ರವರಿಗೆ ತನ್ನ ಮಗಳನ್ನು ಅನಿರುದ್ಧ್ ಅವರಿಗೆ ಮದುವೆ ಮಾಡಿಸಿ ಬಿಡುವ ಯೋಚನೆ ಬಂದುಬಿಡುತ್ತದೆ.
ಮೊದಮೊದಲಿಗೆ ಅನಿರುದ್ ರವರು ತಾನು ನಟನಾಗಿ ಕೂಡ ಯಾವ ಸಾಧನೆಯನ್ನೂ ಮಾಡಿಲ್ಲ ಹಾಗೂ ಹಣದಲ್ಲಿ ಕೂಡ ನನಗೆ ಏನು ಇಲ್ಲ ನಿಮ್ಮ ಮಗಳನ್ನು ಮದುವೆಯಾಗುವ ಅರ್ಹತೆ ಈಗ ನನ್ನಲ್ಲಿ ಇಲ್ಲ ಎಂಬುದಾಗಿ ಹೇಳುತ್ತಾರಂತೆ. ಆಗ ಅದಕ್ಕೆ ವಿಷ್ಣುವರ್ಧನ್ ರವರು ತಮ್ಮ ಬದುಕನ್ನೇ ಉದಾಹರಣೆಯಾಗಿ ನೀಡುತ್ತಾ ಭಾರತಿಯವರನ್ನು ಮದುವೆಯಾದಾಗ ನನ್ನ ಬಳಿ ಕೂಡ ಏನು ಇರಲಿಲ್ಲ.
ಅವರನ್ನು ಮದುವೆಯಾದ ನಂತರ ನನ್ನಲ್ಲಿ ಎಲ್ಲವೂ ಕೂಡ ಈಗ ಇದೆ ಎಂಬುದಾಗಿ ಹೇಳುತ್ತಾರೆ. ನಂತರ ಅನಿರುಧ್ ಹಾಗೂ ಕೀರ್ತಿ ಅವರ ಮದುವೆಯನ್ನು ವಿಷ್ಣುವರ್ಧನ್ ರವರು ಮಾಡುತ್ತಾರೆ. ಇಬ್ಬರು ಕೂಡ ಇಂದಿಗೂ ಸುಖವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಇಲ್ಲಿನ ವಿಷ್ಣುವರ್ಧನ್ ರವರ ಸರಳತೆಯನ್ನು ಮೆಚ್ಚಲೇಬೇಕು ಯಾಕೆಂದರೆ ಕೋಟ್ಯಾಧೀಶ ನನ್ನು ತನ್ನ ಮಗಳಿಗೆ ಮದುವೆ ಮಾಡಿಸಿ ಕೊಡಬಹುದಾಗಿತ್ತು ಆದರೆ ಅನಿರುದ್ಧ್ ರವರಿಗೆ ತನ್ನ ಮಗಳನ್ನು ಮದುವೆ ಮಾಡಿಸಿ ಕೊಟ್ಟಿದ್ದು ಅವರ ದೊಡ್ಡಗುಣ ಎಂದು ಹೇಳಬಹುದಾಗಿದೆ.
Comments are closed.