ಬಿಗ್ ನ್ಯೂಸ್: ರಾಧೆಶ್ಯಾಮ್ ಮೂಲಕ ತನ್ನ ಜೀವನದ ದೊಡ್ಡ ಆಸೆ ಈಡೆಸಿಕೊಂಡೆ ಎಂದ ಪ್ರಭಾಸ್, ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಹುಬಲಿ ಮೂಲಕ ವಿಶ್ವದಲ್ಲಿಯೇ ಖ್ಯಾತಿ ಗಳಿಸಿದ ನಟ ಪ್ರಭಾಸ್. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್. ಬಾಹುಬಲಿ ನಂತರ ಬಂದ ಸಿನಿಮಾ ಸಾಹೋ ನೀರಿಕ್ಷಿತ ಯಶಸ್ಸನ್ನು ಕಂಡಿರಲಿಲ್ಲ. ಆದರೇ ನಂತರದಲ್ಲಿ ನಮ್ಮ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ರ ಸಲಾರ್ ಹಾಗೂ ವಂಶಿ ನಿರ್ದೇಶನದ ರಾಧೆ ಶ್ಯಾಮ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಭಾಸ್ ಆರಂಭದ ದಿನಗಳಿಂದಲೂ ಟಾಲಿವುಡ್ ಇಂಡಸ್ಟ್ರಿಯಲ್ಲಿ ಆಕ್ಷನ್ ಹೀರೋ. ಕೆಲವೊಂದು ಕಾಮಿಡಿ ಸಿನಿಮಾ ಮಾಡಿದರೂ, ಅದರಲ್ಲಿ ಹೇರಳವಾದ ಆಕ್ಷನ್ ದೃಶ್ಯಗಳು ಇರುತ್ತಿದ್ದವು. ಬಾಹುಬಲಿ ನಂತರವಂತೂ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾ ಹೀರೋ ಆಗಿಬಿಟ್ಟರು. ಇದೇ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಪ್ರಭಾಸ್, ತಾವು ಒಂದು ಪ್ಯಾನ್ ಇಂಡಿಯಾ, ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ಆಕ್ಷನ್ ಸಿನಿಮಾಗಳು ಬೋರ್ ತಂದಿವೆ ಎಂದು ಹೇಳಿದ್ದರು.
ಈಗ ಸದ್ಯ ಪ್ರಭಾಸ್ ಆಸೆ ಈಡೇರಿದೆ. ಅವರ ಹೊಸ ಸಿನಿಮಾ ರಾಧೆ ಶ್ಯಾಮ್, ಪಕ್ಕಾ ರೋಮ್ಯ್ಂಟಿಕ್ ಲವಸ್ಟೋರಿ ಸಿನಿಮಾವಂತೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಈ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ. ಆಶಿಕ್ ಆಗಯಿ ಎಂಬ ಹಾಡು ಬಹಳಷ್ಟು ಭಾರಿ ವೀಕ್ಷಣೆ ಆಗಿದೆ. ಚಿತ್ರದ ಕಲರ್ ಫುಲ್ ದೃಶ್ಯಗಳು, ರೋಮ್ಯಾಂಟಿಕ್ ಸೀನ್ ಗಳು ಪ್ರೇಕ್ಷಕರಿಗೆ ಮುದ ನೀಡಲು ಯಶಸ್ವಿಯಾಗಿವೆ. ಒಟ್ಟಿನಲ್ಲಿ ಪ್ರಭಾಸ್ ರವರ ಬಹುದಿನದ ಆಸೆಯೊಂದು ರಾಧೆಶ್ಯಾಮ್ ಚಿತ್ರದ ಮೂಲಕ ನೇರವೇರಿದೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.