ಪುನೀತ್ ತಿಂಗಳ ಕಾರ್ಯದಂದು ಸಮಾಧಿ ಬಳಿ ಬಂದ ಪತ್ನಿ ಅಶ್ವಿನಿ ಮಾಡಿದ್ದೇನು? ಕಣ್ಣೀರಿಟ್ಟ ಶಿವಣ್ಣ.
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಒಂದು ತಿಂಗಳು ಹೇಗೆ ಕಳೆದು ಹೋಯಿತು ಎಂಬುದೇ ತಿಳಿಯುತ್ತಿಲ್ಲ. ಮನಸ್ಸಿಗೆ ದುಃಖವಾದರೂ ಕೂಡ ನಿಜಾಂಶವನ್ನು ಮನಸ್ಸಿಗೆ ಅರ್ಥೈಸಿಕೊಳ್ಳಬೇಕಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೇವಲ ನಟನಾಗಿ ಮಾತ್ರವಲ್ಲದೆ ಒಬ್ಬ ಮೇರು ವ್ಯಕ್ತಿತ್ವ ಉಳ್ಳಂತಹ ವ್ಯಕ್ತಿಯಾಗಿ ಕೂಡ ಸಮಾಜಕ್ಕೆ ತಮ್ಮ ಪ್ರಭಾವವನ್ನು ಬೀರಿ ಹೋಗಿದ್ದರು.
ಇನ್ನು ನಿನ್ನೆ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಒಂದು ತಿಂಗಳು ಪೂರ್ತಿ ಆಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಂಠೀರವ ಸ್ಟುಡಿಯೋ ಬಳಿಬಂದು ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಹೋಗಿದ್ದಾರೆ. ಈ ಸಮಯದಲ್ಲಿ ಕೂಡ ಸಹಸ್ರಾರು ಅಭಿಮಾನಿಗಳು ಪುನೀತ್ ರಾಜಕುಮಾರ್ ರವರ ಸಮಾಧಿಗೆ ಪೂಜೆ ಹಾಗೂ ನಮನವನ್ನು ಸಲ್ಲಿಸಲು ಸಾಲುಸಾಲಾಗಿ ಬರುತ್ತಿದ್ದರು. ಇದು ಪುನೀತ್ ರಾಜಕುಮಾರ್ ರವರು ಗಳಿಸಿದ ಅಂತಹ ನಿಜವಾದ ಸಂಪಾದನೆ ಎಂದರೆ ಕಂಡಿತವಾಗಿಯೂ ತಪ್ಪಾಗಲಾರದು. ಒಳ್ಳೆಯ ಕೆಲಸಗಳನ್ನು ಮಾಡಿದರೆ ಏನನ್ನು ಪಡೆಯಲು ಸಾಧ್ಯ ಎಂಬುದನ್ನು ಪುನೀತರಾಜಕುಮಾರ್ ರವರು ತೋರಿಸಿ ಹೋಗಿದ್ದಾರೆ.

ಇನ್ನು ಪುನೀತ್ ರಾಜಕುಮಾರ್ ರವರ ಒಂದು ತಿಂಗಳ ಪೂಜೆಯನ್ನು ಕುಟುಂಬಸ್ಥರೊಂದಿಗೆ ಸಲ್ಲಿಸಿರುವ ಅಶ್ವಿನಿ ಅವರು ತಮ್ಮ ಮಗಳು ಹೊಂದಿದ್ದ ಜೊತೆಗೆ ಅಪ್ಪು ಅವರಿಗೆ ಇಷ್ಟವಾಗಿರುವ ಊಟವನ್ನು ನೀಡಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದ ಎಲ್ಲಾ ಸಮಾಜ ಸೇವೆಗಳು ಶಕ್ತಿಧಾಮ ಪಿಆರ್ ಕೆ ಪ್ರೊಡಕ್ಷನ್ಸ್ ಹಾಗೂ ಪಿಆರ್ ಕೆ ಆಡಿಯೋ ಸಂಸ್ಥೆಯನ್ನು ತಾವೇ ಮುಂದುವರಿಸಿಕೊಂಡು ಹೋಗುವುದು ಈಗಾಗಲೇ ಅಶ್ವಿನಿ ಅವರು ಖಾತರಿ ಪಡಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.